ಆರ್ಸಿಬಿ ವರ್ಸಸ್ ಚೆನ್ನೈ ನಡುವಿನ ರಣಕಣ ಕಾವೇರುತ್ತಿದೆ. ಹೈವೋಲ್ಟೇಜ್ ಮ್ಯಾಚ್ನಲ್ಲಿ ಯಾರ್ ಗೆಲ್ತಾರೆ ಎಂಬ ಕುತೂಹಲ ಮನೆ ಮಾಡಿದೆ. ಉಭಯ ತಂಡಗಳ ಬಲಾಬಲಾದ ಡಿಬೇಟ್ ಜೋರಾಗಿದೆ. ಯಾರು ಪ್ಲೇ-ಆಫ್ಗೆ ಎಂಟ್ರಿ ನೀಡ್ತಾರೆ ಎಂಬ ಪ್ರಡಿಕ್ಷನ್ ಕೂಡ ನಡೀತಿದೆ. ಇದರಲ್ಲಿ ಆರ್ಸಿಬಿ ಫ್ಯಾನ್ಸ್ ಕೂಡ ಹೊರತಾಗಿಲ್ಲ. ಆದ್ರೆ, ಈ ನಡುವೆ ಧೋನಿಯ ನಾಮ ಜಪ ನಡೀತಿದೆ. ಮೇ.18ರಂದು ಆರ್ಸಿಬಿ ಗೆಲುವಿನ ಭರವಸೆಯಲ್ಲಿದೆ. ಫ್ಯಾನ್ಸ್ ಕೂಡ ಆರ್ಸಿಬಿಯೇ ಗೆಲ್ಲೋ ಫೇವರಿಟ್ ಅಂತಿದ್ದಾರೆ. ಈ ನಾಕೌಟ್ ಮ್ಯಾಚ್ ನಡುವೆಯೂ ಧೋನಿ ಆರಾಧನೆ ಮಾತ್ರ ನಿಂತಿಲ್ಲ.
ಆರ್ಸಿಬಿ ವರ್ಸಸ್ ಚೆನ್ನೈ.. ಇದು ಬದ್ಧವೈರಿಗಳ ನಡುವಿನ ಕದನ. ಆದ್ರೆ ಪಂದ್ಯದಲ್ಲಿ ಆರ್ಸಿಬಿ ಗೆಲ್ಲಬೇಕು ಅನ್ನೋದು ಫ್ಯಾನ್ಸ್ ಮಹಾದಾಸೆ. ಇದೇ ಫ್ಯಾನ್ಸ್ನ ಮನದಾಳ ಮಾತ್ರ.. ಮಹೇಂದ್ರ ಸಿಂಗ್ ಧೋನಿಯ ಬ್ಯಾಟ್ ಝಳಪಿಸಬೇಕು ಅನ್ನೋದಾಗಿದೆ. ಅದಕ್ಕೆ ಅವರದ್ದೇ ಆದ ರೀತಿಯಲ್ಲಿ ಕಾರಣಗಳನ್ನು ನೀಡಿದ್ದಾರೆ. ಇದು ಆರ್ಸಿಬಿಗೆ ಕ್ರೂಶಿಯಲ್ ಮ್ಯಾಚ್ ಆಗಿರಬಹುದು. ನಮಗೆ ವಿಶ್ವಕಪ್ ಗೆಲ್ಲಿಸಿಕೊಟ್ಟ ಲೆಜೆಂಡರಿ ನಾಯಕನ ವಿರೋಧಿಸಲ್ಲ. ಹೀಗಾಗಿ ಧೋನಿಗೂ ನಮ್ಮ ಬೆಂಬಲ ಇದ್ದೇ ಇರುತ್ತೆ ಅನ್ನೋದು ಫ್ಯಾನ್ಸ್ ಮನದಾಳ.
