ಭಾರತದಲ್ಲಿ ವಿವಿಧ ಜಾತಿಗಳು ಮತ್ತು ಬುಡಕಟ್ಟುಗಳು ಇರುವುದರಿಂದ ಅವರ ಸಂಪ್ರದಾಯಗಳು ಸಹ ವಿಭಿನ್ನವಾಗಿವೆ. ದೇಶದ ಮೂಲೆ ಮೂಲೆಯಲ್ಲೂ ಹಲವು ವಿಚಿತ್ರ ವಿವಾಹ ಪದ್ಧತಿಗಳಿದ್ದು, ಇಂದಿಗೂ ಅದನ್ನು ಅನುಸರಿಸಲಾಗುತ್ತಿದೆ. ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯಲ್ಲಿ ಒಂದು ಕುಟುಂಬದ (Family) ಎಲ್ಲಾ ಸಹೋದರರು ಒಂದೇ ಹುಡುಗಿಯನ್ನು ಮದುವೆ (Marriage)ಯಾಗುತ್ತಾರೆ.
ಈ ಪದ್ಧತಿ ಬಹಳ ಹಳೆಯದಾಗಿದ್ದು, ಈ ಪದ್ಧತಿಯನ್ನು ಘೋಟುಲ್ ಆಚರಣೆ ಎಂದು ಕರೆಯಲಾಗುತ್ತದೆ. ಇದು ನಿನ್ನೆ ಮೊನ್ನೆಯ ಪದ್ಧತಿಯಲ್ಲ. ಹಿಮಾಚಲ ಪ್ರದೇಶ ಮತ್ತು ಅರುಣಾಚಲ ಪ್ರದೇಶಗಳಲ್ಲಿ ಈ ರೀತಿಯ ಒಂದಷ್ಟು ವಿಚಿತ್ರ ಮದುವೆಯ ಸಂಪ್ರದಾಯಗಳು ಆಚರಣೆಯಲ್ಲಿವೆ. ಅದರಲ್ಲೂ ಭಾರತದ ಹಿಮಾಚಲ ಪ್ರದೇಶದಲ್ಲಿ ನಡೆಯುತ್ತಿರುವಂತಹ ಈ ವಿಚಿತ್ರವಾದ ವಿವಾಹ ಪದ್ಧತಿ ಎಂಥವರಿಗಾದ್ರೂ ಗಾಬರಿ ಮೂಡಿಸುತ್ತೆ.
ಈ ಸಂಪ್ರದಾಯದ ಪ್ರಕಾರ, ಎಲ್ಲಾ ಸಹೋದರರು ಒಂದೇ ಹುಡುಗಿ (Girl)ಯನ್ನು ಮದುವೆಯಾಗುತ್ತಾರೆ. ಜನಪ್ರಿಯ ನಂಬಿಕೆಯ ಪ್ರಕಾರ, ಪಾಂಡವರು ತಮ್ಮ ಪತ್ನಿ ದ್ರೌಪದಿ ಮತ್ತು ತಾಯಿ ಕುಂತಿಯೊಂದಿಗೆ ಮಹಾಭಾರತದ ಅವಧಿಯಲ್ಲಿ ಕಿನ್ನೌರ್ ಜಿಲ್ಲೆಯ ಗುಹೆ (Cave)ಗಳಲ್ಲಿ ವಾಸಿಸುತ್ತಿದ್ದರು. ಅಂದಿನಿಂದ ಇಲ್ಲಿ ಈ ಪದ್ಧತಿ ನಡೆದುಕೊಂಡು ಬಂದಿದೆ ಎನ್ನಲಾಗಿದೆ.
ಸಹೋದರರಲ್ಲಿ (Brothers) ದೊಡ್ಡಣ್ಣ ಮದುವೆಯ ಎಲ್ಲಾ ಶಾಸ್ತ್ರಗಳನ್ನು ನೋಡಿಕೊಳ್ಳುತ್ತಾನೆ. ಆ ಒಂದು ಹುಡುಗಿ ಇರುವ ಎಲ್ಲಾ ಸಹೋದರರನ್ನು ಮದುವೆ ಆಗುತ್ತಾಳೆ. ಆದರೆ ಈ ಮದುವೆಯ ನಂತ ಆಕೆ ಯಾರೊಂದಿಗೆ ಸಂಸಾರವನ್ನು ಮಾಡುತ್ತಾಳೆ ಎಂಬುದರ ಬಗ್ಗೆ ಸ್ಪಷ್ಟವಾದ ಮಾಹಿತಿಯಿಲ್ಲ. ಆದರೆ ಹೆಂಡತಿಯೊಂದಿಗೆ ಯಾರು ಕೋಣೆಯಲ್ಲಿ ಮಲಗಬೇಕು ಎಂಬುದನ್ನು ಸಹೋದರರೇ ನಿರ್ಧರಿಸುತ್ತಾರೆ. ಸಹೋದರರಲ್ಲಿ ಯಾರಿಗೆ ಮಗುವಾದರೂ ತಮ್ಮದೇ ಮಗು (Baby)ವಿನಂತೆ ಸಂಭ್ರಮಿಸುತ್ತಾರೆ ಎಂದು ತಿಳಿದುಬಂದಿದೆ.