ಬೆಂಗಳೂರು: ಭವಿಷ್ಯದಲ್ಲಿ ಕೃಷಿ ಕುರಿತು ಚಿಂತನಾ ಸಭೆಯನ್ನು ನಡೆಸಲಾಯಿತು. ಕೃಷಿ ಸಚಿವ ಚಲುವರಾಯಸ್ವಾಮಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಭವಿಷ್ಯದಲ್ಲಿ ಕೃಷಿಗೆ ಬೇಕಾಗುವ ಸಾಮಾಗ್ರಿಗಳು ಅದರ ಅಭಿವೃದ್ಧಿ ಬಗ್ಗೆ ಸಮಾಲೋಚನೆ ನಡೆಸಲಾಯಿತು.agriculture-minister-who-will-hold-a-think-tank-on-agriculture-in-the-future/
ವಿಧಾನಸೌಸದ ಕೃಷಿ ಇಲಾಖೆಯ ಸಮೃದ್ಧಿ ಸಭಾಂಗಣದಲ್ಲಿ ಕೃಷಿ ಸಚಿವರಾದ ಚಲುವರಾಯಸ್ವಾಮಿಯವರ ಅಧ್ಯಕ್ಷತೆಯಲ್ಲಿ ಕೃಷಿ ಇಲಾಖೆಯನ್ನು ನೂತನ ಕಾರ್ಯಕ್ರಮಗಳಿಂದ ಕೂಡಲೇ ರೈತರನ್ನು ತಲುಪಲು ಡಾ. ಅಶೋಕ್ ದಳವಾಯಿ, ಸಿಇಒ, ರಾಷ್ಟ್ರೀಯ ಒಣಬೇಸಾಯ ಅಭಿವೃದ್ಧಿ ಪ್ರಾಧಿಕಾರ, ಹಾಗೆ ಹಿರಿಯ ಅಧಿಕಾರಿಗಳಡನೆ ಚಿಂತನ ಮಂಥನ ಸಭೆ ನಡೆಸಿದರು.
ಸಭೆಯಲ್ಲಿ ಶ್ರೀ ವೈ.ಎಸ್.ಪಾಟೀಲ್ ಆಯುಕ್ತರು, ಕೃಷಿ ಇಲಾಖೆ, ಶ್ರೀ ಗಿರೀಶ್, ಆಯುಕ್ತರು, ಜಲಾನಯನ ಅಭಿವೃದ್ಧಿ ಇಲಾಖೆ, ಶ್ರೀ ಜಿ.ಟಿ.ಪುತ್ರ, ನಿರ್ದೇಶಕರು, ಕೃಷಿ ಇಲಾಖೆ, ಶ್ರೀ ಶ್ರೀನಿವಾಸ್, ನಿರ್ದೇಶಕರು, ಜಲಾನಯನ ಅಭಿವೃದ್ಧಿ ಇಲಾಖೆ, ಶ್ರೀ ಭಂಟ್ನಾಳ್, ವ್ಯವಸ್ಥಾಪಕ ನಿರ್ದೇಶಕರು, ಕೆಪೆಕ್ ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಸಭೆಯಲ್ಲಿ ಹೊರಡಿಸಿದ ಮಾರ್ಗಸೂಚಿಗಳು ಇಲ್ಲಿದೆ:
- ಜಲಾನಯನ ಅಭಿವೃದ್ಧಿ ಇಲಾಖೆಯಲ್ಲಿ ರೈತ ಉತ್ಪಾದಕ ಸಂಸ್ಥೆಗಳಿಗೆ ವಿವಿಧ ಯೋಜನೆಗಳಲ್ಲಿ ದೊರೆಯುವ ಸೌಕರ್ಯಗಳನ್ನು ಒಂದೇ ಸೂರಿನಡಿಯಲ್ಲಿ ಪೂರೈಸಲು PMFME, AIF, MSME, FOOD PROCESSING UNITS ಮುಂತಾದವುಗಳನ್ನು ಸಂಯೋಜಿಸಿ ಮಾರ್ಗ ಸೂಚಿಗಳನ್ನು ಹೊರಡಿಸಲು ಆಯುಕ್ತರು, ಜಲಾನಯನ ಅಭಿವೃದ್ಧಿ ಇಲಾಖೆ ಇವರಿಗೆ ತಿಳಿಸಲಾಯಿತು.
