ಆಂಧ್ರ ಪ್ರದೇಶದ ಹಿಂದೂಪುರದಲ್ಲಿ ಸಾಲ ತೀರಿಸಲಾಗದೆ ಚಿಕ್ಕಮ್ಮ ಮಗಳನ್ನು ಮಾರಾಟ ಮಾಡಿದ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಚೌಡಮ್ಮ ತನ್ನ ಮಗಳನ್ನು ತಂಗಿ ಸುಜಾತಾ ವಾಸವಿದ್ದ ಹಿಂದೂಪುರದ ಮನೆಗೆ ಕಳುಹಿಸಿದ್ದಳು. ಹಿಂದೂಪುರ ಚೌಡಮ್ಮ ಮತ್ತು ಸುಜಾತಾರ ತವರು ಮನೆಯಾಗಿದೆ. ಸುಜಾತಾ ಹಿಂದೂಪುರದಲ್ಲಿ ಶೀರಾಮುಲು ಎಂಬುವರ ಬಳಿ ಸಾಲ ಮಾಡಿದ್ದಳು.
ಸಾಲ ತೀರಿಸಲಾಗದೆ ಚಿಕ್ಕಮ್ಮ ಸುಜಾತಾ ಬಾಲಕಿಯನ್ನು ಶ್ರೀರಾಮುಲುಗೆ 35 ಸಾವಿರ ರೂ.ಗೆ ಮಾರಾಟ ಮಾಡಿದ್ದಳು. ಶ್ರೀರಾಮುಲು ಬಾಲಕಿಯನ್ನು ಬಾತುಕೋಳಿ ಮೇಯಿಸಲು ಇರಿಸಿಕೊಂಡಿದ್ದನು. ಬಾಲಕಿ ಕರೆತರಲು ಚೌಡಮ್ಮ ಹಿಂದೂಪುರಕ್ಕೆ ಹೋದಾಗ ವಿಷಯ ತಿಳಿದಿದೆ. ಬಳಿಕ, ಚೌಡಮ್ಮ ತನ್ನ ಪುತ್ರಿಯನ್ನು ಕಳಿಸಿಕೊಡುವಂತೆ ಶ್ರೀರಾಮುಲು ಬಳಿ ಮನವಿ ಮಾಡಿಕೊಂಡಿದ್ದಾರೆ.
ಈ ವೇಳೆ ಶ್ರೀರಾಮುಲು ಬಾಲಕಿಯನ್ನು ಖರೀದಿಸಿದ್ದು, ಸಾಲದ ಹಣ ಕೊಟ್ಟು ಕರೆದೊಯ್ಯುವಂತೆ ಹೇಳಿದ್ದಾರೆ. ನಂತರ ಬಾಲಕಿಯ ತಾಯಿ ಚೌಡಮ್ಮ ತುಮಕೂರಿಗೆ ಬಂದು, ಮಗಳ ಸ್ಥಿತಿಯ ಬಗ್ಗೆ ಕಾರ್ಮಿಕ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಆಧರಿಸಿ ಕಾರ್ಮಿಕ ಅಧಿಕಾರಿಗಳು ಪೊಲೀಸರಿ ವಿಷಯ ತಿಳಿಸಿದ್ದಾರೆ. ಕೂಡಲೆ ತುಮಕೂರು ಪೊಲೀಸರು ಹಿಂದೂಪುರಕ್ಕೆ ಹೋಗಿ ಬಾಲಕಿಯನ್ನು ರಕ್ಷಣೆ ಮಾಡಿದ್ದಾರೆ.