ವಿಮಾನವು ದುಬೈನಿಂದ ನಿಕರಾಗುವಾಗೆ ಹೋಗುತ್ತಿತ್ತು. ಆದರೆ ಕಳೆದ ವಾರ ಫ್ರಾನ್ಸ್ನ ವ್ಯಾಟ್ರಿ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು ವಶಕ್ಕೆ ಪಡೆದಿದ್ದರು.
ಫ್ರಾನ್ಸ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು, ಭಾರತೀಯ ಪ್ರಯಾಣಿಕರಿಗೆ ನೀಡಿದ ಆತಿಥ್ಯ ಮತ್ತು ಯಾವುದೇ ತೊಂದರೆಯಾಗದಂತೆ ಮನೆಗೆ ಹಿಂತಿರುಗಲು ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಫ್ರೆಂಚ್ ಸರ್ಕಾರ ಮತ್ತು ವಾಟ್ರಿ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಧನ್ಯವಾದ ತಿಳಿಸಿದೆ.
ರಾಯಭಾರ ಕಚೇರಿ ತಂಡದೊಂದಿಗೆ ನಿಕಟವಾಗಿ ಕೆಲಸ ಮಾಡಿದ್ದು ಮತ್ತು ನಾಗರಿಕರ ಸುರಕ್ಷಿತ ವಾಪಸ್ ಆಗಲು ಫ್ರೆಂಚ್ ಅಧಿಕಾರಿಗಳು ನೀಡಿದ ಸಹಕಾರವನ್ನು ರಾಯಭಾರ ಕಚೇರಿ ಶ್ಲಾಘಿಸಿದೆ.
ಭಾರತೀಯ ಪ್ರಯಾಣಿಕರು ವಾಪಸ್ ಆಗಲು ಉತ್ತಮ ಆತಿಥ್ಯದೊಂದಿಗೆ ಸಹಕರಿಸಿದ ಫ್ರೆಂಚ್ ಸರ್ಕಾರ ಮತ್ತು ವಾಟ್ರಿ ವಿಮಾನ ನಿಲ್ದಾಣಕ್ಕೆ ಧನ್ಯವಾದಗಳು. ರಾಯಭಾರ ತಂಡದೊಂದಿಗೆ ನಿಕಟವಾಗಿ ಕೆಲಸ ಮಾಡಿದ್ದಕ್ಕಾಗಿ, ಪ್ರಯಾಣಿಕರ ಯೋಗಕ್ಷೇಮ ನೋಡಿಕೊಂಡಿದ್ದಕ್ಕಾಗಿ ಕೃತಜ್ಞತೆಗಳು ಎಂದು ಫ್ರಾನ್ಸ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಎಕ್ಸ್ನಲ್ಲಿ ಪೋಸ್ಟ್ ಹಾಕಿದೆ.