- ರೈತರು ಬೆಳೆದ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಿ ರಫ್ತು ಮಾಡುವುದರಿಂದ ರೈತರ ಆದಾಯವನ್ನು ಹೆಚ್ಚಿಸಲು ಸಾಧ್ಯವಾಗುವುದರಿಂದ ಕೂಡಲೇ ಕೃಷಿ ಆಯುಕ್ತರು ರಾಜ್ಯದಲ್ಲಿ ನೂತನವಾದ ಕರ್ನಾಟಕ ರಾಜ್ಯ ಕೃಷಿ ರಫ್ತು ನೀತಿಯನ್ನು ತಯಾರಿಸಲು ತಜ್ಞರ ಸಮಿತಿಯನ್ನು ರಚಿಸಿ ಕ್ರಮ ಜರುಗಿಸುವಂತೆ ತಿಳಿಸಲಾಯಿತು.
3.ರಾಜ್ಯದ ಪ್ರತಿಯೊಬ್ಬ ರೈತನು ಸ್ವಾಭಿಮಾನದಿಂದ ಕೃಷಿ ಚಟುವಟಿಕೆ ಮಾಡಲು ಪ್ರಸ್ತುತ FRUITS ID ಯಲ್ಲಿ ಲಭ್ಯವಿರುವ ಹಾಗೂ ಉಳಿದ ಎಲ್ಲಾ ರೈತರನ್ನು ಸೇರಿಸಿ ಕಿಸಾನ್ ಕ್ರೆಡಿಟ್ ಕಾರ್ಡ್ ಮಾದರಿಯಲ್ಲಿ ರೈತರಿಗೆ ಐ.ಡಿ ಕಾರ್ಡನ್ನು ಮಾಡಲು ಅವಕಾಶವಿದ್ದಲ್ಲಿ, ಕೃಷಿ ಆಯುಕ್ತರು ಸೂಕ್ತ ಕ್ರಮ ಜರುಗಿಸುವುದು.
4.ರೈತ ಸಂಪರ್ಕ ಕೇಂದ್ರವಿರುವ ಗ್ರಾಮಗಳಲ್ಲಿ ಗ್ರಾಮೀಣ ರೈತ ಸಂತೆ ನಡೆಸಲು ಕೃಷಿ ಇಲಾಖೆ ಮೂಲಕ ಕೇಂದ್ರ ಸರ್ಕಾರದ ಗ್ರಾಮೀಣ ಯೋಜನೆ ಅಂಗವಾಗಿ ಮಾಡಬಹುದಾಗಿರುವ ಅವಕಾಶಗಳನ್ನು ಚರ್ಚಿಸಿ ಕ್ರಮ ಜರುಗಿಸುವುದು.
- ಮುಂಬರುವ ದಿನಗಳಲ್ಲಿ ಕೃಷಿ ಉತ್ಪಾದನೆಯನ್ನು ಹೆಚ್ಚಿಸಲು ರಾಷ್ಟ್ರೀಯ ಕೃಷಿ ಭದ್ರತಾ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರದ ಡ್ರಾಟ್ ಪ್ರೂಫಿಂಗ್ ಯೋಜನೆಯಡಿಯಲ್ಲಿ ಬರುವ ಅನುದಾನದಿಂದ ವಿಶೇಷ ಯೋಜನೆಗಳನ್ನು ಒಣಬೇಸಾಯದಲ್ಲಿ ವಿಶೇಷವಾಗಿ ಬೇಳೆಕಾಳು ಹಾಗೂ ಸಿರಿಧಾನ್ಯಗಳ ಕೃಷಿ ಉತ್ಪಾದನೆಯನ್ನು ಹೆಚ್ಚಿಸಲು ಕಾರ್ಯಕ್ರಮ ರೂಪಿಸುವುದು.
