ಅಹಮದಾಬಾದ್: ವಿಶ್ವಕಪ್ನ (ICC ODI WorldCup) ಭಾರತ-ಪಾಕ್ ನಡುವಿನ ಪಂದ್ಯ ಹಾಗೂ ಫೈನಲ್ ಪಂದ್ಯ ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ (Narendra Modi Stadium) ನಡೆಯುವುದು ಖಚಿತಗೊಂಡ ಬೆನ್ನಲ್ಲೇ ನಗರದಲ್ಲಿ ಹೋಟೆಲ್ ರೂಮ್ಗಳ ಬೆಲೆ ಗಗನಕ್ಕೇರಿದೆ.
ಸಾಮಾನ್ಯವಾಗಿ ಪಂಚತಾರಾ ಹೋಟೆಲ್ಗಳಲ್ಲಿ (Hotels) ಒಂದು ರಾತ್ರಿ ಉಳಿಯಲು 6,500-10,000 ರೂ. ಇರುವ ಬೆಲೆ ಅ.13ರಿಂದ 16ರ ನಡುವೆ ಬರೋಬ್ಬರಿ 50 ಸಾವಿರದಿಂದ 1 ಲಕ್ಷ ರೂ. ವರೆಗೂ ಏರಿಕೆಯಾಗಿದೆ. ಬೆಲೆ ಗಗನಕ್ಕೇರಿದ್ದರೂ ನಗರದ ಹೋಟೆಲ್ಗಳು ಶೇ. 80 ರಷ್ಟು ಮುಂಗಡ ಬುಕಿಂಗ್ ಆಗಿವೆ ಎನ್ನಲಾಗಿದೆ.
ವಿಶ್ವಕಪ್ ವೇಳಾಪಟ್ಟಿ ಬಿಡುಗಡೆಯಾಗಿದ್ದು, ಅಕ್ಟೋಬರ್ 15 ರಂದು ಭಾರತ-ಪಾಕಿಸ್ತಾನ ತಂಡಗಳ ರಣರೋಚಕ ಪಂದ್ಯ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕ್ರಿಕೆಟ್ ಅಭಿಮಾನಿಗಳು ಮುಂಚಿತವಾಗಿಯೇ ಕ್ರೀಡಾಂಗಣಕ್ಕೆ ಹತ್ತಿರದ ಹೋಟೆಲ್ಗಳಲ್ಲಿ (Ahmedabad Hotels) ರೂಮ್ಗಳನ್ನ ಬುಕಿಂಗ್ ಮಾಡೋಕೆ ಶುರು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ರೂಮ್ ಬುಕಿಂಗ್ ಬೆಲೆ ಸಾಮಾನ್ಯ ಅವಧಿಗಿಂತ ಸುಮಾರು 10 ಪಟ್ಟು ಹೆಚ್ಚಾಗಿದೆ.
ಸಾಮಾನ್ಯ ದಿನಗಳಲ್ಲಿ ಐಷಾರಾಮಿ ಹೋಟೆಲ್ಗಳಲ್ಲಿ ರೂಮ್ ಬಾಡಿಗೆ 5 ರಿಂದ 8 ಸಾವಿರ ವರೆಗೆ ಇರುತ್ತಿತ್ತು. ಆದ್ರೆ ಅಕ್ಟೋಬರ್ 15ರ ವೇಳೆ 40 ಸಾವಿರದಿಂದ 1 ಲಕ್ಷಕ್ಕೆ ಏರಿಕೆಯಾಗಿದೆ.