ಅನ್ನದಿಂದ ಮಾಡುವ ಪದಾರ್ಥಗಳು ಕೆಲವರಿಗೆ ತುಂಬಾ ಇಷ್ಟವಾಗುತ್ತದೆ. ಏಕೆಂದರೆ ಹೊಟ್ಟೆ ತುಂಬುತ್ತದೆ ನಾಲಿಗೆಗೂ ರುಚಿ ಸಿಗುತ್ತದೆ ಎಂದು ಹಲವರು ಹೇಳುತ್ತಾರೆ. ಫಲಾವ್, ಚಿತ್ರಾನ್ನ, ಪುಳಿಯೋಗರೆ ಪ್ರತಿದಿನ ತಿಂದು ನಾಲಿಗೆ ರುಚಿ ಕೆಟ್ಟು ಹೋಗಿದೆ. ಇಂದು ಏನಾದ್ರೂ ಹೊಸ ರುಚಿಯ ಅಡುಗೆ ತಿನ್ನಬೇಕು ಅದು ಅನ್ನದಿಂದಲೇ ಮಾಡಿರುವ ಅಡುಗೆಯಾಗಿರಬೇಕು ಎಂದು ಯೋಚಿಸುವ ನಿಮಗೆ ತಟ್ಟನೇ ಮಾಡಬೇಕು ಎಂದರೆ ಯಾವ ಅಡುಗೆಯು ನೆನಪಿಗೆ ಬರುವುದಿಲ್ಲ.
ಚಿತ್ರಾನ್ನ, ಫಲಾವ್ ಮಾಡಿ ಮಾತ್ರ ಗೊತ್ತಿರುವ ನಮಗೆ ಹೊಸ ಅಡುಗೆ ಸವಿಯ ಬೇಕೆಂದರೆ ಹೋಟೆಲ್ಗಳ ಮೊರೆ ಹೋಗುತ್ತೇವೆ. ಆದರೆ ಇಂದು ಮನೆಯಲ್ಲಿಯೇ ಸರಳವಾಗಿ ಮಾಡುವ ಪನ್ನೀರ್ ಬಿರಿಯಾನಿಯನ್ನು ಟ್ರೈ ಮಾಡಲು ಇಲ್ಲಿದೆ ಮಾಡುವ ವಿಧಾನ.
ಬೇಕಾಗುವ ಸಾಮಗ್ರಿಗಳು:
* ಪನ್ನೀರ್ – 2 ಕಪ್
* ಅಕ್ಕಿ – 2 ಕಪ್
* ಬಟಾಣಿ ಕಾಳು – ಅರ್ಧ ಕಪ್
* ಶುಂಠಿ,ಬೆಳ್ಳುಳ್ಳಿ ಮಿಶ್ರಣ – 1 ಟೀ ಸ್ಪೂನ್
* ಮೊಸರು – 2 ಕಪ್
* ಹಸಿಮೆಣಸು- 4
* ಅರಿಶಿನ ಪುಡಿ – ಅರ್ಧ ಟೀ ಸ್ಪೂನ್
* ಮೆಣಸಿನ ಪುಡಿ – ಅರ್ಧ ಟೀ ಸ್ಪೂನ್
* ಗರಂ ಮಸಾಲಾ ಪುಡಿ- ಅರ್ಧ ಟೀ ಸ್ಪೂನ್
* ಏಲಕ್ಕಿ ಪುಡಿ – 2
* ಪಲಾವ್ ಎಲೆ – 1 (ಒಣ ಎಲೆ)
* ಲವಂಗ – 2
* ಕಾಳುಮೆಣಸು-3ರಿಂದ 4
* ಲಿಂಬೆಹಣ್ಣಿನ ರಸ – 3 ಟೀ ಸ್ಪೂನ್
* ಕೇಸರಿ – ಅರ್ಧ
* ಹಾಲು – ಅರ್ಧ ಕಪ್
* ಕೊತ್ತಂಬರಿ ಸೊಪ್ಪು – ಸ್ವಲ್ಪ
* ಪುದಿನಾ ಸೊಪ್ಪು- ಸ್ವಲ್ಪ
* ತುಪ್ಪ – ಅರ್ಧ ಕಪ್
* ರುಚಿಗೆ ತಕ್ಕಷ್ಟು ಉಪ್ಪು
ಮಾಡುವ ವಿಧಾನ:
* ಒಂದು ಬಾಣಲೆಯಲ್ಲಿ ತುಪ್ಪ ಹಾಕಿ ಬಿಸಿಮಾಡಿ. ತುಪ್ಪ ಕರಗಿದ ಬಳಿಕ ಹಸಿಮೆಣಸು, ಶುಂಠಿ ಬೆಳ್ಳುಳ್ಳಿ ಮಿಶ್ರಣ ಸೇರಿಸಿ ಹುರಿಯಿರಿ. ಕೆಲವು ಕ್ಷಣಗಳ ಬಳಿಕ ಪನ್ನೀರ್ ತುಂಡುಗಳನ್ನು ಸೇರಿಸಿ ಹುರಿಯಿರಿ.
* ಒಂದು ಕುಕ್ಕರ್ ತೆಗೆದುಕೊಂಡು ತುಪ್ಪವನ್ನು ಹಾಕಿ ಬಿಸಿಯಾದ ನಂತರ ಪಲಾವ್ ಎಲೆ, ಲವಂಗ ಮತ್ತು ಕಾಳುಮೆಣಸು. ಅರಿಶಿಣ ಹಾಕಿ ಚೆನ್ನಾಗಿ ಫ್ರೈ ಮಾಡಿ.
* ನಂತರ ಮೊಸರು, ಉಪ್ಪು, ಮೆಣಸಿನ ಪುಡಿ, ಅರಿಸಿನ ಪುಡಿ, ಗರಂ ಮಸಾಲಾ ಪುಡಿ ಮತ್ತು ಲಿಂಬೆರಸವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಬಳಿಕ ಈ ಮೊದಲು ಫ್ರೈ ಮಾಡಿಟ್ಟ ಪನ್ನೀರ್ ತುಂಡುಗಳನ್ನು ಸೇರಿಸಿ ಬೇಯಿಸಿ.
* ನಂತದ ಅಕ್ಕಿ ಹಾಕಿ ಅಳತೆಗೆ ತಕ್ಕಂತೆ ನೀರು ಹಾಕಿ, ಬಣಾಟಿ, ಗರಂ ಮಸಾಲೆ ಪುಡಿ, ಏಲಕ್ಕಿ ಪುಡಿ, ಹಾಲು, ಕೇಸರಿ, ಕೊತ್ತಂಬರಿ ಮತ್ತು ಪುದಿನಾ ಸೊಪ್ಪು, ಹರಡಿ ಕೊನೆಯಲ್ಲಿ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಬೇಕಾದಲ್ಲಿ ಸ್ವಲ್ಪ ತುಪ್ಪವನ್ನು ಸೇರಿಸಿ 2 ವಿಶಲ್ ಹಾಕಿಸಿದರೆ ಈಗ ರುಚಿಯಾ ಪನ್ನೀರ್ ಬಿರಿಯಾನಿ ಸವಿಯಲು ಸಿದ್ಧವಾಗುತ್ತದೆ.