6.ಆಂಧ್ರ ಪ್ರದೇಶದ ನೆರೆ ರಾಜ್ಯದಲ್ಲಿ ಪ್ರಾರಂಭಿಸಿದ ರೈತರ ಭರವಸೆ ಕೇಂದ್ರಗಳ ಮಾದರಿಯಲ್ಲಿ ನಮ್ಮ ರಾಜ್ಯದಲ್ಲಿಯೂ ಕೂಡ ಸದರಿ ಯೋಜನೆಗಳನ್ನು ರೂಪಿಸಲು ಕೃಷಿ ಆಯುಕ್ತರು ಹಿರಿಯ ಅಧಿಕಾರಿಗಳ ತಂಡವನ್ನು ರಚಿಸಿ ಆಂಧ್ರ ಪ್ರದೇಶದಲ್ಲಿ ಅಧ್ಯಯನ ಮಾಡಿಸಿ ಸರ್ಕಾರಕ್ಕೆ ವರದಿ ಸಲ್ಲಿಸುವುದು.
- ಕೇಂದ್ರ ಸರ್ಕಾರದ ಅಧೀನದಲ್ಲಿ ಸೂಕ್ಷ್ಮ ನೀರಾವರಿ ಕಾರ್ಪಸ್ ಫಂಡ್ ಅಡಿಯಲ್ಲಿ ಸಾಕಷ್ಟು ಅನುದಾನ ಲಭ್ಯವಿರವುದರಿಂದ ಸದರಿ ಯೋಜನೆಯಡಿ ರಾಜ್ಯ ಸರ್ಕಾರದಿಂದ ಪ್ರಸ್ತಾವನೆಯನ್ನು ಸಲ್ಲಿಸಿ ಕಡಿಮೆ ಬಡ್ಡಿದರದಲ್ಲಿ ಸಾವಿರಕ್ಕೂ ಹೆಚ್ಚು ಕೋಟಿಗಳ ಅನುದಾನವನ್ನು ಪಡೆಯಬಹುದಾಗಿದೆ ಎಂದು ಡಾ. ದಳವಾಯಿ ತಿಳಿಸಿದರು. ಈ ಕುರಿತು ಕೃಷಿ ಆಯುಕ್ತರು, ಹಣಕಾಸು ಇಲಾಖೆಯವರೊಡನೆ ಚರ್ಚಿಸಿ ಸೂಕ್ತ ಕ್ರಮ ಜರುಗಿಸುವುದು.
- ಫ್ರ್ರೂಟ್ಸ್ ಆಪ್ ನ್ನು ಈ ಗೌರ್ಙೆನೆನ್ಸ್ ಅಧಿಕಾರಿಗಳೊಡನೆ ಚರ್ಚಿಸಿ ರಾಜ್ಯದ ರೈತರ ಪ್ರತಿಯೊಂದು ಸರ್ವೆ ನಂಬರ್ ಹಾಗು ಸಬ್ ಸರ್ವೆ ನಂಬರ್ ಗಳಿಗೆ ಫ್ರೂಟ್ಸ್ ಐಡಿಗಳನ್ನು ನೀಡಿ ಸಂಪೂರ್ಣ ರೈತರ ಜಮೀನುಗಳ ಮಾಹಿತಿಯನ್ನು ಡಿಜಟಲೀಕರಣ ಮಾಡಿ ರಾಜ್ಯದ ವಿವಿಧ ಯೋಜನೆಗಳಲ್ಲಿ ಫಲಾನುಭವಿಗಳಿಗೆ ಸಲ್ಲುವ ಪರಿಹಾರವನ್ನು ಅತಿ ಶೀಘ್ರವಾಗಿ ಕಡಿಮೆ ಅವಧಿಯಲ್ಲಿ ತಲುಪಿಸಲು ಸೂಕ್ತ ಕ್ರಮ ಜರುಗಿಸುವುದು.
![Demo](https://prajatvkannada.com/wp-content/uploads/2023/08/new-Aston-Band.jpeg)