ತನ್ನ 23ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದ ವೇಳೆ ಆಕಸ್ಮಿಕವಾಗಿ ಕೈಯಲ್ಲಿದ್ದ ರೈಫಲ್ ನಿಂದ ಗುಂಡು ಹಾರಿದ ಪರಿಣಾಮ ಭಾರತೀಯ ವಿದ್ಯಾರ್ಥಿ ಮೃತಪಟ್ಟಿರುವ ಘಟನೆ ಅಮೆರಿಕದ ಅಟ್ಲಾಂಟ ನಗರದಲ್ಲಿ ನಡೆದಿದೆ.
ನವೆಂಬರ್ 13ರಂದು ಈ ಘಟನೆ ನಡೆದಿದ್ದು ಇದೀಗ ವರದಿಯಾಗಿದೆ. ಕಾನ್ಸಾಸ್ ರಾಜ್ಯ ವಿವಿಯ ಸ್ನಾತಕೋತ್ತರ ಪದವಿ ವಿದ್ಯಾರ್ಥಿಯಾದ ಆರ್ಯನ್ ರೆಡ್ಡಿ ಇತ್ತೀಚೆಗಷ್ಟೇ ಹಂಟಿಂಗ್ ರೈಫಲ್ ಅನ್ನು ಖರೀದಿಸಿದ್ದನು.
ಆರ್ಯನ್ ರೆಡ್ಡಿ ರೈಫಲ್ ಸ್ವಚ್ಛಗೊಳಿಸುತ್ತಿದ್ದಾಗ ಗುಂಡು ಸಿಡಿದಿದ್ದು ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿದ್ದಾಣೆ. ಗುಂಡಿನ ಸದ್ದುಕೇಳಿ ಕೊಠಡಿಗೆ ಆಗಮಿಸಿದ ಸ್ನೇಹಿತರಿಗೆ ಆರ್ಯನ್ ರೆಡ್ಡಿ ರಕ್ತದ ಮಡುವಿನ ಬಿದ್ದಿರುವುದನ್ನು ಕಂಡಿದೆ. ತಕ್ಷಣವೇ ಆಸ್ಪತ್ರೆಗೆ ಸಾಗಿಸಿದರಾದರೂ ಆತ ಆಗಲೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದರು. ಆರ್ಯಬ್ ರೆಡ್ಡಿ ಕುಟುಂಬ ಮೂಲತಃ ತೆಲಂಗಾಣದ ಭುವನಗಿರಿ ಜಿಲ್ಲೆಯವರಾಗಿದ್ದರೂ ಅವರು ಪ್ರಸ್ತುತ ಉಪ್ಪಲ್ ಜಿಲ್ಲೆಯಲ್ಲಿ ನೆಲೆಸಿದ್ದಾರೆ.