ಹುಬ್ಬಳ್ಳಿ : ವಾಣಿಜ್ಯ ನಗರಿ ಹುಬ್ಬಳ್ಳಿಯ ಬಹುತೇಕ ರಸ್ತೆಗಳು ಹಾಳಾಗಿದ್ದು ಎಲ್ಲಿ ನೋಡಿದಲ್ಲಿ ಬಿದ್ದ ತಗ್ಗು ಗುಂಡಿಗಳು. ಇದರಿಂದಾಗಿ ಸಾರ್ವಜನಿಕರು, ವಾಹನ ಸವಾರರು ಹಾಗೂ ಮಹಿಳೆಯರು ವಯೋವೃದ್ಧರು ರಸ್ತೆಗೆ ಇಳಿಯಲು ಸಾವಿರ ಸಾವಿರ ಸಲ ಯೋಚಿಸಬೇಕಾದ ಸ್ಥಿತಿ ಬಂದಿದೆ.
ಆದ್ದರಿಂದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಗೆ ಹಾಗೂ ಶಾಸಕರಿಗೆ, ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಿಗೆ ಸಾಕಷ್ಟು ಸಲ ದುರಸ್ತಿಗೆ ಆಗ್ರಹ ಮಾಡಿ ಮನವಿ ಕೊಟ್ಟರು ಏನು ಪ್ರಯೋಜನ ಆಗಿಲ್ಲ. ಆದ್ದರಿಂದ ಇಂದ ಉತ್ತರ ಕರ್ನಾಟಕ ಅಟೋ ಚಾಲಕರ ಸಂಘ ಹಾಗೂ ಹುಬ್ಬಳ್ಳಿ ಆಟೋ ಚಾಲಕರ ಸಂಘದ ವತಿಯಿಂದ ನಗರದ ಹಳೆ ಬಸ್ ನಿಲ್ದಾಣ ಬಳಿ ತಗ್ಗು ಗುಂಡಿಯ ರಸ್ತೆಯಲ್ಲಿ ಅನಾಥ ರಸ್ತೆ ಅಂತಾ ನಾಮಕರಣ ಮಾಡಿ ವಿನೂತನ ಪ್ರತಿಭಟನೆ ಮಾಡಿದರು.
ಹುಬ್ಬಳ್ಳಿ ನಗರದಲ್ಲಿ ಕಣ್ಣು ಹಾಯಿಸಿದಷ್ಟೂ ದೂರ ಕಾಣುವ ಗುಂಡಿಗಳು. ಅವುಗಳಲ್ಲಿ ಸಂಗ್ರಹವಾಗಿರುವ ಕಪ್ಪು, ಕೆಮ್ಮಣ್ಣಿನ ನೀರು. ಅಲ್ಲಲ್ಲಿ ಚೆಲ್ಲಾಪಿಲ್ಲಿಯಾಗಿರುವ ಜಲ್ಲಿಕಲ್ಲು. ರಸ್ತೆ ಮಧ್ಯೆಯೇ ಹರಡಿಕೊಂಡಿರುವ ಕೆಸರಿನ ರಾಡಿ.
ಹೀಗೇ ರಸ್ತೆಗಳ ಅಧ್ವಾನ ಒಂದಲ್ಲಾ ಎರಡಲ್ಲ ಎರವೋ ಅವ್ಯವಸ್ಥೆಯ ಆಗರ.
ಕಿತ್ತೂರು ಚೆನ್ನಮ್ಮ ಸರ್ಕಲ್ ಬಳಿಯ ಮೇಲ್ಸುತುವೆ ಹಾಗೂ ಸ್ಮಾರ್ಟ್ ಕಾಮಗಾರಿ ಹೆಸರಿನಲ್ಲಿ ಎಲ್ಲವೋ ಅವೈಜ್ಞಾನಿಕ ಕಾಮಗಾರಿ, ಬೇಕಾಬಿಟ್ಟಿ ರಸ್ತೆ ಅಡ್ಡಿ ಅರ್ಧಮರ್ಧ ಕಾಮಗಾರಿ ಮಾಡಿ ಕೈ ಬಿಡುವುದು. ಇದರಿಂದಾಗಿ ಜನರು ಕೈಯಲ್ಲಿ ಜೀವ ಇರಿಸಿಕೊಂಡು ಸಂಚಾರ ಮಾಡಬೇಕಾದ ಸ್ಥಿತಿ ಬಂದಿದೆ. ನಗರದದ ರಾಣಿ ಚೆನ್ನಮ್ಮ, ಸಂಗೋಳ್ಳಿ ರಾಯಣ್ಣ , ಭಗತ್ ಸಿಂಗ್ ಸರ್ಕಲ್ ಹಾಗೂ ನೀಲಿಂಜನ್ ರಸ್ತೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಕಚೇರಿ ಸುತ್ತಮುತ್ತಲಿನ ಪ್ರದೇಶಗಳ ರಸ್ತೆ ಸಂಪೂರ್ಣ ಹಾಳಾಗಿ ಹೋಗಿವೆ.
ಆದ್ದರಿಂದ ಈಗಲಾದರು ಹುಬ್ಬಳ್ಳಿ ಡ ಮಹಾನಗರ ಪಾಲಿಕೆ ಮೇಯರ್ ರಾಮಣ್ಣ ಬಡಿಗೇರ, ಪಾಲಿಕೆ ಆಯುಕ್ತರು ಹಾಗೂ ಶಾಸಕರು ಸಂಬಂಧಿಸಿದ ಮಹಾನಗರ ಪಾಲಿಕೆ ಸದಸ್ಯರು ರಸ್ತೆ ದುರಸ್ತಿ ಮಾಡುತ್ತಾರೆಯೇ ಎಂಬದನ್ನ ನೋಡಬೇಕು. ಆದರೆ ಉತ್ತರ ಕರ್ನಾಟಕ ಅಟೋ ಚಾಲಕರ ಸಂಘಯ ಅಧ್ಯಕ್ಷರು ಶೇಖರಯ್ಯಾ ಮಠಪತಿ ಮಾತನಾಡಿ, ಈಗ ರಸ್ತೆಗೆ ಅನಾಥ ರಸ್ತೆ ಅಂತಾ ನಾಮಕರಣ ಮಾಡಲಾಗಿದೆ. ಕೂಡಲೇ ಮಹಾನಗರ ಪಾಲಿಕೆ ರಸ್ತೆಗಳನ್ನ ದುರಸ್ತಿ ಮಾಡಬೇಕು ಎಂದು ಆಗ್ರಹಿಸಿದರು.