ಮಂಡ್ಯ: ಸವರ್ಣಿಯರ ವಿರೋಧದ ನಡುವೆಯೂ ಆ ಗ್ರಾಮದ ದಲಿತರು ದೇವಸ್ಥಾನ ಪ್ರವೇಶ ಮಾಡಿದ್ರು. ಇದ್ರಿಂದ ರೊಚ್ಚಿಗೆದ್ದ ಸವರ್ಣಿಯರು ದೇವಸ್ಥಾನದ ಉತ್ಸವ ಮೂರ್ತಿಯನ್ನೆ ಹೊತ್ತು ತಂದು, ಇನ್ಮುಂದೆ ನಮಗೆ ದೇವಸ್ಥಾನವೇ ಬೇಡ ಅಂತ ದೇವಸ್ಥಾನದ ಸಂಬಂಧವನ್ನೆ ಕಡಿದುಕೊಂಡಿದ್ದಾರೆ. ಇಷ್ಟಕ್ಕೂ ಈ ಘಟನೆ ನಡೆದಿದ್ದು ಎಲ್ಲಿ ಅಂತ ಯೋಚಿಸ್ಥಿದ್ದೀರಾ?
ಇದ್ರ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ ನೋಡಿ.
ಹೌದು.., ಇಂತಾದ್ದೊಂದು ಘಟನೆ ನಡೆದಿರೋದು ಮಂಡ್ಯ ಜಿಲ್ಲೆಯ ಹನಕರೆ ಗ್ರಾಮದಲ್ಲಿ. ಹನಕೆರೆ ಗ್ರಾಮದ ಶ್ರೀ ಕಾಲಭೈರವೇಶ್ವರ ಸ್ವಾಮಿ ದೇವಸ್ಥಾನವನ್ನ ಗ್ರಾಮಸ್ಥರು ಕಳೆದ ಎರಡುವರೆ ವರ್ಷದ ಹಿಂದೆ ಪುನಶ್ಚೇತನಗೊಳಿಸಿದ್ದರು. ಇದಾದ ಬಳಿಕ ಈ ದೇವಾಲಯ ಮುಜುರಾಯಿ ಇಲಾಖೆ ವ್ಯಾಪ್ತಿಗೆ ಒಳಪಡಿಸಲಾಗಿತ್ತು. ನಂತ್ರ ಕಾನೂನಿನ ಪ್ರಕಾರ ಗ್ರಾಮದ ದಲಿತರು ದೇವಸ್ಥಾನ ಪ್ರವೇಶಕ್ಕೆ ಅನುಮತಿ ಕೋರಿದ್ದರು. ಆದ್ರೆ ದೇವಸ್ಥಾನ ಪ್ರವೇಶ ನೀರಾಕಣೆ ತೋರಿದ ಹಿನ್ನೆಲೆ 2 ಬಾರಿ ಶಾಂತಿ ಸಭೆಗಳನ್ನ ನಡೆಸಲಾಗಿತ್ತು. ಆದ್ರೆ ಆ ಸಭೆಗಳು ವಿಫಲವಾದ ಹಿನ್ನೆಲೆ ಇಂದು ಪೊಲೀಸರ ಭದ್ರತೆಯಲ್ಲಿ ದಲಿತರು ದೇವಾಲಯ ಪ್ರವೇಶಿಸಿದ್ರು.
ಇನ್ನು ದಲಿತರ ದೇವಾಲಯ ಪ್ರವೇಶಕ್ಕೆ ರೊಚ್ಚಗೆದ್ದ ಸವರ್ಣಿಯರು ಕೂಲಿ ನಾಲಿ ಮಾಡಿದ ಹಣದಲ್ಲಿ ದೇವಸ್ಥಾನದ ಅಭಿವೃದ್ಧಿ ಮಾಡಿದ್ದೇವೆ. ಈಗ ಪೂಜೆ ಮಾಡಲು ಬಂದಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ರು. ಅಷ್ಟೇ ಅಲ್ಲದೆ ದೇವಸ್ಥಾನದ ನಾಮಫಲಕ ಕಿತ್ತೆಸೆದು, ದೇವಸ್ಥಾನದ ಒಳಗಿದ್ದ ಉತ್ಸವ ಮೂರ್ತಿಯನ್ನ ಹೊರತೆಗೆದುಕೊಂಡು ಹೋದ್ರು.
ಇನ್ನು ಗ್ರಾಮದಲ್ಲಿ ಶಾಂತಿ ಕಾಪಾಡಲು ಗ್ರಾಮದ ನಿವಾಸಿ ಮಾಜಿ ಶಾಸಕ ಎಂ ಶ್ರೀನಿವಾಸ್ ರಾಜಿ ಪಂಚಾಯ್ತಿ ನಡೆಸಿದ್ರಾದ್ರೂ, ಶಾಂತಿ ಸಭೆ ವಿಫಲವಾಯ್ತು. ಸದ್ಯ ಹನಕೆರೆ ಗ್ರಾಮ ಈಗ ಭೂದಿ ಮುಚ್ಚಿದ ಕೆಂಡವಾಗಿದ್ದು, ಗ್ರಾಮಕ್ಕೆ ಪೊಲೀಸರ ಬಿಗಿ ಭದ್ರತೆ ಹಾಕಲಾಗಿದೆ.