ವಾಷಿಂಗ್ಟನ್: ಜಾಕ್ ಡೋರ್ಸಿ ಅವರ ಬ್ಲಾಕ್ ಇಂಕ್ ಪಾವತಿ ಸಂಸ್ಥೆಯು ವ್ಯಾಪಕ ಅವ್ಯವಹಾರಗಳನ್ನು ಹಿಂಡೆನ್ ಬರ್ಗ ಸಂಸ್ಥೆ ವರದಿ ಮಾಡಿದ ಬೆನ್ನಲ್ಲೇ ಡೋರ್ಸಿ ಆಸ್ತಿ ಮೌಲ್ಯ 526 ಮಿಲಿಯಬ್ ಡಾಲರ್ ಕುಸಿತ ಕಂಡು ಬಂದಿದೆ. ಶೇ 11ರಷ್ಟು ಕುಸಿತಗೊಂಡಿರುವ ಡೋರ್ಸಿ ಸಂಪತ್ತು ಇದೀಗ 44 ಬಿಲಿಯನ್ ಡಾಲರ್ ಗೆ ಇಳಿಕೆಯಾಗಿದೆ ಎಂದು ಬ್ಲೂಂಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ತಿಳಿಸಿದೆ.
ಸಾಮಾಜಿಕ ಜಾಲತಾಣ ಟ್ವಿಟರ್ ಸಹಸಂಸ್ಥಾಪಕರಾಗಿರುವ ಜಾಕ್ ಡೋರ್ಸಿ ಅವರ ಹೆಚ್ಚಿನ ಸಂಪತ್ತು ಬ್ಲಾಕ್ ಸಂಸ್ಥೆಯೊಂದಿಗೆ ಜೋಡಿಕೆಯಾಗಿದೆ. ಟ್ವಿಟರ್ ಸಂಸ್ಥೆಯೊಂದಿಗೆ 3 ಬಿಲಿಯನ್ ಡಾಲರ್ ಪಾಲುದಾರಿಕೆ ಹೊಂದಿದ್ದರೆ ಇದೀಗ ಎಲಾನ್ ಮಸ್ಕ್ ಮುಖ್ಯಸ್ಥರಾಗಿರುವ ಟ್ವಿಟರ್ ನಲ್ಲಿ ಅವರ ಪಾಲುದಾರಿಕೆ ಮೊತ್ತ 388 ಮಿಲಿಯನ್ ಡಾಲರ್ ಆಗಿದೆ.