ಭಾರತದ ಪರೋಪಕಾರಿ ಉದ್ಯಮಿ ಫಿರೋಜ್ ಮರ್ಚೆಂಟ್ ಅವರ ವಿಶಿಷ್ಟ ಕಾರ್ಯ ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ. ತಮ್ಮ ಕುಟುಂಬಕ್ಕಾಗಿ ದುಡಿಯಲು ವಿದೇಶಕ್ಕೆ ಹೋಗಿ, ಅಲ್ಲಿ ಯಾವುದೇ ತಪ್ಪಿನಿಂದ ಜೈಲು ಪಾಲಾದ ಬಡಪಾಯಿಗಳನ್ನು ಮತ್ತೆ ಅವರ ಕುಟುಂಬದವರ ಜತೆ ಸೇರಿಸುವ ಮಹತ್ಕಾರ್ಯದ ಮೂಲಕ ಅವರು ಗಮನ ಸೆಳೆದಿದ್ದಾರೆ.
2024ರ ಆರಂಭದ ಈ ಎರಡು ತಿಂಗಳಲ್ಲಿ ಫಿರೋಜ್ ಮರ್ಚೆಂಟ್ ಅವರು ಗಲ್ಫ್ ದೇಶವಾದ ಯುಎಇಯ ವಿವಿಧ ಕಾರಾಗೃಹಗಳಲ್ಲಿ ಬಂಧಿಗಳಾಗಿರುವ 900 ಕೈದಿಗಳ ಬಿಡುಗಡೆಗೆ 1 ಮಿಲಿಯನ್ ದಿರ್ಹಾಮ್ಸ್ (ಅಂದಾಜು 2.25 ಕೋಟಿ ರೂ) ದಾನ ಮಾಡಿದ್ದಾರೆ. ಅಷ್ಟೇ ಅಲ್ಲ, ಈ ವರ್ಷ 3 ಸಾವಿರ ಕೈದಿಗಳನ್ನು ಜೈಲಿನಿಂದ ಹೊರಗೆ ಕರೆತರುವ ಗುರಿ ಹೊಂದಿದ್ದಾರೆ.
ಮತ್ತೆ ಮುನ್ನಲೆಗೆ ಬಂದ ವಿವಾದಿತ CAA: ಲೋಕಸಭೆ ಚುನಾವಣೆಗೂ ಮುನ್ನವೇ ಜಾರಿಯಾಗುತ್ತಾ.?!
66 ವರ್ಷದ ಫಿರೋಜ್ ಮರ್ಚೆಂಟ್ ಅವರು ಪ್ಯೂರ್ ಗೋಲ್ಡ್ ಜ್ಯುವೆಲ್ಲರ್ಸ್ ಮಾಲೀಕರಾಗಿದ್ದಾರೆ. ದುಬೈನಲ್ಲಿ ನೆಲೆಸಿರುವ ಅವರು, ಕೈದಿಗಳ ಬಿಡುಗಡೆಗೆ ಅಗತ್ಯವಾದ ಹಣಕಾಸಿನ ನೆರವಿಗಾಗಿ ಯುಎಇ ಅಧಿಕಾರಿಗಳಿಗೆ 1 ಮಿಲಿಯನ್ ದಿರ್ಹಾಮ್ಸ್ ನೀಡಿದ್ದಾರೆ. ಇದು ರಂಜಾನ್ಗೂ ಮುನ್ನ ನೀಡಿರುವ ಮಾನವೀಯತೆ, ನಮ್ರತೆ, ಕ್ಷಮಾದಾನ ಮತ್ತು ಕರುಣೆಯ ಸಂದೇಶವಾಗಿದೆ ಎಂದು ಫಿರೋಹ್ ಮರ್ಚೆಂಟ್ ಅವರ ಕಚೇರಿ ತಿಳಿಸಿದೆ.
“ದುಬೈ ಮೂಲದ ಭಾರತೀಯ ಉದ್ಯಮಿ ಹಾಗೂ ಪರೋಪಕಾರಿ, ಪ್ಯೂರ್ ಗೋಲ್ಡ್ನ ಫಿರೋಜ್ ಮರ್ಚೆಂಟ್ ಅವರು ಅರೇಬಿಯನ್ ದೇಶದ ವಿವಿಧ ಭಾಗಗಳಲ್ಲಿನ 900 ಕೈದಿಗಳ ಬಿಡುಗಡೆ ಸಾಧ್ಯವಾಗುವಂತೆ ಸುಮಾರು 2.25 ಕೋಟಿ ರೂ (ಎಇಡಿ 1 ಮಿಲಿಯನ್) ಹಣ ದೇಣಿಗೆ ನೀಡಿದ್ದಾರೆ” ಎಂದು ಅವರ ಕಚೇರಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಮತ್ತೆ ಮುನ್ನಲೆಗೆ ಬಂದ ವಿವಾದಿತ CAA: ಲೋಕಸಭೆ ಚುನಾವಣೆಗೂ ಮುನ್ನವೇ ಜಾರಿಯಾಗುತ್ತಾ.?!
‘ದಿ ಫರ್ಗಾಟನ್ ಸೊಸೈಟಿ’ ಯೋಜನೆ ಮೂಲಕ ಹೆಸರಾಗಿರುವ ಮರ್ಚೆಂಟ್, 900 ಕೈದಿಗಳ ಬಿಡುಗಡೆಗೆ ಈಗಾಗಲೇ ನೆರವಾಗಿದ್ದಾರೆ. ಇದರಲ್ಲಿ ಅಜ್ಮಾನ್ನ 450, ಫುಜೈರಾಹ್ದ 170 ಕೈದಿಗಳು, ದುಬೈನ 121, ಉಮ್ ಅಲ್ ಕುವೈನ್ನ 69 ಮತ್ತು ರಾಸ್ ಅಲ್ ಖೈಮಾಹ್ನ 28 ಕೈದಿಗಳು ಸೇರಿದ್ದಾರೆ ಎಂದು ಮಾಗಲ್ಫ್ ಸುದ್ದಿ ವೆಬ್ಸೈಟ್ ತಿಳಿಸಿದೆ.