ನಾಗ ಚೈತನ್ಯ ಹಾಗೂ ಶೋಭಿತಾ ಧುಲಿಪಾಲ್ ಇಂದು ಅದ್ದೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಅಕ್ಕಿನೇನಿ ಒಡೆತನದ ಅನ್ನಪೂರ್ಣ ಸ್ಟುಡಿಯೋದಲ್ಲಿ ಮದುವೆ ನೆರವೇರುತ್ತಿದೆ. ಇದೀಗ ಮದುವೆ ಬಗ್ಗೆ ಸಮಂತಾ ಮಾತನಾಡಿದ್ದಾರೆ. ಅಂದ ಹಾಗೆ ಇದು ನಾಗ ಚೈತನ್ಯ ಅವರ ಮಾಜಿ ಪತ್ನಿ ಸಮಂತಾ ಅಲ್ಲ.
ಮದುವೆಗೂ ಮುನ್ನದ ಕೆಲವು ಶಾಸ್ತ್ರ ನೆರವೇರಿದೆ. ಈ ಫೋಟೋ ಹಂಚಿಕೊಂಡಿರೋ ಶೋಭಿತಾ ಸಹೋದರಿ ಸಮಂತಾ ಧುಲಿಪಾಲ್ , ‘ಅತ್ಯಂತ ಪ್ರಭಾವಶಾಲಿ ವ್ಯಕ್ತಿ. ಅತ್ಯಂತ ಸುಂದರ ಮದುವೆ ಹುಡುಗಿಗೆ ಚಿಯರ್ಸ್. ನಿಮಗೆ ಪ್ರೀತಿ ಅಕ್ಕ’ ಎಂದು ಬರೆದುಕೊಂಡಿರೂ ಸಮಂತಾ #SoChay ಹ್ಯಾಶ್ಟ್ಯಾಗ್ ಹಾಕಿದ್ದಾರೆ. ಶೋಭಿತಾ ಅವರು ಶಾಸ್ತ್ರೋಕ್ತವಾಗಿ ವಿವಾಹ ಆಗುತ್ತಿದ್ದಾರೆ. ಅವರು ಈ ಮೊದಲು ಅರಿಶಿಣ ಶಾಸ್ತ್ರ, ಸಂಗೀತ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು.
ಶೋಭಿತಾ ಹಾಗೂ ನಾಗ ಚೈತನ್ಯ ವಿವಾಹದ ಬಗ್ಗೆ ಕೆಲವು ವದಂತಿ ಹಬ್ಬಿದ್ದವು. ಆ ಪೈಕಿ ಇವರ ಮದುವೆ ಆಲ್ಬಂನ ಶೂಟ್ ಮಾಡಲು ನೆಟ್ಫ್ಲಿಕ್ಸ್ನವರಿಗೆ ಹಕ್ಕನ್ನು ನೀಡಿದ್ದಾರೆ ಎಂದು ವರದಿ ಆಗಿತ್ತು. ಇದನ್ನು ಈ ಜೋಡಿ ಅಲ್ಲಗಳೆದಿದ್ದರು. ನಾವು ಆ ರೀತಿ ಮಾಡಿಲ್ಲ ಎಂದು ಜೋಡಿ ಹೇಳಿಕೊಂಡಿತ್ತು. ಹೀಗಾಗಿ, ಮದುವೆಗೆ ಸಂಬಂಧಿಸಿದ ಫೋಟೋ ಹಾಗೂ ವಿಡಿಯೋಗಳು ಇಂದೇ ಹೊರ ಬೀಳುವ ಸಾಧ್ಯತೆ ಇದೆ.