ಬೆಂಗಳೂರು: ರಾಜ್ಯದ 3 ಪಕ್ಷಗಳ ಲೋಕಸಭಾ ಅಖಾಡ ಒಂದು ಹಂತಕ್ಕೆ ಬಂದು ನಿಂತಿದೆ, ಕಾಂಗ್ರೆಸ್ ನ 4 ಟಿಕೆಟ್ ಕಗ್ಗಂಟು ಕ್ಲಿಯರ್ ಆಗ್ತಿದ್ದು. ಬಿಜೆಪಿಯ 5 ಕ್ಷೇತ್ರಳ ಟೆನ್ಷನ್ ಇನ್ನು ಮುಗಿದಿಲ್ಲ, ದಳಪತಿಗಳಿಗೆ ಸಕ್ಕರೆ ನಾಡು ಮಂಡ್ಯವೇ ಕಹಿಯಾಗಿದೆ. ಮಂಡ್ಯದ ಗೌಡ್ತಿ ಸುಮಲತಾಗೆ ಟಿಕೆಟ್ ಕೈತಪ್ಪಿದ್ದು ಕನ್ಫರ್ಮ್ ಆಗ್ತಿದ್ದಂತೆ ಬಂಡಾಯದ ಬಾವುಟ ಹಾರಿಸಲು ರೆಡಿಯಾಗ್ತಿದ್ದಾರೆ ಇದು ಜೆಡಿಎಸ್ ನಾಯಕರಿಗೆ ತಲೆಬಿಸಿ ತಂದೊಡ್ಡಿದೆ. ಈ ಮಧ್ಯೆ ಮಂಡ್ಯದಿಂದ ಕುಮಾರಸ್ವಾಮಿ ಸ್ಪರ್ಧಿಸಿ ಅಂತಾ ಒತ್ತಡ ಹೆಚ್ಚಾಗ್ತಿದೆ.
ರಾಜ್ಯದಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ನ ಅಭ್ಯರ್ಥಿಗಳ ಆಯ್ಕೆ ಕಗ್ಗಂಟು ಇನ್ನು ಮುಗಿದಿಲ್ಲ. ಕಾಂಗ್ರೆಸ್ ತನ್ನ 24 ಅಭ್ಯರ್ಥಿಗಳನ್ನ ಘೋಷಿಸಿ 4ನ್ನು ಪೆಡ್ಡಿಂಗ್ ಇಟ್ಟಿದೆ. ಬಿಜೆಪಿ 25 ರಲ್ಲಿ 20 ಕ್ಷೇತ್ರ ಘೋಷಿಸಿ 5 ಕ್ಷೇತ್ರ ಪೆಂಡಿಂಗ್ ಇಟ್ಟಿದೆ. ಜೆಡಿಎಸ್ ತನಗೆ ಸಿಕ್ಕಿರೋ 3 ಕ್ಷೇತ್ರಗಳಲ್ಲಿ ಹಾಸನ. ಕೋಲಾರಕ್ಕೆ ಕ್ಯಾಂಡಿಡೇಟ್ ಗಳನ್ನು ಫೈನಲ್ ಮಾಡಿದ್ರೆ ಸಕ್ಕರೆಯ ನಾಡು ಮಂಡ್ಯವೇ ಕಗ್ಗಂಟಾಗಿದೆ..
ಕಾಂಗ್ರೆಸ್ ಪಕ್ಷ ತಾವು ಉಳಿಸಿಕೊಂಡಿರುವ 4 ಕ್ಷೇತ್ರಗಳ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಕಳೆದ ರಾತ್ರಿ ಕೆಪಿಸಿಸಿ ಕಛೇರಿಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಸಭೆ ನಡೆಸಲಾಯಿತು . ಈ ಸಭೆಯಲ್ಲಿ ಕ್ಯಾಂಡಿಡೇಟ್ ಗಳನ್ನು ಫೈನಲ್ ಮಾಡಿಲ್ಲವಾದ್ರು ಸಿಂಗಲ್ ನೇಮ್ ಗಳನ್ನು ಹೈಕಮಾಂಡ್ ಗೆ ರೆಫರ್ ಮಾಡಲಾಗಿದೆ. ಈ ಬಗ್ಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್ ನಲ್ಲಿ ಯಾವುದೇ ಟಿಕೆಟ್ ಗೊಂದಲವಿಲ್ಲ. ಟಿಕೆಟ್ ಹಂಚಿಕೆಯಲ್ಲಿ ಯಾವ ಕಗ್ಗಂಟೂ ಆಗಿಲ್ಲ. ನಾವು ಬಿಜೆಪಿಯವರ ರೀತಿ ನಾವು ಸುಳ್ಳು ಹೇಳಲ್ಲಇಪ್ಪತ್ತು ಕ್ಷೇತ್ರಗಳಲ್ಲಿ ನಾವು ಗೆಲ್ಲುತ್ತೇವೆ ಅವರು 28 ಕ್ಷೇತ್ರ ಗೆಲ್ಲುತ್ತೇವೆ ಅಂತಾರೆ ಅದು ಸಾಧ್ಯನಾ ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ನಮಗೆ ಅನುಕೂಲವಾಗುತ್ತೆ ಎಂದು ಮೈತ್ರಿಗೆ ಟಾಂಗ್ ಕೊಟ್ರು ಸಿಎಂ.
ಬಿಜೆಪಿಯ 5 ಕ್ಷೇತ್ರಗಳ ಕಗ್ಗಂಟು ಇನ್ನು ಮುಂದುವರೆದಿದೆ ಚಿಕ್ಕಬಳ್ಳಾಪುರದಲ್ಲಿ ಸುಧಾಕರ್ vs ವಿಶ್ವನಾಥ್ ಫೈಟ್ ಬಗೆಹರಿತಿಲ್ಲ. ಈ ಮಧ್ಯೆ ಬೆಳಗಾವಿ ಟಿಕೆಟ್ ಕಗ್ಗಂಟಿಗೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ತೆರೆ ಎಳೆದಿದ್ದಾರೆ ಇಂದು ಇಲ್ಲಾ ನಾಳೆ ಟಿಕೆಟ್ ಘೋಷಣೆಯಾಗಲಿದೆ. ನನಗೆ ಟಿಕೆಟ್ ಸಿಗುತ್ತದೆ ಎಂಬ ವಿಶ್ವಾಸದಲ್ಲಿ ನಾನಿದ್ದೇನೆ ಬೆಳಗಾವಿ ನಾಯಕರು ನನಗೆ ಈಗಾಗಲೇ ಆಹ್ವಾನ ನೀಡುತ್ತಿದ್ದಾರೆ. ನಾನು ಸಹ ಅವರ ಜೊತೆಗೆ ಸಂಪರ್ಕದಲ್ಲಿದ್ದೇನೆ ನಾನೇ ಬೆಳಗಾವಿ ಅಭ್ಯರ್ಥಿ ಬೇರೇ ಯಾರು ಸ್ಪರ್ಧಿಗಳಿಲ್ಲ ಅಂತ ಕ್ಲಿಯರ್ ಮಾಡಿದ್ದಾರೆ ಶೆಟ್ಟರ್..