ಗದಗ: ಅನಾಮಧೇಯ ಪ್ರಾಣಿಯೊಂದು ಕೋಳಿ ಗೂಡಿಗೆ ನುಗ್ಗಿ ಕೋಳಿಗಳ ರುಂಡವನ್ನ ತಿಂದ ಪರಿಣಾಮ ಮೂವತ್ತಕ್ಕೂ ಹೆಚ್ಚು ನಾಟಿ ಕೋಳಿಗಳು ಸಾವನ್ನಪ್ಪಿರೋ ಘಟನೆ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಗಂಗಾಪುರ ಗ್ರಾಮದಲ್ಲಿ ನಡೆದಿದೆ.
ಶಾರವ್ವ ನಿಂಗಪ್ಪ ಹರಿಜನ ಎಂಬುವರಿಗೆ ಸೇರಿದ ಕೋಳಿಗಳು ಇವಾಗಿವೆ. ಸುಮಾರು ವರ್ಷಗಳಿಂದ ಶಾರವ್ವ ತಮ್ಮ ಉಪಜೀವನಕ್ಕಾಗಿ ನಾಟಿ ಕೋಳಿ, ಟಗರು ಮತ್ತು ಕುರಿ ಮರಿಗಳ ಸಾಕಾಣಿಕೆಯನ್ನು ಉದ್ಯೋಗ ಮಾಡಿಕೊಂಡು ಜೀವನ ನಡೆಸ್ತಿದ್ರು. ಇದೀಗ ಏಕಾಏಕಿ ನಾಟಿ ಕೋಳಿಗಳು ಸತ್ತು ಬಿದ್ದಿರುವುದು ಅವರನ್ನು ಆತಂಕಕ್ಕೆ ಈಡು ಮಾಡಿದ್ದು ಜೀವನ ನಡೆಸಲು ಆರ್ಥಿಕವಾಗಿ ತೊಂದರೆ ಉಂಟಾಗಿದೆ.
ಕೂಡಲೇ ಅರಣ್ಯ ಇಲಾಖೆ ಕೋಳಿಗಳ ಸಾವಿಗೆ ಕಾರಣವಾಗಿರೋ ಪ್ರಾಣಿಯನ್ನು ಗುರುತಿಸಬೇಕು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಶಾರವ್ವನಿಗೆ ಪರಿಹಾರ ಒದಗಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
