ಕಲಬುರಗಿ : ಹೊಲಕ್ಕೆ ನುಗ್ಗಿದ್ದ ಜೀವಂತ ಮೊಸಳೆಯನ್ನು ರೈತರೇ ಹಿಡಿದು ಜೆಸ್ಕಾಂ ಕಚೇರಿಗೆ ತಂದು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ. ಕಲಬುರಗಿ ಅಫ್ಜಲ್ ಪುರ ತಾಲೂಕಿನ ಗೊಬ್ಬೂರ್ ಗ್ರಾಮದಲ್ಲಿ ಘಟನೆ ನಡೆದಿದೆ.
ಬೆಳಗಿನ ಜಾವ 4 ಗಂಟೆಗೆ ಪೂಜಾರಿ ಎಂಬಾತ ಗೋಧಿಗೆ ನೀರು ಬಿಡಲು ಹೋದಾಗ ಮೊಸಳೆ ಪ್ರತ್ಯಕ್ಷವಾಗಿದೆ. ಕೂಡಲೇ ಎಲ್ಲರು ಸೇರಿ ಮೊಸಳೆಯನ್ನ ಕಟ್ಟಿ ಹಾಕಿ ಜೆಸ್ಕಾಂ ಕಚೇರಿ ಮುಂಭಾಗದಲ್ಲಿಟ್ಟು ಪ್ರತಿಭಟನೆ ನಡೆಸಿದ್ದಾರೆ.
ನಸುಕಿನ ಜಾವ ವಿದ್ಯುತ್ ಮಾಡಿದ್ರೆ ಕತ್ತಲಲ್ಲಿ ರೈತರ ಜೀವಕ್ಕೆ ಏನಾದ್ರು ಆದ್ರೆ ಹೊಣೆ ಯಾರು ಅಂತ ಆರೋಪಿಸಿದ್ದಾರೆ. ಹೀಗಾಗಿ ಆರು ಗಂಟೆಯವರೆಗೆ ವಿದ್ಯುತ್ ನೀಡುವಂತೆ ಆಗ್ರಹಿಸಿದ್ದಾರೆ
