ಜೈಪುರ: ರಾಜಸ್ಥಾನದಲ್ಲಿ ಲಂಚ ಕೇಳಿದ ಆರೋಪದ ಮೇಲೆ ಇಬ್ಬರು ಅಧಿಕಾರಿಗಳನ್ನು ಬಂಧಿಸಲಾಗಿದೆ. ಚಿಟ್ ಫಂಡ್ ವಿಚಾರದಲ್ಲಿ ಪ್ರಕರಣ ದಾಖಲಿಸುವುದನ್ನು ತಡೆಯಲು ಇಬ್ಬರು ಅಧಿಕಾರಿಗಳು 17 ಲಕ್ಷ ರೂ. ಲಂಚ ಕೇಳಿದ್ದ ಆರೋಪ ದಾಖಲಾಗಿದೆ ಎಂದು ರಾಜಸ್ಥಾನದ ಭ್ರಷ್ಟಾಚಾರ ನಿಗ್ರಹ ದಳದ (Rajasthan ACB) ತಿಳಿಸಿದೆ. ರಾಜಸ್ಥಾನದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಹೇಳಿಕೆಯಲ್ಲಿ, ಇಬ್ಬರು ಇಡಿ ಅಧಿಕಾರಿಗಳು ಲಂಚ ಪಡೆಯುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ ಎಂದು ಹೇಳಿದೆ.
ಜಾರಿ ನಿರ್ದೇಶನಾಲಯದ ಅಧಿಕಾರಿಯನ್ನು ನೇವಲ್ ಕಿಶೋರ್ ಮೀನಾ, ಸಹವರ್ತಿಯನ್ನು ಬಾಬುಲಾಲ್ ಮೀನಾ ಎಂದು ಗುರುತಿಸಲಾಗಿದೆ. ಎಸಿಬಿ ತಂಡವು (ACB Team) ರಾಜಸ್ಥಾನದ ಹಲವು ಸ್ಥಳಗಳಲ್ಲಿ ದಾಳಿ ನಡೆಸಿದ ನಂತರ ಅಧಿಕಾರಿಯನ್ನ ಬಂಧಿಸಲಾಗಿದೆ ಎಂದು ತಿಳಿದುಬಂದಿದೆ. ಆದಾಯ ಮೂಲಕ್ಕೆ ವಿರುದ್ಧವಾಗಿ ಲಂಚ ಪಡೆದಿರುವುದು ಕಂಡುಬಂದ ನಂತರ ನವಲ್ ಕಿಶೋರ್ ಮೀನಾ ಅವರನ್ನು ರಾಜಸ್ಥಾನ ಎಸಿಬಿ ಬಂಧಿಸಿದೆ.