ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ನಡುವೆ ಯಾವುದೂ ಸರಿ ಇಲ್ಲ. ಇಬ್ಬರು ಪ್ರತ್ಯೇಕವಾಗಿ ವಾಸಿಸುತ್ತಿದ್ದು ಸದ್ಯದಲ್ಲೇ ವಿಚ್ಚೇದನ ಪಡೆಯಿದ್ದಾರೆ ಎಂಬ ವದಂತಿ ಇತ್ತೀಚೆಗೆ ಜೋರಾಗಿಯೇ ಕೇಳಿ ಬಂದಿತ್ತು. ಆದರೆ ಇದೀಗ ಅಭಿಷೇಕ್ ಹಾಗೂ ಐಶ್ ದಂಪತಿ ಒಟ್ಟಾಗಿ ಕಾಣಿಸಿಕೊಳ್ಳುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದರು.
ಇತ್ತೀಚೆಗೆ ಆರಾಧ್ಯಳ ಶಾಲಾ ಕಾರ್ಯಕ್ರಮಕ್ಕೆ ಐಶ್ವರ್ಯಾ, ಅಭಿಷೇಕ್ ಒಟ್ಟಾಗಿ ಬಂದಿದ್ದಾರೆ. ಅಮಿತಾಭ್ ಬಚ್ಚನ್ ಕೂಡ ಈ ಸಂದರ್ಭದಲ್ಲಿ ಇದ್ದರು. ಕಾರ್ಯಕ್ರಮ ಮುಗಿಸಿ ಅಭಿಷೇಕ್, ಐಶ್ವರ್ಯಾ ಹಾಗೂ ಆರಾಧ್ಯ ಒಂದೇ ಕಾರಿನಲ್ಲಿ ತೆರಳಿದ್ದಾರೆ.
ಐಶ್ವರ್ಯಾ ಹಾಗೂ ಅಭಿಷೇಕ್ ಮಧ್ಯೆ ಎಲ್ಲವೂ ಸರಿ ಇದೆ ಎಂದು ಕುಟುಂಬದವರು ಹೇಳುತ್ತಲೇ ಬರುತ್ತಿದ್ದರು. ಆದರೆ, ಆ ರೀತಿ ಇಲ್ಲ ಎಂಬ ವಿಚಾರ ಪದೇ ಪದೇ ಸ್ಪಷ್ಟವಾಗಿತ್ತು. ಆದರೆ, ಈಗ ಎಲ್ಲದಕ್ಕೂ ಫುಲ್ಸ್ಟಾಪ್ ಬಿದ್ದಿದೆ. ಐಶ್ವರ್ಯಾ ಹಾಗೂ ಅಭಿಷೇಕ್ ಒಟ್ಟಾಗಿ ಸಮಯ ಕಳೆಯುತ್ತಿದ್ದಾರೆ ಎಂಬುದು ಸಾಬೀತಾಗಿದೆ.
ಆರಾಧ್ಯಾ ಮುಂಬೈನ ‘ಧೀರುಭಾಯ್ ಅಂಬಾನಿ ಇಂಟರ್ನ್ಯಾಷನಲ್ ಸ್ಕೂಲ್’ನಲ್ಲಿ ಒದುತ್ತಿದ್ದು ಇದರ ಕಾರ್ಯಕ್ರಮ ಇತ್ತೀಚೆಗೆ ನಡೆದಿದೆ. ಮಗಳ ಶಾಲೆಗೆ ಅಭಿಷೇಕ್ ಹಾಗೂ ಐಶ್ವರ್ಯಾ ದಂಪತಿ ಅಮಿತಾಭ್ ಜೊತೆ ಬಂದಿದ್ದಾರೆ. ಈ ವೇಳೆ ಐಶ್ವರ್ಯಾ ಅವರನ್ನು ಅಭಿಷೇಕ್ ಕೇರ್ ಮಾಡಿದ್ದಾರೆ. ಬಳಿಕ ಇಬ್ಬರೂ ನಗುತ್ತಾ ಸಾಗುತ್ತಿರುವ ವಿಡಿಯೋನ ಪಾಪರಾಜಿಗಳು ಸೆರೆಹಿಡಿದಿದ್ದಾರೆ.