ಬೆಂಗಳೂರು: ಸೌತ್ ಇಂಡಿಯನ್ ಫಿಲ್ಮ್ ಚೇಂಬರ್ ಆಫ್ ಕಾಮರ್ಸ್ , ಫಿಲ್ಮ್ ಫೇಡರೇಷನ್ ಆಫ್ ಇಂಡಿಯಾ ಹಾಗು ಕರ್ನಾಟಕ ಫಿಲ್ಮ್ ಚೇಂಬರ್ ಮೂವರು ಒಟ್ಟಾಗಿ ಸೇರಿ ಜಂಟಿಯಾಗಿ ಇಂದು ಖಾಸಗಿ ಹೋಟೆಲ್ ನಲ್ಲಿ ಸಭೆ ಮಾಡಲಾಗ್ತಿದೆ
ಚಿತ್ರರಂಗದ ಅಭಿವೃದ್ಧಿ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗ್ತಿದೆ ತುಂಬಾ ವರ್ಷಗಳ ನಂತ್ರ ನಡೆಯುತ್ತಿರುವ ಸಭೆ ಇದಾಗಿದೆ
ಎನ್.ಎಮ್ ಸುರೇಶ್ ಫಿಲ್ಮ್ ಚೇಂಬರ್ ಅಧ್ಯಕ್ಷರು, ಮಾಜಿ ಅಧ್ಯಕ್ಷರು ಸಾರಾ ಗೋವಿಂದ್, ಥಾಮಸ್ ಡಿಸೋಜ , ಪದಾಧಿಕಾರಿಗಳು , ಸೌತ್ ಇಂಡಿಯನ್ ಫಿಲ್ಮ್ ಚೇಂಬರ್ ಹಾಗು ಎಫ್ ಎಫ್ ಐ ಅಧ್ಯಕ್ಷರಾದ ರವಿ ಕೋಟಾರ್ ಕರ್, ಹಾಗು ಎಫ್ ಎಫ್ ಐ ಜನರಲ್ ಸೆಕ್ರೆಟರಿ ಸಿ.ಕಲ್ಯಾಣ್, ಹಾಗು ಎಲ್ಲಾ ಪದಾಧಿಕಾರಿಗಳು , ಸಾರಥ್ಯದಲ್ಲಿ ನಡೆಯುತ್ತಿರುವ ಸಭೆ
ಒಟ್ಟು ನೂರು ಜನರು ಸಭೆಯಲ್ಲಿ ಭಾಗಿ ಆಗಿ ಚರ್ಚಿಸಲಾಗ್ತಿದೆ ಸಿಂಗಲ್ ಥಿಯೇಟರ್ ಹಾಗು ಮಲ್ಟಿಪ್ಲೆಕ್ಸ್ ಸಮಸ್ಯೆ
ಸಿನಿಮಾ ಮತ್ತು ಮ್ಯೂಸಿಕ್ ನಡುವೆ ನಡೆಯುತ್ತಿರುವ ಕಾಪೀ ರೈಟ್ ಸಮಸ್ಯೆ , ಪೈರಸಿ ಇಂದ ಇಂಡಸ್ಟ್ರಿಗೆ ಆಗ್ತಿರೋ ತೊಂದರೆ ಸೇರಿದಂತೆ ಸಾಕಷ್ಟು ವಿಚಾರಗಳ ಬಗ್ಗೆ ಚರ್ಚೆ ನಡೆಯುತ್ತಿದೆ