ಶಿಡ್ಲಘಟ್ಟ: ಅಂಬೇಡ್ಕರ್ ಒಂದು ಜಾತಿಗೆ ಸೀಮಿತವಾದವರಲ್ಲ, ಇಡೀ ಭಾರತದ ಎಲ್ಲ ಧರ್ಮ, ಜಾತಿಗಳ ಉನ್ನತಿಗಾಗಿ ಶ್ರಮಿಸಿದವರು ಎಂದು ಕಾಂಗ್ರೆಸ್ ಮುಖಂಡ ಆಂಜಿನಪ್ಪ (ಪುಟ್ಟು) ಹೇಳಿದರು.
ಚಿಕ್ಕದಾಸರಹಳ್ಳಿ ಗ್ರಾಮದಲ್ಲಿ ಡಾ.
ಬಿಆರ್ ಅಂಬೇಡ್ಕರ್ ಪುತ್ತಳಿ ಅನಾವರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಮಹಿಳೆಯರಿಗೆ ಪುರುಷರೋಂದಿಗೆ ಸಮಾನ ಹಕ್ಕು ಹಾಗೂ ಮತದಾನದ ಹಕ್ಕನ್ನು ಕಲ್ಪಿಸಿದರು, ಕಾರ್ಮಿಕರ ಕಲ್ಯಾಣ, ವಿದ್ಯಾರ್ಥಿಗಳ ಭವಿಷ್ಯದ ಬುನಾದಿ ಹಾಕಿ ಕೊಟ್ಟು ಇಡೀ ಸಮಾಜದ ಏಳಿಗೆಗಾಗಿ ದುಡಿದ ಅವರ ಆಶಯಗಳನ್ನು ಭಾರತದ ಪ್ರತಿಯೊಬ್ಬರೂ ಅನುಸರಿಸುವ ಮೂಲಕ ಪಾಲಿಸಬೇಕು ಎಂದು ತಿಳಿಸಿದರು.
ನಂತರ ಮಾತನಾಡಿದ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸಿ, ಬಾಬಾ ಸಾಹೇಬರ ಪುತ್ತಳಿ ಅನಾವರಣ ಮಾಡಿದರೆ ಸಾಲದು ಅದರೊಂದಿಗೆ ಅವರು ಸಾರಿದಂತಹ ಏಕತೆ ಸಮಾನತೆ ಮತ್ತು ಮೌಲ್ಯಾಧಾರಿತ ವ್ಯಕ್ತಿತ್ವವನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು, ಹಾಗೂ ಅವರ ಆಶಯಗಳನ್ನು ನಮ್ಮ ಮುಂದಿನ ಪೀಳಿಗೆಗೆ ತಿಳಿ ಹೇಳುವ ಮೂಲಕ ಮುಂದುವರೆಸಬೇಕು ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ರಾಜಕಾಂತ್ ಮಾತನಾಡಿ ಒಂದು ದೇಶ ಒಂದು ಮತ ಎನ್ನುವ ಬಗ್ಗೆ ಸದ್ಯ ಚರ್ಚೆಯಾಗುತ್ತಿರುವಂತೆ ಒಂದು ದೇಶ ಒಂದು ಜಾತಿ ಎನ್ನುವಂತಾಗಬೇಕು ಆಗಷ್ಟೇ ಬಾಬಾ ಸಾಹೇಬರ ಕನಸು ನನಸಾದಂತೆ ಎಂದು ಅಭಿಪ್ರಾಯ ಪಟ್ಟರು.
ಈ ಸಂದರ್ಭದಲ್ಲಿ ಬ್ಯಾಟರಾಯಶೆಟ್ಟಿ ,ಜೆಡಿಎಸ್ ಮುಖಂಡ ಸಚಿನ್, ಬಿಜೆಪಿ ತಾಲ್ಲೂಕು ಅಧ್ಯಕ್ಷ ಸೀಕಲ್ ಆನಂದ್ ಗೌಡ, ಕೆ ಎಂ ಎಫ್ ನಿರ್ದೇಶಕ ಶ್ರೀನಿವಾಸ್ ರಾಮಯ್ಯ , ಆರಕ್ಷಕ ವೃತ್ತ ನಿರೀಕ್ಷಕ ಎಂ.ಶ್ರೀನಿವಾಸ್ ,ಲಕ್ಷ್ಮೀ ವಿದ್ಯಾನಿಕೇತನ ಸಂಸ್ಥೆಯ ಮುಖ್ಯಸ್ಥರಾದ ಸ್ಕೂಲ್ ದೇವರಾಜ್, ಮಾಜಿ ಟಿಪಿಎಸ್ ಅಧ್ಯಕ್ಷೆ ಎಂ ಕೆ ರಾಜ್ ಶೇಖರ್, ಮಾಳಮಾಚನಹಳ್ಳಿ ಗ್ರಾ ಪಂ ಪಿಡಿಒ ಶೈಲಜಾ , ಮಾಜಿ ಅಧ್ಯಕ್ಷೆ ಬಾಗ್ಯಮ್ಮ ಪಾಪಣ್ಣ ,ದಲಿತ ಮುಖಂಡ ಎನ್.ಎ.ವೆಂಕಟೇಶ್ , ನಾಗ ನರಸಿಂಹ , ಶ್ರೀ ಪೂಜಮ್ಮ ಸಂಘದ ಅಧ್ಯಕ್ಷ ದ್ಯಾವಪ್ಪ ಇನ್ನಿತರರು ಉಪಸ್ಥಿತರಿದ್ದರು.