ಮೈಸೂರು: ಸಾಂಸ್ಕೃತಿಕ ನಗರಿಯನ್ನ ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿಸಲು ಪರಿಸರ ಸ್ನೇಹಿ ತಂಡ ಹಾಗೂ ಕೆ.ಎಂ.ಪಿ.ಕೆ.ಟ್ರಸ್ಟ್ ಸಂಘಟನೆಗಳು ಜಾಗೃತಿ ಅಭಿಯಾನ ಇಂದಿನಿಂದ ಕೈಗೊಂಡಿದೆ.ಈಗಾಗಲೇ ಹಲವೆಡೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿರುವ ಸಂಘಟನೆ ಇಂದು ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದೆ.ಮೆಟ್ಟಿಲು ಮೂಲಕ ಚಾಮುಂಡಿ ಬೆಟ್ಟಕ್ಕೆ ತೆರಳುವ ಭಕ್ತರಿಗೆ ಬಟ್ಟೆ ಬ್ಯಾಗ್ ವಿತರಿಸುವ ಮೂಲಕ ಪ್ಲಾಸ್ಟಿಕ್ ಬಳಕೆ ತ್ಯಜಿಸುವಂತೆ ಜಾಗೃತಿ ಮೂಡಿಸಿದ್ದಾರೆ.
ಪ್ಲಾಸ್ಟಿಕ್ ಬಿಡಿ…ಬಟ್ಟೆ ಬ್ಯಾಗ್ ಹಿಡಿ ಎಂಬ ಸಂದೇಶ ಸಾರುವ ಭಿತ್ತಿ ಚಿತ್ರಗಳನ್ನ ಪ್ರದರ್ಶಿಸುತ್ತಾ ಭಕ್ತರಿಗೆ ಬಟ್ಟೆ ಬ್ಯಾಗ್ ಗಳನ್ನ ವಿತರಿಸಿ ಪರಿಸರ ಸಂರಕ್ಷಣೆಗೆ ಸಹಕರಿಸುವಂತೆ ಮನವಿ ಮಾಡಿದ್ದಾರೆ.ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ ಎಂಬ ಘೋಷಣೆ ಕೂಗಿ ಅರಿವು ಮೂಡಿಸಿದ್ದಾರೆ.ಪರಿಸರ ಸ್ನೇಹಿ ತಂಡ ಹಾಗೂ ಕೆ.ಎಂ.ಪಿ.ಕೆ.ಟ್ರಸ್ಟ್ ನ ಜಾಗೃತಿ ಕಾರ್ಯಕ್ರಮಕ್ಕೆ ಪಾಲಿಕೆ ಅಧಿಕಾರಿಗಳು ಸಹ ಕೈ ಜೋಡಿಸಿದರು.