ತೆಲುಗು ನಟ ಪವನ್ ಕಲ್ಯಾಣ್ರ ಸಿನಿಮಾ ನೋಡಿದ್ದ ಅಮಿತಾಬ್ ಬಚ್ಚನ್ ಸಿನಿಮಾ ನೋಡುವಾಗಲೇ ಸಿಟ್ಟಾಗಿ ಬೀಗವನ್ನು ಟಿವಿಯತ್ತ ಬಿಸಾಡಿಬಿಟ್ಟಿದ್ದರಂತೆ. ಅದು ಯಾವ ಸಿನಿಮಾ,, ಯಾಕೆ ಆ ರೀತಿ ಮಾಡಿದ್ರೂ ಅನ್ನೋದನ್ನು ಹೇಳಿದ್ದಾರೆ ಸ್ಟೋರಿ ಪೂರ್ತಿ ಓದಿ.
ಪವನ್ ಕಲ್ಯಾಣ್ ಈಗ ಸೂಪರ್ ಸ್ಟಾರ್ ನಟ, ಅವರೇ ಹೇಳಿಕೊಂಡಿರುವಂತೆ ಭಾರತದಲ್ಲಿ ಅತ್ಯಂತ ಹೆಚ್ಚು ಸಂಭಾವನೆ ಪಡೆವ ನಟರಲ್ಲಿ ಒಬ್ಬರು. ಹಲವು ಅತ್ಯುತ್ತಮ ಸಿನಿಮಾಗಳಲ್ಲಿ ಪವನ್ ಕಲ್ಯಾಣ್ ನಟಿಸಿದ್ದಾರೆ. ಅವರ ಸಿನಿಮಾಗಳನ್ನು ತೆಲುಗು ಜನರು ಮಾತ್ರವಲ್ಲದೆ ಇತರೆ ಭಾಷೆಯ ಜನರೂ ನೋಡಿ ಮೆಚ್ಚಿದ್ದಾರೆ.
ಆದರೆ ಬಹಳ ವರ್ಷಗಳ ಹಿಂದೊಮ್ಮೆ ಪವನ್ ಕಲ್ಯಾಣ್ರ ಸಿನಿಮಾ ನೋಡಿದ್ದ ಅಮಿತಾಬ್ ಬಚ್ಚನ್, ಸಿನಿಮಾ ನೋಡುವಾಗಲೇ ಸಿಟ್ಟಾಗಿ ಬೀಗವನ್ನು ಟಿವಿಯತ್ತ ಬಿಸಾಡಿಬಿಟ್ಟಿದ್ದರಂತೆ.
ತೊಲಿ ಪ್ರೇಮ’ ಇದು ಪವನ್ ಕಲ್ಯಾಣ್ರ ನಾಲ್ಕನೇ ಸಿನಿಮಾ. ಬಿಡುಗಡೆ ಆಗಿ ಬರೋಬ್ಬರಿ 25 ವರ್ಷಗಳಾಗಿವೆ. ಸಿನಿಮಾ 25 ವರ್ಷ ಪೂರೈಸಿದ ಕಾರಣ ಸಿನಿಮಾ ನಿರ್ದೇಶಕ ಎ ಕರುಣಾಕರನ್ ಹಲವು ಸಂದರ್ಶನಗಳನ್ನು ನೀಡಿದ್ದು, ಅಮಿತಾಬ್ ಬಚ್ಚನ್ ಒಮ್ಮೆ ತಮ್ಮ ತೊಲಿ ಪ್ರೇಮ ಸಿನಿಮಾ ನೀಡಿ ಸಿಟ್ಟಿನಿಂದ ವರ್ತಿಸಿದ್ದ ಘಟನೆ ಬಿಚ್ಚಿಟ್ಟದ್ದಾರೆ.
ಅಮಿತಾಬ್ ಬಚ್ಚನ್ ತಮ್ಮ ಮನೆಯಲ್ಲಿ ‘ತೊಲಿ ಪ್ರೇಮ’ ಸಿನಿಮಾ ನೋಡಿದರಂತೆ. ಸಿನಿಮಾದ ಕ್ಲೈಮ್ಯಾಕ್ಸ್ ಗೆ ಬಂದರೂ ನಾಯಕ, ನಾಯಕಿಗೆ ತನ್ನ ಪ್ರೇಮನಿವೇದನೆ ಮಾಡದೇ ಇರುವುದನ್ನು ಕಂಡು ಟೆನ್ಷನ್ನಿಂದ ತಮ್ಮ ಕೈಯಲ್ಲಿದ್ದ ಕೀ ಒಂದನ್ನು ಟಿವಿಯ ಕಡೆ ಎಸೆದುಬಿಟ್ಟರಂತೆ. ಈ ವಿಷಯವನ್ನು ಸ್ವತಃ ಅಮಿತಾಬ್ ಬಚ್ಚನ್ ಚೆನ್ನೈನ ಕಾರ್ಯಕ್ರಮವೊಂದರಲ್ಲಿ ತಮ್ಮ ಬಳಿ ಹೇಳಿದ್ದರು ಎಂದು ಕರುಣಾಕರನ್ ಹೇಳಿದ್ದಾರೆ.
ತೊಲಿ ಪ್ರೇಮ’ ಕಲ್ಟ್ ಕ್ಲಾಸಿಕ್ ಎಂದು ತೆಲುಗು ಚಿತ್ರರಂಗದಲ್ಲಿ ಗುರುತಾಗಿರುವ ಸಿನಿಮಾ. ಈ ಸಿನಿಮಾವನ್ನು ಇದೀಗ ಮರು ಬಿಡುಗಡೆ ಮಾಡಲಾಗಿದ್ದು, ಪವನ್ ಅಭಿಮಾನಿಗಳು ಹುಚ್ಚೆದ್ದು ಸಿನಿಮಾ ವೀಕ್ಷಿಸುತ್ತಿದ್ದಾರೆ.