ವಾಷಿಂಗ್ಟನ್: ಅಮೆರಿಕ ಸರ್ಕಾರದ ವಶದಲ್ಲಿ ಯುಎಫ್ಒಗಳು ಮತ್ತು ಮಾನವಯೇತರ ಜೀವಿಗಳ ದೇಹಗಳು ಇವೆ ಎಂದು ಅಮೆರಿಕದ ಮಾಜಿ ಗುಪ್ತಚರ ಅಧಿಕಾರಿ ಡೇವಿಡ್ ಗ್ರುಸ್ಚ್ ಹೇಳಿದ್ದಾರೆ. ವಾಷಿಂಗ್ಟನ್ನಲ್ಲಿ ಸದನ ಮೇಲ್ವಿಚಾರಣಾ ಸಮಿತಿಯೊಂದರ ಮುಂದೆ ಗ್ರುಸ್ಚ್ ಅವರು ಪ್ರಮಾಣ ಮಾಡಿ ಈ ಹೇಳಿಕೆ ನೀಡಿದ್ದಾರೆ. ಅನ್ಯಗ್ರಹ ಜೀವಿಗಳ ನೌಕೆಯನ್ನು ಅಮೆರಿಕ ಸರ್ಕಾರ ತನ್ನ ಬಳಿ ಇರಿಸಿಕೊಂಡಿದೆ ಎಂದು ಗ್ರುಸ್ಚ್ ಅವರು ಜೂನ್ನಲ್ಲಿ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಅವರಿಂದ ವಿವರಣೆ ಪಡೆದುಕೊಳ್ಳಲಾಗಿದೆ.
ಅಪಘಾತಗೊಂಡ ನೌಕೆ’ಗಳಿಂದ ಪೈಲಟ್ಗಳು ಅಮೆರಿಕ ಸರ್ಕಾರದ ಬಳಿ ಇದ್ದಾರೆಯೇ ಎಂಬ ಪ್ರಶ್ನೆಗೆ, “ಸರ್ಕಾರ ವಶಪಡಿಸಿಕೊಂಡ ಕೆಲವು ವಸ್ತುಗಳ ಜತೆಗೆ ಜೀವಿಗಳೂ ಇದ್ದವು. ಈ ಜೀವಿಗಳು ಮನುಷ್ಯೇತರ ದೇಹಗಳಾಗಿವೆ. ಈ ವಿಚಾರದ ಬಗ್ಗೆ ‘ನೇರ ತಿಳಿವಳಿಕೆ’ ಇರುವ ವ್ಯಕ್ತಿಗಳು ಇದನ್ನು ಖಚಿತಪಡಿಸಿದ್ದಾರೆ” ಎಂದು ಗ್ರುಸ್ಚ್ ಪ್ರತಿಕ್ರಿಯೆ ನೀಡಿದ್ದಾರೆ.
ಡೇವಿಡ್ ಗ್ರುಸ್ಚ್ ಅವರು 2023ರವರೆಗೂ ಅಮೆರಿಕದ ರಕ್ಷಣಾ ಇಲಾಖೆಯ ಸಂಸ್ಥೆಯಲ್ಲಿ ವಿವರಿಸಲಾಗದ ಅಸಂಗತ ವಿದ್ಯಮಾನಗಳ (ಯುಎಪಿ) ವಿಶ್ಲೇಷಣೆಯ ನೇತೃತ್ವ ವಹಿಸಿದ್ದರು. ಭೂಮ್ಯತೀತರ (ಅನ್ಯಗ್ರಹ ಜೀವಿಗಳು) ಪುರಾವೆಗಳನ್ನು ಅಮೆರಿಕ ಕಾಂಗ್ರೆಸ್ನಿಂದ ಸರ್ಕಾರವು ಮುಚ್ಚಿಡುತ್ತಿದೆ ಎಂದು ಜೂನ್ನಲ್ಲಿ ಗ್ರುಸ್ಚ್ ಆರೋಪಿಸಿದ್ದರು. ಅವರ ಈ ಹೇಳಿಕೆ ದೇಶದಲ್ಲಿ ತೀವ್ರ ಸಂಚಲನ ಉಂಟುಮಾಡಿತ್ತು. ಅವರ ಹೇಳಿಕೆ ಕುರಿತಂತೆ ತನಿಖೆ ನಡೆಸಲು ರಿಪಬ್ಲಿಕ್ ಪಕ್ಷದ ನೇತೃತ್ವದ ಮೇಲ್ವಿಚಾರಣಾ ಸಮಿತಿಯನ್ನು ರಚಿಸಲಾಗಿತ್ತು.