ಹಲವು ವರ್ಷಗಳಿಂದ ಭಾರತೀಯ ಸಿನಿಮಾಗಳಲ್ಲೇ ನಟಿಸುತ್ತಾ, ಭಾರತದಲ್ಲೇ ನೆಲೆಯೂರಿರುವ ಬಾಲಿವುಡ್ ನಟ ಅಕ್ಷಯ್ ಕುಮಾರ್ ಬಳಿ ಕೆನಾಡದ ಪೌರತ್ವವಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಹಲವು ಬಾರಿ ಅಕ್ಷಯ್ ಟೀಕೆಗೆ ಒಳಗಾಗಿದ್ದಾರೆ.
ಇತ್ತೀಚೆಗೆ ನಡೆದ ಆಜ್‌ತಕ್ ನ್ಯೂಸ್ ಚಾನಲ್‌ನ ಸೀದಿ ಬಾಸ್ ಮೊದಲ ಎಪಿಸೋಡ್‌ನಲ್ಲಿ ಅಕ್ಷಯ್ ಕುಮಾರ್ ಭಾಗಿಯಾಗಿದ್ದರು. ಈ ವೇಳೆ ” ನನಗೆ ಭಾರತವೇ ಎಲ್ಲಾ. ನಾನು ಈಗಾಗಲೇ ಪಾಸ್‌ಪೋರ್ಟ್ ಬದಲಾವಣೆ ಮಾಡಿಕೊಡುವಂತೆ ಅರ್ಜಿಯನ್ನು ಸಲ್ಲಿಸಿದ್ದೇನೆ” ಎಂದು ಅಕ್ಷಯ್ ಕುಮಾರ್ ಹೇಳಿದ್ದಾರೆ. ಈ ಮೂಲಕ ಸಾಕಷ್ಟು ಟೀಕೆಗೆ ಒಳಗಾಗಿದ್ದ ನಟ ಅಕ್ಕಿ ಕೊನೆಗೂ ತನ್ನ ಕೆನಡಾ ಪೌರತ್ವವನ್ನು ಬದಲಾವಣೆ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ.
ಇದೇ ವೇಳೆ ಟೀಕೆಗಳ ಬಗ್ಗೆ ಬೇಸರವನ್ನೂ ಹೊರಹಾಕಿದ್ದಾರೆ. “ಭಾರತವೇ ನನಗೆ ಎಲ್ಲಾ.. ನಾನು ಇಲ್ಲಿ ಏನೇ ಸಂಪಾದನೆ ಮಾಡಿದ್ದರೂ, ಏನೇ ಗಳಿಸಿದ್ದರೂ ಅದು ಇಲ್ಲೇನೆ. ಈಗ ನನಗೆ ವಾಪಸ್ ಕೊಡುವುದಕ್ಕೆ ಅವಕಾಶ ಸಿಕ್ಕಿದ್ದಕ್ಕೆ ನಾನು ಧನ್ಯನಾಗಿದ್ದೇನೆ. ಜನರು ಏನೂ ಗೊತ್ತಿಲ್ಲದೆ ಏನೇನೋ ಮಾತಾಡುತ್ತಾರೆ.” ಎಂದು ಅಕ್ಷಯ್ ಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ.
ಅಕ್ಷಯ್ ಕುಮಾರ್ ಬಾಲಿವುಡ್‌ನಲ್ಲಿ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ‘ಹೇರಾ ಪೇರಿ’, ‘ನಮಸ್ತೇ ಲಂಡನ್’, ‘ಟಾಯ್ಲೆಟ್: ಏಕ್ ಪ್ರೇಮ್ ಕಥಾ’ ಮತ್ತು ‘ಪ್ಯಾಡ್ ಮ್ಯಾನ್’ ಅಂತಹ ಸಿನಿಮಾಗಳನ್ನು ನೀಡಿದ್ದಾರೆ. ಇದೇ ವೇಳೆ ತಮ್ಮ ಕರಿಯರ್‌ನಲ್ಲಿ ಸುಮಾರು 15 ಫ್ಲಾಪ್ ಸಿನಿಮಾಗಳನ್ನು ನೀಡಿದ್ದರ ಬಗ್ಗೆನೂ ಮಾತಾಡಿದ್ದಾರೆ. 1990ರ ದಶಕದಲ್ಲಿ ಅಕ್ಷಯ್ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಹೀನಾಯವಾಗಿ ಸೋತಿದ್ದವು. ಆ ವೇಳೆ ಕೆನಡಾ ಪೌರತ್ವಕ್ಕೆ ಅರ್ಜಿ ಸಲ್ಲಿಸಬೇಕಾಯ್ತು ಎಂದು ಅಕ್ಷಯ್ ಕುಮಾರ್ ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.