ಸಮ್ಮತಿ ಸಂಭೋಗದ ವಯಸ್ಸನ್ನು 16ರಿಂದ 18ಕ್ಕೆ ಏರಿಸಲಾಗಿದೆ, ಆದರೆ ಈ ಕುರಿತು ಹಲವರಿಗೆ ಮಾಹಿತಿ ತಿಳಿದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಸಮ್ಮತಿ ಮೇರೆಗೆ ಹುಡುಗಿ ಜೊತೆ ಲೈಂಗಿಕ ಸಂಭೋಗ ನಡೆಸಲು ಕನಿಷ್ಠ 18 ತುಂಬಿರಬೇಕು. ವಯಸ್ಸಿನ ಮಿತಿಯನ್ನು ಏರಿಸಿರುವ ಕುರಿತು ಸಾರ್ವಜನಿಕರಿಗೆ ಮಾಹಿತಿ ಇಲ್ಲದಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಪೋಕ್ಸೋ ಪ್ರಕರಣದ ಕುರಿತು ವಿಚಾರಣೆ ವೇಳೆ ಜಸ್ಟೀಸ್ ಸಂಜೀವ್ ಖನ್ನ, ಸಂಯ್ ಕರೋಲ್, ಪಿವಿ ಸಂಯ್ ಕುಮಾರ್ ನೇತೃತ್ವದ ಪೀಠ ಈ ವಿಚಾರ ಮುನ್ನಲೆಗೆ ತಂದಿದೆ.
ಪೋಕ್ಸೋ ಕಾಯ್ದೆಯಡಿ ಆರೋಪಿಯನ್ನು ಖುಲಾಸೆಗೊಳಿಸುವುದರ ವಿರುದ್ದ ಮಧ್ಯಪ್ರದೇಶ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್, ಈ ತಿದ್ದುಪಡಿ ಕುರಿತು ಬೆಳಕು ಚೆಲ್ಲಿದೆ. ಸಾಕಷ್ಟು ಪ್ರಕರಣಗಳಲ್ಲಿ ಮಾಹಿತಿ ಕೊರತೆ ಕಾಣುತ್ತಿದೆ. ಸಮ್ಮತಿಸಂಭೋಗದ ವಯಸ್ಸನ್ನು 16ರಿಂದ 18ಕ್ಕೆ ಹೆಚ್ಚಿಸಿರುವ ಕುರಿತು ಮಾಹಿತಿ ಇಲ್ಲದ ಕಾರಣ ಸಮಸ್ಯೆಗಳು ಎದುರಾಗುತ್ತಿದೆ. ಇಲ್ಲದಿದ್ದರೆ ಕುಟುಂಬಗಳು ಮಧ್ಯಪ್ರವೇಶಿಸಬಹುದು ಎಂದು ಜಸ್ಟೀಸ್ ಸಂಜೀವ್ ಖನ್ನಾ ಹೇಳಿದ್ದಾರೆ.
ಪೋಕ್ಸೋ ಕಾಯ್ದೆ ಜಾರಿ ಹಾಗೂ ದಂಡ ಸಂಹಿತೆ ತಿದ್ದುಪಡಿಯಲ್ಲಿ ಈ ಮಹತ್ವದ ಅಂಶ ಉಲ್ಲೇಖಿಸಲಾಗಿದೆ. ಸಮ್ಮತಿ ಸಂಭೋಗದ ವಯಸ್ಸನ್ನು 16ರಿಂದ 18ಕ್ಕೆ ಏರಿಸಲಾಗಿದೆ ಎಂದು ಕೋರ್ಟ್ ಹೇಳಿದೆ. ಸಮ್ಮತಿ ಮೇರೆಗೆ ನಡೆಸುವ ಸಂಭೋಗ ಪ್ರಕರಣಗಳಲ್ಲಿ ಪುರುಷನ ವಿರುದ್ದ ಕಾನೂನು ಕ್ರಮಕ್ಕೆ ಕಾರಣವಾಗುತ್ತಿದೆ. ಪ್ರಮುಖವಾಗಿ ಪೋಕ್ಸೋ ಪ್ರಕರಣಗಳಲ್ಲಿ ಒಪ್ಪಿಗೆ ಪಡೆದ ಬಳಿಕದ ಲೈಂಗಿಕ ಪ್ರಕರಣಗಳ ವಿಚಾರಣೆಗಳಲ್ಲಿ ಎದುರಾಗುವ ಸಮಸ್ಯೆಗಳ ಕುರಿತು ಹಲವು ನ್ಯಾಯಾಧೀಶರು ಸೂಚಿಸಿದ್ದಾರೆ. ವಯಸ್ಸಿನ ಏರಿಕೆ ಕುರಿತು ಮಾಹಿತಿ ಕೊರತೆ, ಸ್ಪಷ್ಟತೆಗಳು ಇಲ್ಲದ ಕಾರಣ ಗೊಂದಲಗಳು ನಿರ್ಮಾಣವಾಗುತ್ತಿದೆ ಎಂದು ಕೋರ್ಟ್ ಹೇಳಿದೆ.