ವಿಶ್ವದ ಪ್ರತಿಷ್ಠಿತ ಚಲನಚಿತ್ರೋತ್ಸವಗಳಲ್ಲಿ ಒಂದಾಗಿರುವ ಕಾನ್ಸ್ ಫಿಲ್ಮ್ ಫೆಸ್ಟಿವಲ್ ಇದೇ 14ರಿಂದ ಆರಂಭವಾಗಿದೆ. ಇದೀಗ ಮಾಜಿ ವಿಶ್ವ ಸುಂದರಿ ನಟಿ ಐಶ್ವರ್ಯಾ ರೈ ಕೈಗೆ ಬ್ಯಾಂಡೇಜ್ ಸುತ್ತಿಕೊಂಡೇ ಕಾನ್ಸ್ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ್ದಾರೆ.
ಪ್ರತಿವರ್ಷದಂತೆ ಈ ವರ್ಷವು ಕಾನ್ಸ್ ಚಿತ್ರೋತ್ಸವದಲ್ಲಿ ಬಾಲಿವುಡ್ ಬ್ಯೂಟಿ ನಟಿ ಐಶ್ವರ್ಯಾ ರೈ ಭಾಗಿಯಾಗಿದ್ದಾರೆ. ಕೈಗೆ ಬ್ಯಾಂಡೇಜ್ ಸುತ್ತಿಕೊಂಡೇ ಕಾನ್ಸ್ ರೆಡ್ ಕಾರ್ಪೆಟ್ ಮೇಲೆ ನಟಿ ಹೆಜ್ಜೆ ಹಾಕಿದ್ದಾರೆ. ನಟಿಯ ಕೈಗೆ ಪೆಟ್ಟಾಗಿದ್ರೂ ನಗು ಮುಖದಿಂದ ನಟಿ ಕಾರ್ಯಕ್ರಮದಲ್ಲಿ ಮಿಂಚಿರೋದು ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ.
ಕಾನ್ಸ್ ರೆಡ್ ಕಾರ್ಪೆಟ್ನಲ್ಲಿ ನಟಿ ಫಲ್ಗುಣಿ ಶೇನ್ ಪೀಕಾಕ್ ಗೌನ್ನಲ್ಲಿ ಮಿಂಚಿದ್ದಾರೆ. ಐಶ್ವರ್ಯಾ ರೈ ವಿವಿಧ ಭಂಗಿಯಲ್ಲಿ ನಿಂತು ಪೋಸ್ ಕೊಡ್ತಿರೋದನ್ನು ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. 50ನೇ ವರ್ಷದ ವಯಸ್ಸಿನಲ್ಲಿಯೂ ನಟಿ ಗ್ಲ್ಯಾಮರಸ್ ಲುಕ್ ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.