ನವದೆಹಲಿ: ಇಂದಿನಿಂದ ನಾಡಿನೆಲ್ಲೆಡೆ ಮುಸ್ಲಿಮರ ಪವಿತ್ರ (Ramzan)ರಂಜಾನ್ ಉಪವಾಸ ವ್ರತ ಆರಂಭಿಸಲಾಗುತ್ತದೆ. ಪವಿತ್ರ ಆಚರಣೆಗೆ ಪ್ರಧಾನಿ ನರೇಂದ್ರ ಮೋದಿಯವರು(PM maodi) ಟ್ವೀಟ್ ಮೂಲಕ ಶುಭ ಹಾರೈಸಿದ್ದಾರೆ. ಮುಸ್ಲಿಮರ ಪವಿತ್ರ ರಂಜಾನ್ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದು, ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆ ಹಬ್ಬಕ್ಕೆ ಶುಭಾಶಯ ಹಾರೈಸಿದ್ದಾರೆ.
ಇಸ್ಲಾಮಿಕ್ ಕ್ಯಾಲೆಂಡರ್ನ ಈ ಪವಿತ್ರ ತಿಂಗಳಲ್ಲಿ ದೇಶಾದ್ಯಂತ ಮುಸ್ಲಿಮರು ಸುರ್ಯೋದಯದಿಂದ ಸೂರ್ಯಾಸ್ತದವರೆಗೆ ಉಪವಾಸ ಮಾಡುತ್ತಾರೆ. ಈ ತಿಂಗಳ ಉಪವಾಸದ ಬಳಿಕ ಈದ್-ಉಲ್-ಫಿತರ್ ಅನ್ನು ಆಚರಿಸಲಾಗುತ್ತದೆ. ಈ ಪವಿತ್ರ ತಿಂಗಳು ನಮ್ಮ ಸಮಾಜದಲ್ಲಿ ಹೆಚ್ಚಿನ ಏಕತೆ ಹಾಗೂ ಸಾಮರಸ್ಯ ತರಲಿ. ಇದು ಬಡವರ ಸೇವೆಯ ಮಹತ್ವವನ್ನು ಪುನರುಚ್ಚರಿಸಲಿ ಎಂದಿದ್ದಾರೆ. ಇಸ್ಲಾಂ ಸಮುದಾಯದ ಅತಿ ದೊಡ್ಡ ಹಬ್ಬವಾದ ರಂಜಾನ್ ಆಗಿದೆ ಈ ವೇಳೆ ಹೆಚ್ಚಿನ ಜನರು ಉಪವಾಸ ಆಚರಣೆ ಮಾಡುತ್ತಾರೆ.