ಬೆಳಗಾವಿ / ಹಾಸನ : ಮತದಾನದ ವೇಳೆ ವೃದ್ದೆಯೊಬ್ಬಳು ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಸವದತ್ತಿ ಮತ ಕ್ಷೇತ್ರದ ಯರಝರ್ವಿ ಗ್ರಾಮದಲ್ಲಿ ಘಟನೆ ಈ ವಿದ್ರಾವಕ ಘಟನೆ ನಡೆದಿದೆ.
ಮದ್ಯಾಹ್ನ ಯರಝರ್ವಿಯ ಗ್ರಾಮದ ಬೂತ್ ಸಂಖ್ಯೆ 48 ರಲ್ಲಿ ಮತದಾನಕ್ಕೆ ಬಂದಿದ್ದ ಪಾರವ್ವ ಸಿದ್ನಾಳ (68) ವೃದ್ದೆ ಏಕಾಎಕಿ ಲೋ ಬಿಪಿ ಯಿಂದ ಪಾರವ್ವ ಸ್ಥಳದಲ್ಲಿ ಮೃತಪಟ್ಟ ದುರ್ದೈವಿ ಆಗಿದ್ದಾಳೆ.
ಈ ಹಿನ್ನೆಲೆ ಕೆಲ ಕಾಲ ಮತದಾರರು ಭಯಭೀತರಾಗಿದ್ದರು. ತದ ನಂತರ ಪೋಲಿಸ್ ವೃದ್ದೆಯ ಶವವನ್ನು ಮನೆಗೆ ಸ್ಥಳಾಂತರ ಮಾಡಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಮತದಾನ ಮಾಡಿ ಹೊರ ಬರುತ್ತಿದ್ದಂತೆ ವ್ಯಕ್ತಿ ಸಾವು.
ಹಾಸನ ಜಿಲ್ಲೆಯಲ್ಲಿಯೂ ಇಂತದ್ದೆ ಹೃದಯ ವಿದ್ರಾವಕ ಘಟನೆ ನಡೆದಿದ್ದು, ಬೇಳೂರು ತಾಲೂಕಿನ ಚಿಕ್ಕೋಲೆ ಗ್ರಾಮದ 49 ವರ್ಷದ ಜಯಣ್ಣ ಎಂಬುವವರು, ಮತದಾನ ಮಾಡಿ ಹೊರ ಬರುತ್ತಿದ್ದಂತೆ, ಹೃದಯಾಘಾತ ಸಂಭವಿಸಿ, ಕೊನೆ ಉಸಿರೆಳೆದಿದ್ದಾರೆ.
ಮತದಾನ ಮಾಡಿ ಮಾದರಿಯಾದ ವೃದ್ಧೆ
ಮತದಾನ ಮಾಡುವುದು ನನ್ನ ಧರ್ಮ, ಮತದಾನವನ್ನು ಎಲ್ಲರು ಮಾಡಬೇಕು. ಯಾರು ಮತದಾನದಿಂದ ದೂರ ಇರಬಾರದು ಎಂದು 98 ವರ್ಷದ ಅಜ್ಜಿಯೊಬ್ಬರು ಮತಗಟ್ಟೆಗೆ ಬಂದ ತಮ್ಮ ಹಕ್ಕು ಚಲಾಯಿಸಿದರು.