ಸ್ಯಾನ್ಫ್ರಾನ್ಸಿಸ್ಕೋ: ಪ್ರಯಾಣಿಕರೊಬ್ಬರ ಕಾಲಿನ ಮೇಲೆ ಬಿಸಿ ನೀರು ಚೆಲ್ಲಿ, ಚರ್ಮ ಕಿತ್ತು ಬಂದರೂ ಏರ್ ಇಂಡಿಯಾ(Air India) ಸಿಬ್ಬಂದಿ ಹಿಂದಿರುಗಿ ನೋಡಲಿಲ್ಲ. ದೆಹಲಿಯಿಂದ ಸ್ಯಾನ್ಫ್ರಾನ್ಸಿಸ್ಕೋಗೆ ಹೊರಟಿದ್ದ ಏರ್ ಇಂಡಿಯಾ ವಿಮಾನದಲ್ಲಿ ಈ ಘಟನೆ ನಡೆದಿದೆ. ವಿಮಾನದಲ್ಲಿ ಪ್ರಯಾಣಿಕರೊಬ್ಬರ ಕಾಲ ಮೇಲೆ ಸಿಬ್ಬಂದಿ ಬಿಸಿ ನೀರು ಚೆಲ್ಲಿದ್ದಾರೆ, ಉರಿ ಉರಿ ಎಂದು ಕೂಗುತ್ತಿದ್ದರೂ ಮಹಿಳಾ ಪ್ರಯಾಣಿಕರನ್ನು ಸರಿಯಾಗಿ ಉಪಚರಿಸದೇ ಇದ್ದಿದ್ದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಬಿಸಿ ನೀರು ಚೆಲ್ಲಿದ್ದ ಕಾರಣ ಚರ್ಮ ಕಿತ್ತು ಬಂದಿತ್ತು, ಎಕ್ಸ್ನಲ್ಲಿ ಈ ಕುರಿತು ಚಾರು ತೋಮರ್ ಎಂಬುವವರು ಮಾಹಿತಿ ಹಂಚಿಕೊಂಡಿದ್ದಾರೆ, ಸಿಬ್ಬಂದಿಗೆ ತರಬೇತಿ ಕೊರತೆ ಇರಬಹುದು ಎಂದು ಹೇಳಿದ್ದಾರೆ. ಮಹಿಳೆಯು 4 ವರ್ಷದ ಮಗ ಹಾಗೂ 83 ವರ್ಷದ ಅತ್ತೆ ಜತೆ ಪ್ರಯಾಣಿಸುತ್ತಿದ್ದರು, ಅಟೆಂಡೆಂಟ್ ಕಾಳಿನ ಮೇಲೆ ಬಿಸಿ ನೀರು ಚೆಲ್ಲಿದ ಕಾರಣ ಸುಟ್ಟ ಗಾಯಗಳಾಗಿತ್ತು. ಏರ್ ಈ ಕುರಿತು ಪ್ರಯಾಣಿಕರ ಬಳಿ ಕ್ಷಮೆಯಾಚಿಸಿದೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸುವುದಾಗಿ ಹೇಳಿದೆ.