ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಇತ್ತೀಚೆಗೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ವೇಳೆ ಪತ್ನಿ ಐಶ್ವರ್ಯಾ ರೈ ಪತಿಗೆ ಪ್ರೀತಿಯಿಂದ ಶುಭ ಹಾರೈಸಿದ್ದಾರೆ. ಈ ಮೂಲಕ ತಮ್ಮ ಮಧ್ಯೆ ಎಲ್ಲವೂ ಸರಿ ಇದೆ, ತಾವೂ ದೂರ ದೂರವಾಗುತ್ತಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.
ಅಭಿಷೇಕ್ ಬಚ್ಚನ್ ಅವರ ಬಾಲ್ಯದ ಫೋಟೋನ ಐಶ್ವರ್ಯಾ ಹಂಚಿಕೊಂಡಿದ್ದು, ಪ್ರೀತಿಯಿಂದ ಸಾಲುಗಳನ್ನು ಬರೆದಿದ್ದಾರೆ. ಐಶ್ವರ್ಯಾ ರೈ ಅವರು ಪತಿಗೆ ವಿಶ್ ಮಾಡಿದ್ದು ನೋಡಿ ಅಭಿಮಾನಿಗಳು ದಿಲ್ ಖುಷ್ ಆಗಿದ್ದಾರೆ.
ಅಭಿಷೇಕ್ ಬಚ್ಚನ್ ಬಾಲ್ಯದ ಫೋಟೋ ಹಂಚಿಕೊಂಡಿರುವ ಐಶ್ವರ್ಯಾ ರೈ, ‘ನಿಮಗೆ ಜನ್ಮದಿನದ ಶುಭಾಶಯ. ಸಂತೋಷ, ಉತ್ತಮ ಆರೋಗ್ಯ, ಪ್ರೀತಿಯನ್ನು ದೇವರು ನೀಡಲಿ ಎಂದು ಕೋರುತ್ತೇನೆ’ ಎಂದು ಕ್ಯಾಪ್ಶನ್ ನೀಡಿದ್ದಾರೆ.
ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ಮಧ್ಯೆ ಯಾವುದೂ ಸರಿ ಇಲ್ಲ ಎಂಬ ವಿಚಾರ ಈ ಮೊದಲಿನಿಂದಲೂ ಚರ್ಚೆ ಆಗುತ್ತಲೇ ಬರುತ್ತಿತ್ತು. ಅಭಿಷೇಕ್ ಬಚ್ಚನ್ ಅವರಿಂದ ದೂರ ಆಗಿ ಐಶ್ವರ್ಯಾ ರೈ ವಾಸಿಸುತ್ತಿದ್ದಾರೆ ಮತ್ತು ಶೀಘ್ರವೇ ಇವರು ಡಿವೋರ್ಸ್ ಪಡೆಯುತ್ತಾರೆ ಎನ್ನುವ ವಿಚಾರವೂ ಹರಿದಾಡಿತ್ತು. ಆದರೆ, ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡು ಎಲ್ಲದಕ್ಕೂ ತೆರೆ ಎಳೆದಿದ್ದರು. ಇದೀಗ ಪತಿಯ ಹುಟ್ಟುಹಬ್ಬಕ್ಕೆ ವಿಶ್ ಮಾಡಿ ಮತ್ತೊಮ್ಮೆ ತಾವಿಬ್ಬರು ಬೇರೆ ಬೇರೆಯಾಗುತ್ತಿಲ್ಲ ಅನ್ನೋದನ್ನ ಕನ್ಪಾರ್ಮ್ ಮಾಡಿದ್ದಾರೆ.
![Demo](https://prajatvkannada.com/wp-content/uploads/2023/08/new-Aston-Band.jpeg)