‘ಲಾಲ್ ಸಿಂಗ್ ಚಡ್ಡಾ’ ಸಿನಿಮಾದ ಸೋಲಿನ ಬಳಿಕ ಬ್ರೇಕ್ ತೆಗೆದುಕೊಂಡಿದ್ದ ನಟ ಅಮೀರ್ ಖಾನ್ ಇದೀಗ ಮತ್ತೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ. ಸದ್ಯ ಅಮೀರ್ ಸೂಪರ್ ಹಿಟ್ ‘ಗಜನಿ’ ಸೀಕ್ವೆಲ್ ಮಾಡಲು ಮುಂದಾಗಿದ್ದು, ಅಲ್ಲು ಅರವಿಂದ್ ಜೊತೆ ಅಮೀರ್ ಕೈ ಜೋಡಿಸುತ್ತಿದ್ದಾರೆ.
2005ರಲ್ಲಿ ಬಂದ ತಮಿಳಿನ ‘ಗಜನಿ’ ಚಿತ್ರವನ್ನು ಅದೇ ಹೆಸರಲ್ಲಿ ಹಿಂದಿಗೆ 2008ರಲ್ಲಿ ರಿಮೇಕ್ ಮಾಡಲಾಯಿತು. ತಮಿಳಿನಲ್ಲಿ ಸೂರ್ಯ ಮಾಡಿದ್ದ ಪಾತ್ರವನ್ನು ಹಿಂದಿಯಲ್ಲಿ ಆಮಿರ್ ಖಾನ್ ಮಾಡಿದರು. ಇದೀಗ ಚಿತ್ರದ ಸೀಕ್ವೆಲ್ ಮಾಡಲು ಸಿದ್ಧತೆ ನಡೆದಿದೆ. ಆಮಿರ್ ಖಾನ್ ಅವರು ಸೀಕ್ವೆಲ್ನಲ್ಲಿ ನಟಿಸುತ್ತಿದ್ದು, ನಟ ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ಅವರು ಸಿನಿಮಾ ನಿರ್ಮಾಣ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.
ತಮಿಳಿನ ‘ಗಜನಿ’ ಚಿತ್ರವನ್ನು ನಿರ್ಮಾಣ ಮಾಡಿದ್ದ ಸೇಲಮ್ ಚಂದ್ರಶೇಖರನ್ 2021ರಲ್ಲಿ ನಿಧನರಾಗಿದ್ದಾರೆ. ಈ ಚಿತ್ರಕ್ಕೆ ಸೀಕ್ವೆಲ್ ಮಾಡಲು ಅಲ್ಲು ಅರವಿಂದ್ ಮುಂದಾಗಿದ್ದಾರೆ. ಈ ವಿಷ್ಯವಾಗಿಯೇ ಅಮೀರ್ ಪದೇ ಪದೇ ಹೈದರಾಬಾದ್ಗೆ ಭೇಟಿ ಅಲ್ಲು ಅರವಿಂದ್ ಜೊತೆ ಮಾತುಕತೆ ನಡೆಸುತ್ತಿದ್ದಾರೆ. ಕಥೆಯ ಬಗ್ಗೆ ತಂಡದ ಜೊತೆ ಆಮೀರ್ ಚರ್ಚೆ ಮಾಡ್ತಿದ್ದಾರೆ. ಹಿಂದಿಯ ‘ಗಜನಿ’ ಸಿನಿಮಾದಲ್ಲಿ ಅಮಿರ್ ಖಾನ್ ಸಂಜಯ್ ಸಿಂಘಾನಿಯಾ ಆಗಿ ಕಾಣಿಸಿಕೊಂಡಿದ್ದರು. ಈಗ ಚಿತ್ರದ ಕಥೆ ಮುಂದುವರಿಯಲಿದೆ. ಈ ರೀತಿಯಲ್ಲಿ ಕಥೆ ಸಿದ್ಧಪಡಿಸಲಾಗಿದೆ ಎನ್ನಲಾಗುತ್ತಿದೆ.