ಮಂಡ್ಯ: ಲಕ್ಷಾಂತರ ಜನರಿಗೆ ಅನುಕೂಲವಾಗಲಿ ಅಂತ ನಿರ್ಮಾಣವಾದ ಬೆಂಗಳೂರು-ಮೈಸುರು ನಡುವಿನ ನೂತನ ದಶಪಥ ಹೆದ್ದಾರಿ ಸಾವಿನ ಹೆದ್ದಾರಿಯಾಗಿ ಪರಿವರ್ತನೆಯಾಗಿದೆ. ನೂತನ ಹೈವೇಯಲ್ಲಿ ಆಕ್ಸಿಡೆಂಟ್ ಹೆಚ್ಚಾಗುತ್ತಿರೋದ್ರಿಂದ ಪ್ರಮಾಣಿಕರಲ್ಲಿ ಆಂತಕ ಆವರಿಸುತ್ತಿದೆ. ಅಪಘಾತ ಹೆಚ್ಚಳಕ್ಕೆ ಕಾರಣ ತಿಳಿಯಲು ಎಡಿಜಿಪಿ ಅಲೋಕ್ ಕುಮಾರ್ ಮುಂದಾಗಿದ್ರು. ಈ ವೇಳೆ ಸ್ಥಳೀಯರು ಹಾಗೂ ವಾಹನ ಸವಾರರು ಹೆದ್ದಾರಿ ಪ್ರಾಧಿಕಾರದ ವಿರುದ್ಧ ದೂರಗಳ ಸರಮಾಲೆ ಹೇಳಿದ್ರು. ಈ ಕುರಿತ ಒಂದು ರಿಪೋರ್ಟ್ ಇಲ್ಲಿದೆ.
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಬೆಂಗಳೂರು-ಮೈಸೂರು ನಡುವಿನ ದಶಪಥ ಹೆದ್ದಾರಿಯೂ ಒಂದು. 9 ಸಾವಿರ ಕೋಟಿಗೂ ಅಧಿಕ ಖರ್ಚು ಮಾಡಿ ನಿರ್ಮಾಣಗೊಂಡಿರುವ ಈ ಹೈವೇ ಬಗ್ಗೆ ಸವಾರರು ಮೆಚ್ಚುಗೆ ವ್ಯಕ್ತಪಡಿಸುವ ಬದುಲು ಬೈದುಕೊಂಡೇ ಓಡಾಡುವಂತಾಗಿದೆ. ದಿನೇ ದಿನೇ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇದೀಗ ಪೊಲೀಸ್ ಇಲಾಖೆ ಅಪಘಾತ ತಗ್ಗಿಸುವ ನಿಟ್ಟಿನಲ್ಲಿ ಅಲರ್ಟ್ ಆಗಿದ್ದು, ಇಂದು ಎಡಿಜಿಪಿ ಅಲೋಕ್ ಕುಮಾರ್ ಹೆದ್ದಾರಿಯಲ್ಲಿ ರೌಡ್ಸ್ ಹಾಕಿ ಪರಿಶೀಲನೆ ನಡೆಸಿದ್ರು.
ಎಡಿಜಿಪಿ ಅಲೋಕ್ ಕುಮಾರ್ ಅವರು ಮೊನ್ನೆಯಷ್ಟೇ ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಹೆದ್ದಾರಿ ಪರಿಶೀಲಸಿದ್ರು. ಇಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಮಂಡ್ಯ ಎಸ್ಪಿ ಎನ್.ಯತೀಶ್ ಅವರೊಂದಿಗೆ ಮಂಡ್ಯಯ ಗಡಿ ಗ್ರಾಮ ನಿಡಘಟ್ಟದಿಂದ ಮೈಸೂರಿನವರೆಗೂ ವೀಕ್ಷಣೆ ಮಾಡಿದ್ರು. ಹೆಚ್ಚು ಅಪಘಾತ ನಡೆದ ಸ್ಥಳಗಳಲ್ಲಿ ಸಮಸ್ಯೆ ಏನು? ಅವೈಜ್ಞಾನಿಕ ಕಾಮಗಾರಿಯಿಂದಾಗಿ ಸಮಸ್ಯೆಯಾಗುತ್ತಿದಿಯ ಎಂಬದರ ಬಗ್ಗೆಯೂ ಖುದ್ದು ವೀಕ್ಷಿಸಿದ್ದಲ್ಲದೆ ಮಂಡ್ಯ ಎಸ್ಪಿ ಎನ್.ಯತೀಶ್ ಅವರಿಂದಲೂ ಮಾಹಿತಿ ಪಡೆದುಕೊಂಡ್ರು. ಈ ವೇಳೆ ಸಾರ್ವಜನಿಕರು ಹೆದ್ದಾರಿ ಪ್ರಾಧಿಕಾರದ ನಿರ್ಲಕ್ಷ್ಯದ ಬಗ್ಗೆ ದೂರಿದ್ರು. ಸರ್ವೀಸ್ ರಸ್ತೆ ಕಂಪ್ಲೀಟ್ ಆಗದಿರುವುದು, ಡ್ರೈನೇಜ್ ಸರಿಯಾಗಿ ಮಾಡದಿರುವುದು ಹಾಗೂ ಅವೈಜ್ಞಾನಿಕ ಕಾಮಗಾರಿಯಿಂದ ವಾಹನ ಸವಾರರು ಹಾಗೂ ಸ್ಥಳೀಯವರಿಗೆ ತೊಂದರೆಯಾಗುತ್ತಿದೆ ಅಂತ ದೂರಿದ್ರು. ರುದ್ರಾಕ್ಷಿಪುರದ ಬಳಿ ಚರಂಡಿ ಸರಿಯಾಗಿ ಮಾಡದಿರೋದಕ್ಕೆ ತನ್ನ ಗುಡಿಸಿಲಿಗೆ ನೀರು ನುಗ್ಗುತ್ತಿದೆ. ಸರಿಮಾಡಿಸುವಂತೆ ಹೇಳಿ ಸ್ವಾಮಿ ಅಂತ ಕೈಮುಗಿದು ಬೇಡಿಕೊಂಡ್ರು.
