ಪ್ಯಾರಿಸ್: 300 ಕ್ಕೂ ಹೆಚ್ಚು ಭಾರತೀಯ ಪ್ರಯಾಣಿಕರನ್ನು ಹೊತ್ತು ನಿಕರಾಗುವಾಗೆ ಹೊರಟಿದ್ದ ವಿಮಾನವನ್ನು ಫ್ರಾನ್ಸ್ನಲ್ಲಿ ಶಂಕಿತ ಮಾನವ ಕಳ್ಳಸಾಗಣೆಯ ಆರೋಪದ ಮೇಲೆ ವಶಕ್ಕೆ ಪಡೆಯಲಾಗಿದೆ. ಮಾನವ ಕಳ್ಳಸಾಗಣೆಯ ಬಗ್ಗೆ ಅಪರಿಚಿತರಿಂದ ಸುಳಿವು ಸಿಕ್ಕ ಬಳಿಕ ವಿಮಾನವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಅದರಲ್ಲಿ 303 ಭಾರತೀಯ ಪ್ರಯಾಣಿಕರು ಇದ್ದರು.
ವಿಮಾನವು ಯುನೈಟೆಡ್ ಅರಬ್ ಎಮಿರೇಟ್ಸ್ನಿಂದ ಟೇಕಾಫ್ ಆಗಿದೆ. ಮಾನವ ಕಳ್ಳಸಾಗಾಣಿಕೆ ಅಥವಾ ಪ್ರವಾಸದ ಉದ್ದೇಶವೇ ಎಂಬುದನ್ನು ಖಚಿತ ಪಡಿಸಿಕೊಳ್ಳಲು ನ್ಯಾಯಾಂಗ ತನಿಖೆ ಪ್ರಾರಂಭಿಸಲಾಗಿದೆ ಎಂದು ಪ್ಯಾರಿಸ್ನ ಅಧಿಕಾರಿಗಳು ತಿಳಿಸಿದ್ದಾರೆ. ಕೆಲವು ಪ್ರಯಾಣಿಕರನ್ನು ಅಕ್ರಮ ವಲಸಿಗರು ಎಂದು ನಂಬಲಾಗಿದೆ. ಪ್ರಯಾಣಿಕರು ಯುನೈಟೆಡ್ ಸ್ಟೇಟ್ಸ್ ಅಥವಾ ಕೆನಡಾಕ್ಕೆ ಅಕ್ರಮ ಪ್ರವೇಶಕ್ಕಾಗಿ ಪ್ರಯತ್ನಿಸುವ ಸಲುವಾಗಿ ಮಧ್ಯ ಅಮೆರಿಕಕ್ಕೆ ಪ್ರಯಾಣಿಸಲು ಯೋಜಿಸಿದ್ದಾರೆ ಎಂದು ಆರೋಪಿಸಲಾಗಿದೆ.