ಎವರೆಸ್ಟ್ ಪರ್ವತ ಏರುವ ಸಂದರ್ಭ ತೀವ್ರ ಅಸ್ವಸ್ಥಗೊಂಡಿದ್ದ ಭಾರತದ ಪರ್ವತಾರೋಹಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿರುವುದಾಗಿ ನೇಪಾಳದ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ವಾರ ಪರ್ವತವನ್ನು ಏರುವ ಪ್ರಯತ್ನದಲ್ಲಿ ತೀವ್ರ ಅಸ್ವಸ್ಥಗೊಂಡಿದ್ದ 46 ವರ್ಷದ ಬನ್ಸೀಲಾಲ್ರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಇದರೊಂದಿಗೆ ಈ ವರ್ಷದ ಪರ್ವತಾರೋಹಣ ಸೀಸನ್ ಆರಂಭಗೊಂಡಂದಿನಿಂದ ಸಾವನ್ನಪ್ಪಿದ ಪರ್ವತಾರೋಹಿಗಳ ಸಂಖ್ಯೆ 8ಕ್ಕೇರಿದೆ ಎಂದು ಅಧಿಕಾರಿ ಹೇಳಿದ್ದಾರೆ.