ಬೆಂಗಳೂರು: ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಡಿಸಿಎಂ ಡಿಕೆ ಶಿವಕುಮಾರ್ ನಡುವಿನ ಟಾಕ್ ವಾರ್ ತಾರಕಕ್ಕೇರ್ತಿದೆ. ಒಕ್ಕಲಿಗ ನಾಯಕರ ವೈಯಕ್ತಿಕ ವಾರ್ ಯಾವಮಟ್ಟಕ್ಕೆ ಹೋಗ್ತಿದೆ ಅಂತಲೇ ಗೊತ್ತಾಗ್ತಿಲ್ಲ, ಪದೇ ಪದೇ ಮುಖ್ಯಮಂತ್ರಿ ಆಗೋ ಆಸೆ ವ್ಯಕ್ತಪಡಿಸ್ತಿರುವ ಡಿಕೆಶಿ ಸಮುದಾಯದ ಬೆಂಬಲ ಕೋರಿ ಸಿಎಂ ಆಗ್ತೀನಿ ಎಂದಿದ್ದಾರೆ. ಡಿಕೆ ವಿರುದ್ಧ ಕುಮಾರಸ್ವಾಮಿ ಆರೋಪಗಳ ಸುರಿಮಳೆ ಸುರಿಸ್ತಿದ್ದು ಹೆದರಿಸಿ ಬೆದರಿಸಿ ಆಸ್ತಿ ಕೊಳ್ಳೆಹೊಡೆದು ರೇಟ್ ಫಿಕ್ಸ್ ಮಾಡಿದ ಆರೋಪ ಮಾಡ್ತಿದ್ರೆ ಡಿಕೆಶಿ ಚರ್ಚೆಗೆ ಪಂಥಾಹ್ವಾನ ರವಾನಿಸಿದ್ದಾರೆ.
ಜೋಡೆತ್ತುಗಳಂತಿದ್ದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಡಿಸಿಎಂ ಡಿಕೆ ಶಿವಕುಮಾರ್ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರ ಪತನವಾದ್ಮೇಲೆ ದುಶ್ಮನ್ ಗಳಾಗಿದ್ದಾರೆ. ಕಳೆದ 4 ವರ್ಷದಿಂದಲೂ ಇಬ್ಬರು ಒಕ್ಕಲಿಗ ನಾಯಕರ ಪರಸ್ಪರ ಆರೋಪ ಪ್ರತ್ಯಾರೋಪಗಳ ಸುರಿಮಳೆ ಸುರಿಸ್ತಿದ್ದಾರೆ. ಈ ವಾಗ್ಯುದ್ದ ಹೆಚ್ಚಾಗಿದ್ದು ಮೈತ್ರಿ ನಾಯಕರು ಆದಿಚುಂಚನಗಿರಿ ಮಠದಲ್ಲಿ ಶಕ್ತಿ ಪ್ರದರ್ಶನ ಮಾಡಿದ್ಮೇಲೆ. ಡಿಸಿಎಂ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗೋ ಆಸೆಯನ್ನ ಕಾಂಗ್ರೆಸ್ ಸರ್ಕಾರ ಬಂದಾಗ್ಲಿಂದ ವ್ಯಕ್ತಪಡಿಸ್ತಾನೆ ಇದ್ದಾರೆ. ಇದೀಗ ಮತ್ತೊಮ್ಮೆ ಸಿಎಂ ಆಗೋ ಮಾತನಾಡಿದ್ದಾರೆ.
ಡಿಕೆಶಿ ಸಿಎಂ ಆಗೋ ಇಂಗಿತ ವ್ಯಕ್ತಪಡಿಸ್ತಿದ್ದಂತೆ ಮಾಜಿ ಸಿಎಂ ಕುಮಾರಸ್ವಾಮಿ ಕೆರಳಿ ಕೆಂಡವಾಗಿದ್ದಾರೆ. ಡಿಕೆಶಿ ಎಷ್ಟು ಕುಟುಂಬಗಳನ್ನು ಆಸ್ತಿ ದುರಾಸೆಗೆ ಏನೇನು ಮಾಡಿದ್ದೀರಿ ಸಾಕ್ಷಿ ಕೊಡಬಲ್ಲೇ, ಅಪಾರ್ಟ್ಮೆಂಟ್ ಗಳಿಗೆ NOC ಕೊಡಲು ತಮ್ಮನಿಗೆ ಮತ ಹಾಕಿ ಅಂತ ಧಮ್ಕಿ ಹಾಕ್ತಿದ್ದಾರೆ. ದೇವೇಗೌಡರನ್ನು ಯಾವ ತಪ್ಪಿಗೆ ಅಧಿಕಾರದಿಂದ ಇಳಿಸಿದ್ರಿ ನೀವು, ನಮ್ಮ ಮೈತ್ರಿ ಬಗ್ಗೆ ನಾಯಿ ಹಸಿದಿತ್ತು, ಅನ್ನ ಹಳಸಿತ್ತು ಅಂತೀರಿ. ಅವತ್ತು ನೀವು ನಮ್ಮ ಮನೆ ಬಾಗಿಲಿಗೆ ಬಂದ್ರಲ್ಲಾ ನ ಆಗ ನೀವು ನಾಯಿ ಸ್ಥಾನದಲ್ಲಿ ಇದ್ದರಾ, ಹಳಸಿದ ಅನ್ನದ ಸ್ಥಾನದಲ್ಲಿದ್ರಾ ಅಂತ ಟಾಂಗ್ ಕೊಟ್ಟಿದ್ದಾರೆ.
ಇಷ್ಟಕ್ಕೆ ನಿಲ್ಲಿಸದ ಕುಮಾರಸ್ವಾಮಿ ಡಿಕೆಶಿ ವಿರುದ್ಧ ಮತ್ತಷ್ಟು ಆರೋಪಗಳ ಸುರಿಮಳೆಗೈದಿದ್ದಾರೆ ಡಿಕೆಶಿ ರಾಜ್ಯದ ಜನರ ಹಣವನ್ನು ಅವರ ಜೇಬಿನಿಂದಲೇ ಫಿಕ್ ಪಾಕೆಟ್ ಮಾಡ್ತಿದ್ದಾರೆ. ಎಲ್ಲದಕ್ಕೂ ರೇಟ್ ಫಿಕ್ಸ್ ಮಾಡಿದ್ದಾರೆ ಕೊಡಲಿಲ್ಲ ಅಂದ್ರೆ ