ಲಾಹೋರ್: ‘ಕಿವಿ ಕೇಳಿಸದ ಭಾರತದ ವ್ಯಕ್ತಿಯೋರ್ವ ಸಟ್ಲೆಜ್ ನದಿಯಲ್ಲಿ ಉಂಟಾದ ಪ್ರವಾಹದಿಂದಾಗಿ ದೇಶಕ್ಕೆ ಕೊಚ್ಚಿಕೊಂಡು ಬಂದಿದ್ದು, ಆತನನ್ನು ಗುಪ್ತಚರ ವಿಭಾಗಕ್ಕೆ ಹಸ್ತಾಂತರಿಸಲಾಗಿದೆ ಎಂದು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಅಧಿಕಾರಿಗಳು ತಿಳಿಸಿದ್ದಾರೆ.
‘ಸುಮಾರು 50 ವರ್ಷದ ಈ ವ್ಯಕ್ತಿ ಪಂಜಾಬ್ ಪ್ರಾಂತ್ಯದ ಕಸೂರ್ ಜಿಲ್ಲೆಯ ಗಂದಾ ಸಿಂಗ್ ವಾಲಾ ಎಂಬ ಹಳ್ಳಿಯಲ್ಲಿ ಪತ್ತೆಯಾಗಿದ್ದಾರೆ. ಸಂಕೇತ ಭಾಷೆಯ ಮೂಲಕ ಮಾತ್ರವೇ ಆತನೊಂದಿಗೆ ಸಂವಹಿಸಬಹುದಾಗಿದ್ದು, ತಾನೊಬ್ಬ ಹಿಂದೂ ಹಾಗೂ ಪ್ರವಾಹವು ತನ್ನನ್ನು ಇಲ್ಲಿಯವರೆಗೆ ಸೆಳೆದುಕೊಂಡು ಬಂದಿತು ಎಂದು ಆತ ಹೇಳಿದ್ದಾನೆ’ ಎಂದು ರಕ್ಷಣಾ ವಕ್ತಾರರು ಮಾಹಿತಿ ನೀಡಿದರು. ವೈದ್ಯಕೀಯ ಪರೀಕ್ಷೆಯ ಬಳಿಕ ಆತನನ್ನು ಗುಪ್ತಚರ ವಿಭಾಗಕ್ಕೆ ಹಸ್ತಾಂತರಿಸಲಾಗಿದೆ.
ಇದನ್ನೂ ಓದಿ : ಲೈಂಗಿಕ ದೌರ್ಜನ್ಯ ಪ್ರಕರಣ: ನಟ ಕೆವಿನ್ ಸ್ಪೇಸಿ ದೋಷಮುಕ್ತ..!