ಮಾರಕ ರೋಗವಾಗಿರುವ ಏಡ್ಸ್ ನಿಂದ ಪ್ರತಿನಿಮಿಷಕ್ಕೆ ಒಬ್ಬರು ಮೃತಪಡುತ್ತಿದ್ದಾರೆ ಎಂಬ ಶಾಕಿಂಗ್ ವರದಿ ಬಹಿರಂಗವಾಗಿದೆ.
2023ರಲ್ಲಿ ಏಡ್ಸ್ಗೆ ಕಾರಣವ ಅಗಿರುವ ಎಚ್ಐವಿ ವೈರಸ್ನೊಂದಿಗೆ ಸುಮಾರು 4 ಕೋಟಿ ಜನರು ಜೀವಿಸುತ್ತಿದ್ದು, ಅವರಲ್ಲಿ 90 ಲಕ್ಷ ಜನರು ಯಾವುದೇ ಚಿಕಿತ್ಸೆ ಪಡೆದುಕೊಂಡಿಲ್ಲ. ಪರಿಣಾಮ ಪ್ರತಿ ನಿಮಿಷಕ್ಕೆ ಒಬ್ಬರು ಏಡ್ಸ್ಗೆ ಸಂಬಂಧಿಸಿದ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ ಎಂದು ವಿಶ್ವಸಂಸ್ಥೆ ವರದಿ ಮಾಡಿದ್ದು ಜಗತ್ತಿನಲ್ಲಿ ಏಡ್ಸ್ ಸಾಂಕ್ರಾಮಿಕ ರೋಗವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಪ್ರಗತಿ ಸಾಧಿಸುತ್ತಿರುವಾಗ ಈ ಸುದ್ದಿ ಬೆಚ್ಚಿ ಬೀಳಿಸುತ್ತಿದೆ.
ಹಣದ ಕೊರತೆಯೇ ಇದಕ್ಕೆ ಕಾರಣ. ಈ ಕಾರಣದಿಂದಾಗಿ, ಮಧ್ಯಪ್ರಾಚ್ಯ, ಉತ್ತರ ಆಫ್ರಿಕಾ, ಪೂರ್ವ ಯುರೋಪ್, ಮಧ್ಯ ಏಷ್ಯಾ ಮತ್ತು ಲ್ಯಾಟಿನ್ ಅಮೇರಿಕದಲ್ಲಿನ ಹೊಸ ಪ್ರದೇಶಗಳಲ್ಲಿ ಸೋಂಕು ಹೆಚ್ಚುತ್ತಿದೆ. ಕಳೆದ ವರ್ಷ 6 ಲಕ್ಷಕ್ಕೂ ಹೆಚ್ಚು ಜನರು ಏಡ್ಡ್ ರೋಗದಿಂದ ಮೃತಪಟ್ಟಿದ್ದರು ಎಂದು ವಿಶ್ವಸಂಸ್ಥೆ ವರದಿಯಲ್ಲಿ ಉಲ್ಲೇಖಿಸಿದೆ.
2023 ರಲ್ಲಿ ಸುಮಾರು 6,30,000 ಜನರು ಏಡ್ಸ್ ಸಂಬಂಧಿತ ಕಾಯಿಲೆಗಳಿಂದ ಸಾವನ್ನಪ್ಪಿದ್ದಾರೆ. ಇದು 2004 ರಲ್ಲಿ ಕಂಡ 21 ಲಕ್ಷ ಸಾವುಗಳಿಗಿಂತ ಕಡಿಮೆಯಾಗಿದೆ. 2030 ರ ವೇಳೆಗೆ ಏಡ್ಸ್ ಅನ್ನು ಕೊನೆಗೊಳಿಸುವುದಾಗಿ ಜಾಗತಿಕ ನಾಯಕರು ಪ್ರತಿಜ್ಞೆ ಮಾಡಿದ್ದಾರೆ ಎಂದು UNAIDS ಕಾರ್ಯನಿರ್ವಾಹಕ ನಿರ್ದೇಶಕಿ ವಿನ್ನಿ ಬೈನಿಮಾ ಹೇಳಿದ್ದಾರೆ . ಲಿಂಗ ಅಸಮಾನತೆಯು ಆಫ್ರಿಕಾದ ಕೆಲವು ಭಾಗಗಳಲ್ಲಿ ಹದಿಹರೆಯದ ಹುಡುಗಿಯರು ಮತ್ತು ಯುವತಿಯರಲ್ಲಿ ಹೆಚ್ಚಿದ HIV ಪ್ರಕರಣಗಳಿಗೆ ಕಾರಣವಾಗಿದೆ.
ಅಂಚಿನಲ್ಲಿರುವ ಸಮುದಾಯಗಳಲ್ಲಿ ಜಾಗತಿಕವಾಗಿ ಹೊಸ ಸೋಂಕುಗಳ ಪ್ರಮಾಣವು 2010 ರಲ್ಲಿ 45% ರಿಂದ 2023 ರಲ್ಲಿ 55% ಕ್ಕೆ ಹೆಚ್ಚಾಗುತ್ತದೆ ಎಂದು ಅಂದಾಜಿಸಲಾಗಿದೆ. ಒಂದು ವರ್ಷಕ್ಕೆ ಎರಡು ಚುಚ್ಚುಮದ್ದುಗಳ ಬೆಲೆ 40,000 ಡಾಲರ್ (33.47 ಲಕ್ಷ ರೂ.) ಇದು ಸಾಮಾನ್ಯರಿಗೆ ನಿಲುಕದ್ದಾಗಿದೆ.