ಡೊನಾಲ್ಡ್ ಟ್ರಂಪ್ ಅವರನ್ನು ಇತಿಹಾಸದಿಂದ ಪುಟವನ್ನು ಅಳಿಸಿ ಹಾಕಲು ಅಮೆರಿಕದ ಜನತೆ ಸಿದ್ಧರಾಗಿದ್ದಾರೆ ಎಂದು ಕಮಲಾ ಹ್ಯಾರಿಸ್ ಹೇಳಿದ್ದಾರೆ.
ಅಧ್ಯಕ್ಷೀಯ ಪ್ರಚಾರದ ತನ್ನ ಮೊದಲ ಪ್ರಮುಖ ದೂರದರ್ಶನ ಸಂದರ್ಶನದಲ್ಲಿ, ನವೆಂಬರ್ 5 ರ ಚುನಾವಣೆಯಲ್ಲಿ ಟ್ರಂಪ್ ಅವರನ್ನು ಎದುರಿಸಲಿರುವ ಕಮಲಾ ಅವರು , ಅಮೆರಿಕದ ಜನರು ಹೊಸ ದಾರಿಗೆ ಸಿದ್ಧರಾಗಿದ್ದಾರೆ ಎಂದು ಹೇಳಿದರು. ಟ್ರಂಪ್ ಅವರ ಹಿಂದಿನ ಆಡಳಿತದಿಂದ ರೋಸಿ ಹೋಗಿರುವ ಅಮೆರಿಕನ್ನರು ಅವರ ಆಡಳಿತದ ಪುಟವನ್ನು ತಿರುಗಿಸಲು ಸಿದ್ಧರಾಗಿದ್ದಾರೆ ಎಂದು ನಾನು ಭಾವಿಸುತ್ತೇನೆ ಎಂದು ಕಮಲಾ ಹ್ಯಾರಿಸ್ ಹೇಳಿದ್ದಾರೆ.
ನಮ್ಮ ಮಾಜಿ ಅಧ್ಯಕ್ಷರು ನಾವು ಅಮೆರಿಕನ್ನರ ಪಾತ್ರ ಮತ್ತು ಶಕ್ತಿಯನ್ನು ಕುಗ್ಗಿಸುವ ಮತ್ತು ನಮ ರಾಷ್ಟ್ರವನ್ನು ವಿಭಜಿಸುವ ಕಾರ್ಯಸೂಚಿಯನ್ನು ಮುಂದಿಟ್ಟಿದ್ದಾರೆ. ಜನರು ಪುಟವನ್ನು ತಿರುಗಿಸಲು ಸಿದ್ಧರಾಗಿದ್ದಾರೆ ಎಂದು ಅವರು ಎಕ್ಸ್ ಪೋಸ್ಟ್ ಮಾಡಿ ಸಂದರ್ಶನದ ತುಣಕನ್ನು ಹಂಚಿಕೊಂಡಿದ್ದಾರೆ.
ಭಾರತೀಯ ಮತ್ತು ಆಫ್ರಿಕನ್ ಪರಂಪರೆಯನ್ನು ಹೊಂದಿರುವ ಹ್ಯಾರಿಸ್ ಅವರು ಸಂದರ್ಶನದಲ್ಲಿ ಟ್ರಂಪ್ ಅವರ ಗುರುತಿನ ರಾಜಕೀಯದಲ್ಲಿ ತೊಡಗಿಸಿಕೊಳ್ಳಲು ನಿರಾಕರಿಸಿದರು. ತನ್ನ ಜನಾಂಗೀಯ ಗುರುತಿನ ಕುರಿತು ಟ್ರಂಪ್ ಅವರ ಹೇಳಿಕೆಗಳಿಗೆ ಪ್ರತಿಕ್ರಿಯಿಸಲು ಅವರು ನಿರಾಕರಿಸಿದರು.
ಕಳೆದ ತಿಂಗಳು, ಚಿಕಾಗೋದಲ್ಲಿ ನಡೆದ ನ್ಯಾಷನಲ್ ಅಸೋಸಿಯೇಷನ್ ಆಫ್ ಬ್ಲ್ಯಾಕ್ ಜರ್ನಲಿಸ್ಟ್ಸ್ ಸಮೇಳನದಲ್ಲಿ ಹ್ಯಾರಿಸ್ ಅವರ ಜನಾಂಗೀಯ ಗುರುತನ್ನು ಟ್ರಂಪ್ ಪ್ರಶ್ನಿಸಿದರು, ಅವರು ಈ ಹಿಂದೆ ದಕ್ಷಿಣ ಏಷ್ಯಾದವರಾಗಿ ಗುರುತಿಸಿಕೊಂಡಿದ್ದರು ಆದರೆ ರಾಜಕೀಯ ಉದ್ದೇಶಗಳಿಗಾಗಿ ಕಪ್ಪು ಬಣ್ಣಕ್ಕೆ ತಿರುಗುತ್ತಿದ್ದಾರೆ ಎಂದು ಆರೋಪಿಸಿದ್ದರು.