ವರ್ಷಾಂತ್ಯ ನಡೆಯಲಿರುವ ಅಮೆರಿಕ ಅಧ್ಯಕ್ಷೀಯ ಚುನಾವಣಾ ಕಣ ರಂಗೇರಲಾರಂಭಿಸಿದೆ. ಶುಕ್ರವಾರ ಸಿಎನ್ಎನ್ ಆಯೋಜಿಸಿದ್ದ ಚರ್ಚಾ ಕಾರ್ಯಕ್ರಮದಲ್ಲಿ ರಿಪಬ್ಲಿಕ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರ ಪ್ರಶ್ನೆಗಳಿಗೆ ಉತ್ತರಿಸಲು ಹಾಲಿ ಅಧ್ಯಕ್ಷ, ಡೆಮಾಕ್ರಟಿಕ್ ಅಭ್ಯರ್ಥಿ ಜೋ ಬೈಡೆನ್ ತಡವರಿಸಿದ ಬೆನ್ನಲ್ಲೇ ಅವರ ಬದಲು ಬೇರೆ ಅಭ್ಯರ್ಥಿ ಕಣಕ್ಕೆ ಇಳಿಸುವ ಚಿಂತನೆಗಳು ನಡೆದಿವೆ ಎನ್ನಲಾಗಿದೆ.
ಟ್ರಂಪ್ ವಿರುದ್ಧ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಪತ್ನಿ ಮಿಶೆಲ್ ಒಬಾಮಾ ಅಧ್ಯಕ್ಷೀಯ ಅಭ್ಯರ್ಥಿಯಾಗುವ ಸಾಧ್ಯತೆಯಿದೆ ಎಂದು ಸಂಸದ ಟೆಡ್ ಕ್ರೂಜ್ ಸುಳಿವು ನೀಡಿದ್ದಾರೆ. ಚರ್ಚೆ ವೇಳೆ ಟ್ರಂಪ್ ವಾಗ್ಧಾಳಿಗೆ ಸೂಕ್ತ ಉತ್ತರ ನೀಡುವಲ್ಲಿ ಬೈಡೆನ್ ವಿಫಲವಾಗಿದ್ದು, ಡೆಮಾಕ್ರಾಟ್ಗಳ ಅಸಮಾಧಾನಕ್ಕೆ ಕಾರಣವಾಗಿದೆ. ರಿಪಬ್ಲಿಕನ್ನರೂ “ಮೊದಲು ನಿಮ್ಮ ಅಭ್ಯರ್ಥಿಬದಲಿಸಿ’ ಎಂದು ಸವಾಲು ಹಾಕು ತ್ತಿದ್ದಾರೆ. ಇದರ ಬೆನ್ನಲ್ಲೇ ಬೈಡೆನ್ರನ್ನು ಬದಲಾಯಿಸುವುದಿದ್ದರೆ ಅವರ ಸ್ಥಾನಕ್ಕೆ ಮಿಶೆಲ್ ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಬೈಡೆನ್ ಸೋಲುಂಡರೂ ಅವರ ಬೆನ್ನಿಗೆ ನಿಂತಿರುವ ಮಾಜಿ ಅಧ್ಯಕ್ಷ ಒಬಾಮಾ, “ಚರ್ಚೆ ವೇಳೆ ಕೆಲವೊಮ್ಮೆ ಹಿನ್ನಡೆ ಸಹಜ’ ಎಂದಿದ್ದಾರೆ.