ಕ್ರಿಕೆಟ್ ಅಭಿಮಾನಿಗಳಿಗೆ ಇದು ಜಸ್ಟ್ ಚೆನ್ನೈ, ಆರ್ಸಿಬಿ ಮ್ಯಾಚ್ ಆಗಿ ಮಾತ್ರವೇ ಉಳಿದಿಲ್ಲ. ಗುರುಶಿಷ್ಯರ ಕಾಳಗವಾಗಿದೆ. ಅಷ್ಟೇ ಅಲ್ಲ. ಧೋನಿ ಪಾಲಿಗೆ ಕೊನೆ ಪಂದ್ಯವಾಗುವ ಸಾಧ್ಯತೆಯಾಗಿದೆ. ಹೀಗಾಗಿ ಬಹುಪಾಲು ಅಭಿಮಾನಿಗಳಿಗೆ ಇದು ಎಮೋಷನಲ್ ಮ್ಯಾಚ್ ಆಗಿದೆ. ಹೀಗಾಗಿ ಕೊನೆ ಪಂದ್ಯದಲ್ಲಿ ಮಾಹಿ ಆಟ ಕಣ್ತುಂಬಿಕೊಳ್ಳುವ ಕಾತರದಲ್ಲಿದ್ದಾರೆ
ಕೆಲ ಮಂದಿಯಲ್ಲಾ ಧೋನಿ ಆಟಕ್ಕೆ ಬೆಂಬಲ ಸೂಚಿಸಿದ್ರೆ, ಧೋನಿಯನ್ನ ಆರಾಧಿಸುವ ಇವರು, ಆರ್ಸಿಬಿ ಬದಲಿಗೆ ಚೆನ್ನೈ ಗೆದ್ದೇ ಗೆಲ್ಲುತ್ತೆ ಅನ್ನೋ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪ್ರಸಕ್ತ ಐಪಿಎಲ್ನಲ್ಲೂ ಧೋನಿಯ ಜಾತ್ರೆ ನಡೀತಿದೆ. ಪ್ರತಿ ಸ್ಟೇಡಿಯಂನಲ್ಲಿ ಧೋನಿಗಾಗಿ ಸ್ಟೇಡಿಯಂ ಪ್ಯಾಕ್ ಆಗ್ತಿದೆ. ಆತನ ಆಟ ಕಣ್ತುಂಬಿಕೊಳ್ಳುವ ಜೊತೆ ಜೊತೆಗೆ ಬೆಂಬಲ ಸೂಚಿಸುತ್ತಿದ್ದಾರೆ. ಪ್ರತಿ ಸ್ಟೇಡಿಯಂನಲ್ಲೂ ಧೋನಿ ಮೇಲಿನ ವ್ತಕ್ತವಾಗುತ್ತಿರುವ ಪ್ರೀತಿಗೆ, ತವರಿನ ಅಂಗಳಗಳೇ ಅವೇ ಸ್ಟೇಡಿಯಂಗಳಾಗಿ ಮಾರ್ಪಟ್ಟಿವೆ. ಕಳೆದ ಆವೃತ್ತಿಯಲ್ಲಿ ಚಿನ್ನಸ್ವಾಮಿಯಲ್ಲೂ ಇದೇ ನಡೆದಿತ್ತು. ಹೀಗಾಗಿ ಈ ಸಲನೂ ಚಿನ್ನಸ್ವಾಮಿಯಲ್ಲಿ ಧೋನಿ ಹಬ್ಬ ನಡೆಯುತ್ತಾ ಅನ್ನೋ ಕುತೂಹಲ ಇದ್ದೇ ಇದೆ.
ಒಟ್ನಲ್ಲಿ..! ಒಂದ್ಕಡೆ ಆರ್ಸಿಬಿ ವರ್ಸಸ್ ಚೆನ್ನೈ ಮ್ಯಾಚ್ ಫೀವರ್ ಶುರುವಾಗಿದ್ರೆ. ಮತ್ತೊಂದೆಡೆ ಧೋನಿ ಉತ್ಸಾವ ನಡೆಸೋಕೆ ಫ್ಯಾನ್ಸ್ ರೆಡಿಯಾಗಿದ್ದಾರೆ. ಹೀಗಾಗಿ ಚಿನ್ನಸ್ವಾಮಿಯಲ್ಲಿ ಧೋನಿ ಜಾತ್ರೆ ಯಾವ ಮಟ್ಟಕ್ಕೆ ನಡೆಯುತ್ತೆ ಅನ್ನೋದನ್ನ ಕಾದುನೋಡಬೇಕಿದೆ.