ಕಳೆದ ಎರಡು ದಿನಗಳ ಹಿಂದೆ ಬಾಲಿವುಡ್ ನಟಿ ಊರ್ವಶಿ ರೌಟೇಲಾ ಅವರ ಖಾಸಗಿ ವಿಡಿಯೋವೊಂದು ವೈರಲ್ ಆಗಿತ್ತು. ನಟಿ ಬಾತ್ರೂಮ್ನಲ್ಲಿ ಬಟ್ಟೆ ಬದಲಾಯಿಸುತ್ತಿರುವ ವಿಡಿಯೋ ಆದಾಗಿದ್ದು ಈ ಬೆನ್ನಲ್ಲೇ ನಟಿಯ ಮತ್ತೊಂದು ಘಟನೆ ನಡೆದಿದೆ. ವಿಡಿಯೋ ವೈರಲ್ ಆದ ಬೆನ್ನಲ್ಲೇ ಮ್ಯಾನೇಜರ್ ಜೊತೆಗಿನ ನಟಿಯ ಆಡಿಯೋ ಕೂಡ ಲೀಕ್ ಆಗಿದೆ. ಲೀಕ್ ಆಗಿರುವ ವಿಡಿಯೊದಲ್ಲಿ ಊರ್ವಶಿ ಮತ್ತು ಆಕೆಯ ಮ್ಯಾನೇಜರ್ ನಡುವಿನ ಮಾತುಕತೆ ಇದೆ. ಇದರಲ್ಲಿ ಘಟನೆಯನ್ನು ಊರ್ವಶಿ ಖಂಡಿಸಿದ್ದಾರೆ.
ಸಂಭಾಷಣೆಯಲ್ಲಿ, ಊರ್ವಶಿ ತನ್ನ ಮ್ಯಾನೇಜರ್ ಹತ್ತಿರ ನೀವು ವೀಡಿಯೊವನ್ನು ನೋಡಿದ್ದೀರಾ ಎಂದು ಕೇಳುತ್ತಾರೆ. ಅದಕ್ಕೆ ಮ್ಯಾನೇಜರ್, “ಹೌದು, ನಾನು ನೋಡಿದೆ ಮತ್ತು ತಂಡ ವೈರಲ್ ಆದ ವಿಡಿಯೊವನ್ನು ಡಿಲಿಟ್ ಮಾಡಲು ಪ್ರಯತ್ನಿಸುತ್ತಿದೆ.” ಎಂದಿದ್ದಾರೆ. ಆಗ ಊರ್ವಶಿ, “ಈ ವಿಷಯಗಳು ಹೇಗೆ ವೈರಲ್ ಆಗುತ್ತಿವೆ ಎಂದು ನನಗೆ ಅರ್ಥವಾಗುತ್ತಿಲ್ಲ. ನಾನು ತಕ್ಷಣ ಅವರೊಂದಿಗೆ ಕರೆ ಮಾಡಬೇಕಾಗಿದೆʼʼಎಂದಿದ್ದಾರೆ. ಆಗ ಮ್ಯಾನೇಜರ್ ʻʻಹೌದು, ಊರ್ವಶಿ ನನಗೆ ಗೊತ್ತು, ಇದು ತುಂಬಾ ದುಃಖದ ಪರಿಸ್ಥಿತಿ, ಆದರೆ ನಾವು ಈ ವಿಚಾರಗಳನ್ನು ಫೋನ್ನಲ್ಲಿ ಮಾತನಾಡಬಾರದು. ಜುಲೈ 19 ರಂದು ನೀವು ಹಿಂತಿರುಗಿದಾಗ ಈ ಬಗ್ಗೆ ಚರ್ಚಿಸೋಣʼʼಎನ್ನುತ್ತಾರೆ. ಆಗ ಊರ್ವಶಿ “ಯಾಕೆ?” ಎಂದು ಪ್ರಶ್ನಿಸಿದಾಗ, ಮ್ಯಾನೇಜರ್ “ಏನಾಗುತ್ತಿದೆ ಎಂಬುದರ ಬಗ್ಗೆ ಯಾರಿಗೂ ಸ್ಪಷ್ಟವಾಗಿಲ್ಲ, ನೀವು ಬಂದ ಬಳಿಕ ನಿಮ್ಮೊಂದಿಗೆ ವೈಯಕ್ತಿಕವಾಗಿ ಮಾತನಾಡುತ್ತೇನೆ.” ಎಂಬ ಸಂಭಾಷಣೆ ಇದೀಗ ಲೀಕ್ ಆಗಿದೆ.
ಸೋಶಿಯಲ್ ಮೀಡಿಯಾ ಲೀಕ್ ಆದ ಆಡಿಯೋವನ್ನು ವಿಡಿಯೋ ರೀತಿಯಲ್ಲಿ ವೈರಲ್ ಮಾಡಲಾಗುತ್ತಿದೆ.
ಇದಕ್ಕೂ ಮುಂಚೆ ಊರ್ವಶಿ ಅವರ ಸ್ನಾನ ಮಾಡುತ್ತಿರುವ ವಿಡಿಯೊ ವೈರಲ್ ಆಗಿತ್ತು. ಅನೇಕರು ವೀಡಿಯೊ ಕಂಡು PR ಸ್ಟಂಟ್ ಎಂದು ಹೇಳುತ್ತಿದ್ದರು. ಊರ್ವಶಿ ವೀಡಿಯೋದಲ್ಲಿ ಮಂಗಳಸೂತ್ರ ಬೇರೆ ಧರಿಸಿದ್ದರು. ಹೀಗಾಗಿ ಇದು ಫೇಕ್ ಎಂದು ಹೇಳಲಾಗಿತ್ತು.