ಬಾಲಿವುಡ್ ನಟಿ ಐಶ್ವರ್ಯ ರೈ ಇಂದಿಗೂ ಸಿನಿಮಾ ರಂಗದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಐಶ್ವರ್ಯಾಗೆ ಸಾಕಷ್ಟು ಆಫರ್ ಗಳು ಬರ್ತಿದ್ದು ಅಳೆದು ತೂಗಿ ಅವುಗಳನ್ನು ಸೆಲೆಕ್ಟ್ ಮಾಡುತ್ತಿದ್ದಾರೆ. ಸದ್ಯ ಐಶ್ವರ್ಯಾ ಪ್ಯಾರಿಸ್ ಫ್ಯಾಷನ್ ವೀಕ್ ನಲ್ಲಿ ಕೆಂಪು ಬಣ್ಣದ ಬಟ್ಟೆ ತೊಟ್ಟು ಬೆಕ್ಕಿನ ನಡಿಗೆಯಲ್ಲಿ ಹೆಜ್ಜೆ ಹಾಕಿದ್ದಾರೆ.
ಪ್ಯಾರಿಸ್ ನಲ್ಲಿ ನಡೆದ ಫ್ಯಾಷನ್ ವೀಕ್ ನಲ್ಲಿ ಅಮ್ಮನ ಜೊತೆ ಆರಾಧ್ಯ ಕೂಡ ತೆರಳಿದ್ದರು. ಆರಾಧ್ಯ ಜೊತೆಗೆ ಐಶ್ವರ್ಯ ರೈ ಹಾಗೂ ಇತರರು ಫೋಟೋ ತೆಗೆಸಿಕೊಂಡು ಖುಷಿಪಟ್ಟಿದ್ದಾರೆ.
ತಮ್ಮ ವೈವಾಹಿಕ ಜೀವನದ ಕೆಲವೊಂದು ಸುದ್ದಿಗಳ ನಡುವೆಯೂ ಐಶ್ವರ್ಯಾ ಪ್ಯಾರಿಸ್ ಫ್ಯಾಷನ್ ವೀಕ್ ನಲ್ಲಿ ಮಿಂಚಿದ್ದಾರೆ.
ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ನಡುವೆ ಏನೂ ಸರಿಯಿಲ್ಲ. ಇನ್ನೇನು ಇಬ್ಬರೂ ಡಿವೋರ್ಸ್ ಪಡೆಯುತ್ತಾರೆ. ಎಲ್ಲವೂ ಮುಗಿಯಿತು. ಹೀಗೆ ಹಲವು ತಿಂಗಳುಗಳಿಂದಲೂ ಸುದ್ದಿ ಹಬ್ಬುತ್ತಲೇ ಇದೆ. ಆದರೆ, ಈಗ ನೋಡಿದ್ರೆ, ಐಶ್ವರ್ಯ ರೈ ತಮ್ಮ ವೆಡ್ಡಿಂಗ್ ರಿಂಗ್ ಧರಿಸಿಕೊಂಡೇ ಫ್ಯಾಷನ್ ವೀಕ್ನಲ್ಲಿ ವಾಕ್ ಮಾಡಿರೋದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಐಶ್ವರ್ಯ ರೈ ಹಾಗೂ ಆರಾಧ್ಯ ಒಟ್ಟಿಗೇನೆ ಪ್ಯಾರಿಸ್ ಫ್ಯಾಷನ್ ವೀಕ್ಗೆ ಹೋಗಿದ್ದಾರೆ. ಇಲ್ಲಿಯ ಪ್ರತಿ ಕ್ಷಣವನ್ನು ಐಶ್ವರ್ಯ ಎಂಜಾಯ್ ಮಾಡಿದ್ದಾರೆ. ಮಗಳು ಆರಾಧ್ಯ ತಮ್ಮ ಅಮ್ಮನ ಜೊತೆಗೆ ಎಲ್ಲೆಡೆ ಸುತ್ತಾಡಿದ್ದಾರೆ.
ಐಶ್ವರ್ಯ ರೈ ತಮ್ಮ ಮಗಳಿಗೆ ಒಳ್ಳೆ ಸಂಸ್ಕಾರವನ್ನೆ ಕಲಿಸಿಕೊಟ್ಟಿದ್ದಾರೆ. ಹಿರಿಯರು ಬಂದಾಗ ಗೌರವ ಕೊಡಬೇಕು ಅನ್ನೋದನ್ನ ಹೇಳಿಕೊಟ್ಟಿದ್ದಾರೆ. ಆ ಪ್ರಕಾರ ಐಶ್ವರ್ಯ ರೈ ಮಗಳು ಆರಾಧ್ಯ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರನ್ನ ನೋಡಿದಳು. ಹಾಗೆ ಕಾಲಿಗೆ ಬಿದ್ದು ಆಶೀರ್ವಾದ ಕೂಡ ಪಡೆದುಕೊಂಡಿದ್ದರು. ಈ ವಿಡಿಯೋ ಸಖತ್ ವೈರಲ್ ಆಗಿತ್ತು.
ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಲೈಫ್ ಅಲ್ಲಿ ರಿಯಲ್ ಆಗಿ ಏನೆಲ್ಲ ಆಗುತ್ತಿದಿಯೋ ಏನೋ? ಆದರೆ, ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ಸದ್ಯ ಎಲ್ಲೂ ಒಟ್ಟಿಗೆ ಕಾಣಿಸಿಕೊಳ್ಳುತ್ತಿಲ್ಲ. ಮಗಳ ಜೊತೆಗೇನೆ ಐಶ್ವರ್ಯ ರೈ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ.
ಐಶ್ವರ್ಯ ರೈ ಸಿನಿಮಾ ಜೀವನದಲ್ಲಿ ಸದ್ಯ ಪೊನ್ನಿಯನ್ ಸೆಲ್ವನ್ ಎರಡೂ ಭಾಗದಲ್ಲಿ ಅಭಿನಯಿಸಿದ್ದಾರೆ. ಮೊದಲ ಭಾಗದಲ್ಲಿ ಅಭಿನಯಿಸಿರೊದಕ್ಕೇನೆ ಐಶ್ವರ್ಯ ರೈ ಸೈಮಾ ಅವಾರ್ಡ್ ಪಡೆದುಕೊಂಡಿದ್ದಾರೆ. ಒಟ್ಟಾರೆ, ಐಶ್ವರ್ಯ ರೈ ಸಿನಿಮಾ ನಂಟು ಬಿಟ್ಟಿಲ್ಲ. ಆದರೆ, ಇತ್ತೀಚಿಗೆ ಐಶ್ವರ್ಯಾ ರೈ ವಿಚ್ಚೇದನದ ಸುದ್ದಿಯ ಕಾರಣದಿಂದಾಗಿ ಸದ್ದು ಮಾಡುತ್ತಿದ್ದಾರೆ.