ನ್ಯೂಯಾರ್ಕ್: ಆಲಿಕಲ್ಲು ಮಳೆಯಿಂದಾಗಿ ನ್ಯೂಯಾರ್ಕ್ಗೆ ತೆರಳುವ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಬೇಕಾಯಿತು. ವಿಮಾನ ಟೇಕ್ ಆಫ್ ಆದ ನಂತರ ಆಲಿಕಲ್ಲು ಮಳೆಯಿಂದಾಗಿ ವಿಮಾನದ ರೆಕ್ಕೆಗಳು, ಇಂಜಿನ್ ಮತ್ತು ಫ್ಯೂಸ್ ಹಾನಿಯಾಗಿದೆ.
ಮಿಲನ್ನಿಂದ ನ್ಯೂಯಾರ್ಕ್ ನಗರಕ್ಕೆ ಹೊರಟಿದ್ದ ಡೆಲ್ಟಾ ಏರ್ ಲೈನ್ಸ್ ವಿಮಾನವು ಟೇಕ್ ಆಫ್ ಆದ ಸ್ವಲ್ಪ ಸಮಯದಲ್ಲೇ ಭಾರೀ ಆಲಿಕಲ್ಲು ಮಳೆಯಿಂದಾಗಿ ತುರ್ತು ಭೂಸ್ಪರ್ಶ ಮಾಡಿದೆ.
ಆಲಿಕಲ್ಲು ಮಳೆಯಿಂದಾಗಿ ವಿಮಾನದ ಮುಂಭಾಗಕ್ಕೆ ದೊಡ್ಡ ದೊಡ್ಡ ರಂಧ್ರಗಳು ಬಿದ್ದಿವೆ. ವಿಮಾನದಲ್ಲಿ 215 ಪ್ರಯಾಣಿಕರು, ಮೂವರು ಪೈಲಟ್ಗಳು ಮತ್ತು 8 ಫ್ಲೈಟ್ ಅಟೆಂಡೆಂಟ್ಗಳಿದ್ದು ಯಾರಿಗೂ ಯಾವುದೇ ರೀತಿಯ ತೊಂದರೆ ಆಗಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ವಿಮಾನ ಟೇಕ್ ಆಫ್ ಆದ 15 ನಿಮಿಷಗಳ ನಂತರ ರೋಲರ್ ಕೋಸ್ಟರ್ ರೈಡ್ ಅನಿಸಿತು ಎಂದು ಪ್ರಯಾಣಿಕರೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇದನ್ನೂ ಓದಿ : ಪಾಕ್ ನ ಫೇಸ್ ಬುಕ್ ಸ್ನೇಹಿತನನ್ನು ವರಿಸಿದ ಭಾರತದ ಅಂಜು: ಇಸ್ಲಾಂ ಧರ್ಮಕ್ಕೆ ಮತಾಂತರ