ಬೆಂಗಳೂರು: ತೆಲಂಗಾಣ ಚುನಾವಣೆ ಹಿನ್ನೆಲೆ ಸಚಿವ ಜಮೀರ್ ಅಹ್ಮದ್ ಖಾನ್ ತಂಗಿದ್ದ ಹೋಟೆಲ್ ಮೇಲೆ ಪೊಲೀಸರು ದಾಳಿ ನಡೆಸಿದ ಘಟನೆ ನಡೆದಿದೆ. ಹೈದರಾಬಾದ್ ಪಾರ್ಕ್ ಹಟ್ ಹೋಟೆಲ್ ಮೇಲೆ ಈ ದಾಳಿ ನಡೆದಿದೆ. ತಡರಾತ್ರಿ ರೇಡ್ ಮಾಡಿದ್ದಕ್ಕೆ ಸಚಿವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಾಳಿ ನಡೆಸಿ ಯಾವುದೇ ಕುರುಹು ಇಲ್ಲದೆ ಪೊಲೀಸರು ಹಿಂತಿರುಗಿದ್ದಾರೆ. ತೆಲಂಗಾಣ ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ. ಬಿಜೆಪಿ ಹಾಗೂ ಬಿಎಸ್ಆರ್ ಸೋಲುವ ಭಯದಿಂದ ದಾಳಿ ಮಾಡಿಸಿದೆ ಎಂದು ಜಮೀರ್ ಆರೋಪಿಸಿದ್ದಾರೆ.
ಈ ದಾಳಿ ಕುರಿತು ತಮ್ಮ ಫೇಸ್ಬುಕ್ ಖಾತೆಯಲ್ಲಿ ಸ್ಪಷ್ಟನೆ ನೀಡಿರುವ ಸಚಿವ ಜಮೀರ್, ನಾನು ಉಳಿದುಕೊಂಡಿರುವ ಹೈದರಾಬಾದ್ ನಗರದ ಪಾರ್ಕ್ ಹಯಾತ್ ಹೋಟೆಲ್ ಮೇಲೆ ಪೊಲೀಸರು ದಾಳಿ ನಡೆಸಿದರು. ಆದ್ರೆ ಯಾವುದೇ ಸಾಕ್ಷ್ಯಗಳೂ ಸಿಗದೇ ಹಿಂದಿರುಗಿದರು. ತೆಲಂಗಾಣ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿದ್ದೆ. ಇದರಿಂದ ಕೇಂದ್ರ ಬಿಜೆಪಿ (BJP) ಮತ್ತು ರಾಜ್ಯದ ಬಿಆರ್ಎಸ್ (BRS) ಸರ್ಕಾರ ಹತಾಶೆಗೊಂಡಿದ್ದು, ಜಂಟಿ ರಾಜಕೀಯ ದಾಳಿ ನಡೆಸಿವೆ ಎಂದು ಆಕ್ರೋಶ ಹೊರಹಾಕಿದ್ದಾರೆ