ಬೆಂಗಳೂರು : ಸಂತೋಷ್ ಲಾಡ್ ಅವರು ಕಲಘಟಗಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದು, ಈ ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಮಾಹಿತಿ ಮತ್ತು ಮೂಲಸೌಕರ್ಯ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ಜತೆಗೆ ಬಳ್ಳಾರಿಯ ಉಸ್ತುವಾರಿಯಾಗಿಯೂ 2013ರ ಸಿದ್ದರಾಮಯ್ಯ ಸರ್ಕಾರದಲ್ಲಿ ಕಾರ್ಯ ನಿರ್ವಹಿಸಿದ್ದಾರೆ.
ಇವರ ತಂದೆ ದಿವಂಗತ ಶ್ರೀ ಶಿವಾಜಿ ವಿ ಲಾಡ್, ತಾಯಿ ಶೈಲಜಾ ಎಸ್ ಲಾಡ್, 1975 ರಂದು ಬಳ್ಳಾರಿ ಜಿಲ್ಲೆ ಸಂಡೂರಿನಲ್ಲಿ ಜನಿಸಿದ್ದಾರೆ. ಪತ್ನಿ ಕೀರ್ತಿ ಎಸ್ ಲಾಡ್, ಒಬ್ಬ ಮಗ ಇದ್ದು ಆತನ ಹೆಸರು ಕರಣ್ ಎಸ್ ಲಾಡ್. ಹಿಂದೂ ಮರಾಠ ಸಮುದಾಯದ ನಾಯಕ.
ಸಂತೋಷ್ ಲಾಡ್ ರಾಜಕೀಯ ಜೀವನ
2002 – ಸಂಡೂರ್ ಪಟ್ಟಣ ಪಂಚಾಯತ ಅಧ್ಯಕ್ಷ
2004 ರಲ್ಲಿ ಸಂಡೂರ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆ.
2008 ರಲ್ಲಿ ಕಲಘಟಗಿಯಿಂದ ಶಾಸಕರಾಗಿ ಆಯ್ಕೆ..
2010 ರಲ್ಲಿ ಕೆಪಿಸಿಸಿ ಜನರಲ್ ಸೆಕ್ರೆಟರಿ ಆಗಿ ಆಯ್ಕೆ..
2013 ರಲ್ಲಿ ಕಲಘಟಗಿಯಿಂದ ಶಾಸಕರಾಗಿ ಆಯ್ಕೆ..
2013 ರ ಸರ್ಕಾರದಲ್ಲಿ ಮಂತ್ರಿಯೂ ಆಗಿದ್ದ ಸಂತೋಷ್ ಲಾಡ್…
2016 ರಲ್ಲಿ ಕಾರ್ಮಿಕ ಸಚಿವರಾಗಿ ಸಂತೋಷ್ ಲಾಡ್ ಆಯ್ಕೆ…
2016 ರಲ್ಲಿ ಬಳ್ಳಾರಿ ಉಸ್ತುವಾರಿ ಸಚಿವರು ಆಗಿದ್ದ ಸಂತೋಷ್ ಲಾಡ್..
2018 ರಲ್ಲಿ ಸಂತೋಷ್ ಲಾಡ್ ಗೆ ಸೋಲು..
ಬಿಜೆಪಿ ಅಭ್ಯರ್ಥಿ ಸಿಎಸ್ ನಿಂಬಣ್ಣವರ ವಿರುದ್ದ ಲಾಡ್ ಗೆ ಸೋಲು..
2022 ರಲ್ಲಿ ಕೆಪಿಸಿಸಿ ಉಪಾಧ್ಯಕ್ಷರಾಗಿ ಆಯ್ಕೆ..
2023 ರಲ್ಲಿ ಮತ್ತೆ ಕಲಘಟಗಿಯಿಂದ ಶಾಸಕರಾಗಿ ಆಯ್ಕೆ.
ಬಿಜೆಪಿ ಅಭ್ಯರ್ಥಿ ನಾಗರಾಜ್ ಛಬ್ಬಿ ವಿರುದ್ದ ಗೆಲವು ಸಾಧಿಸಿದ ಸಂತೋಷ್ ಲಾಡ್