ಪರಿಶೀಲನೆ ಬಳಿಕ ಮಾತನಾಡಿದ ಎಡಿಜಿಪಿ ಅಲೋಕ್ ಕುಮಾರ್, ಕೆಲವೆಡೆ ಸರ್ವೀಸ್ ರೋಡ್ ನಲ್ಲಿ ಫುಟ್ ಪಾತ್ ಮಾಡಿಲ್ಲ. ಮತ್ತೆ ಕೆಲವೆಡೆ ಅಂಡರ್ ಪಾಸ್ ಮಾಡಿಲ್ಲ. ಕಾಮಗಾರಿ ವೈಜ್ಞಾನಿಕವಾಇ ಮಾಡದಿರೋದ್ರಿಂದ ಮಳೆ ನೀರು ನಿಲ್ಲುತ್ತಿದೆ. ಇದ್ರಿಂದ ಅಪಘಾತಗಳು ಹೆಚ್ಚಾಗುತ್ತಿದೆ. ಹೈವೇಯಲ್ಲಿ ಸಿಸಿ ಕ್ಯಾಮರಾ ಅಳವಡಿಸಿ ಸಮಸ್ಯೆಗಳನ್ನ ಸರಿಪಿಸುವಂತೆ ಹೇಳಿದ್ದೇನೆ. ಸಾರ್ವಜನಿಕರೂ ಸುರಕ್ಷಿತವಾಗಿ ಚಾಲನೆ ಮಾಡಬೇಕು. ಅಪಘಾತ ಕಡಿಮೆ ಮಾಡುವ ನಿಟ್ಟಿನಲ್ಲಿ ಅತಿಯಾದ ವೇಗದ ಮೇಲೆ ಕಣ್ಣಿಡುತ್ತಿದ್ದೇವೆ. ಅತಿವೇಗವಾಗಿ ಹೋದ್ರೆ ದಂಡದ ಜೊತೆಗೆ ಡ್ರೈವಿಂಗ್ ಲೈಸೆನ್ಸ್ ರದ್ದು ಮಾಡುತ್ತೇವೆ ಎಂದು ಎಚ್ಚರಿಕೆ ಕೊಟ್ಟ ಅವರು, ಮಂಡ್ಯ ಜಿಲ್ಲೆ ವ್ಯಾಪ್ತಿಯಲ್ಲಿ 64 ಹಾಗೂ ರಾಮನಗರ ವ್ಯಾಪ್ತಿಯಲ್ಲಿ 58 ಮಂದಿ ಈವರೆಗೆ ಸಾವನ್ನಪ್ಪಿದ್ದಾರೆ. ಇನ್ಮುಂದೆ ಟೋಲ್ ಗೇಟ್ ಬಳಿ ಡ್ರಿಕ್ ಅಂಡ್ ಡ್ರೈವ್ ಟೆಸ್ಟ್ ಮಾಡ್ತೀವಿ ಎಂದ್ರು.
ಒಟ್ಟಾರೆ ಹಲವು ಅದ್ವಾನಗಳ ನಡುವೆಯೂ ಉದ್ಘಾಟನೆಗೊಂಡಿದ್ದ ಬೆಂಗಳೂರು ಮೈಸೂರು ದಶಪಥ ಹೆದ್ದಾರಿಯಲ್ಲಿ ಅಪಘಾತಗಳು ಹೆಚ್ಚಾಗುತ್ತಿವೆ. ಅಪಘಾತ ತಡೆಯುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಇದೀಗ ಕಾರ್ಯೋನ್ಮುಖವಾಗಿದ್ದು, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಇನ್ನಾದ್ರೂ ಹೆಚ್ಚುತ್ತುಕೊಂಡು ಸಮಸ್ಯೆ ಸರಿಪಡಿಸುತ್ತಾರಾ? ಕಾದುನೋಡಬೇಕಿದೆ.