ಯಾದಗಿರಿ: ಬೆಂಗಳೂರಿನಿಂದ ಕಲಬುರಗಿಗೆ (Kalaburagi) ಶವ ಸಾಗಿಸುತ್ತಿದ್ದ ಅಂಬುಲೆನ್ಸ್ (Ambulance) ಉರುಳಿ ಬಿದ್ದ ಘಟನೆ ಯಾದಗಿರಿಯ ಶೆಟ್ಟಿಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಕಲಬುರಗಿ ನಗರದ ನಿವಾಸಿ ರಾಜು (45) ಶನಿವಾರ ಬೆಂಗಳೂರಿನಲ್ಲಿ (Bengaluru) ಮೃತಪಟ್ಟಿದ್ದರು. ರಾಜು ಅವರ ಶವವನ್ನು ತೆಗೆದುಕೊಂಡು ಹೋಗುತ್ತಿದ್ದಾಗ ಯಾದಗಿರಿಯ (Yadagiri) ಶೆಟ್ಟಿಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಂಬುಲೆನ್ಸ್ ಪಲ್ಟಿಯಾಗಿದೆ.
ಅಪಘಾತದಲ್ಲಿ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ ಬಳಿಕ ಕುಟುಂಬಸ್ಥರು ಇನ್ನೊಂದು ವಾಹನದಲ್ಲಿ ಶವ ಕೊಂಡೊಯ್ದಿದ್ದಾರೆ. ಸೈದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
![Demo](https://prajatvkannada.com/wp-content/uploads/2023/08/new-Aston-Band.jpeg)