ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಸದ್ಯ ಟಾಲಿವುಡ್ ನ ಟಾಪ್ ಹೀರೋ. ಅಲ್ಲು ಅರ್ಜುನ್ ಜೊತೆ ಸಿನಿಮಾ ಮಾಡಲು ಖ್ಯಾತ ನಿರ್ದೇಶಕರೇ ಕ್ಯೂ ನಲ್ಲಿ ನಿಂತಿರ್ತಾರೆ. ಕರ್ನಾಟಕದ ಜೊತೆಗೆ ಭಾರತದಾದ್ಯಂತೆ. ಜೊತೆಗೆ ವಿದೇಶದಲ್ಲೂ ಅಲ್ಲು ಅರ್ಜುನ್ ಗೆ ಅಭಿಮಾನಿಗಳಿದ್ದಾರೆ. ಆದ್ರೆ ಆರಂಭದಲ್ಲಿ ಅವರಿಗೆ ಆಫರ್ಗಳೇ ಬರುತ್ತಿರಲಿಲ್ಲವಂತೆ. ಈ ಬಗ್ಗೆ ಅಲ್ಲು ಅರ್ಜುನ್ ಓಪನ್ ಆಗಿ ಹೇಳಿಕೊಂಡಿದ್ದಾರೆ. ಅಲ್ಲದೆ ಈ ಸಂದರ್ಭದಲ್ಲಿ ಸಹಾಯಕ್ಕೆ ಬಂದಿದ್ದು ಸುಕುಮಾರ್ ಎಂಬುದನ್ನು ಅಲ್ಲು ಅರ್ಜುನ್ ಹೇಳಿದ್ದಾರೆ.
ಅಲ್ಲು ಅರ್ಜುನ್ ಹಾಗೂ ಸುಕುಮಾರ್ ಮೊದಲ ‘ಆರ್ಯ’ ಸಿನಿಮಾದಲ್ಲಿ ಒಂದಾಗಿದ್ದರು. ಅಲ್ಲು ಅರ್ಜುನ್ ಗೆ ಇದು 2ನೇ ಸಿನಿಮಾವಾದರೇ, ಸುಕುಮಾರ್ಗೆ ಮೊದಲ ಸಿನಿಮಾ ಆಗಿತ್ತು. 2004ರಲ್ಲಿ ತೆರೆಕಂಡ ಈ ಸಿನಿಮಾ ಸೂಪರ್ ಹಿಟ್ ಆಗಿತ್ತು. ಬಳಿಕೆ 2009ರಲ್ಲಿ ‘ಆರ್ಯ 2’ ಚಿತ್ರಕ್ಕಾಗಿ ಒಂದಾದರು. 2021ರಲ್ಲಿ ರಿಲೀಸ್ ಆದ ‘ಪುಷ್ಪ’ ಚಿತ್ರದ ಬಳಿಕ ಸದ್ಯ ರಿಲೀಸ್ ಆಗುತ್ತಿರುವ ಪುಷ್ಪ 2ಗೂ ಒಂದಾಗಿದ್ದಾರೆ. ಈ ಮೂಲಕ ನಾಲ್ಕನೇ ಬಾರಿಗೆ ಅಲ್ಲು ಅರ್ಜುನ್. ಸುಕುಮಾರನ್ ಒಂದಾಗಿದ್ದಾರೆ.
ಚೆನ್ನೈನಲ್ಲಿ ‘ಪುಷ್ಪ 2’ ಈವೆಂಟ್ ನಡೆದಿದೆ. ಈ ವೇಳೆ ಮಾತನಾಡಿದ ಅಲ್ಲು ಅರ್ಜುನ್, ‘ಗಂಗೋತ್ರಿ ಸಿನಿಮಾ ಮೂಲಕ ನಾನು ಚಿತ್ರರಂಗಕ್ಕೆ ಕಾಲಿಟ್ಟೆ. ನಿರ್ದೇಶಕ ರಾಘವೇಂದ್ರ ರಾವ್ ಸೂಪರ್ ಹಿಟ್ ಆದರು. ಆದರೆ, ನಟನಾಗಿ ನಾನು ನಟನಾಗಿ ಯಶಸ್ಸು ಕಾಣಲಿಲ್ಲ’ ಎಂದಿದ್ದಾರೆ.
‘ಸಿನಿಮಾ ರಿಲೀಸ್ ಆದ ಬಳಿಕ ನನ್ನ ಜೊತೆ ಕೆಲಸ ಮಾಡಲು ಬರಲೇ ಇಲ್ಲ. ಆದರೆ, ಹೊಸ ನಿರ್ದೇಶಕ ಬಂದು ನನಗೆ ಆರ್ಯ ಸಿನಿಮಾದಲ್ಲಿ ಕೆಲಸ ಮಾಡಲು ಆಫರ್ ಕೊಟ್ಟರು. ಅದಾದ ಬಳಿಕ ನಾನು ತಿರುಗಿ ನೋಡಲೇ ಇಲ್ಲ’ ಎಂದಿದ್ದಾರೆ.
‘ನಾನು ನನ್ನ ಕರಿಯರ್ನ ಹಿಂದಿರುಗಿ ನೋಡಿದಾಗ ಓರ್ವ ವ್ಯಕ್ತಿ ನನ್ನ ಮೇಲೇ ತುಂಬಾನೇ ಪರಿಣಾಮ ಬೀರಿದ್ದಾರೆ. ಆ ವ್ಯಕ್ತಿ ಸುಕುಮಾರ್. ಅವರನ್ನು ನಾನು ಮಿಸ್ ಮಾಡಿಕೊಳ್ಳುತ್ತೇನೆ. ನಾವು ಈ ಪ್ರಯಾಣದಲ್ಲಿ ಒಟ್ಟಿಗೆ ಇದ್ದೇವೆ’ ಎಂದಿದ್ದಾರೆ ನಟ ಅಲ್ಲು ಅರ್ಜುನ್.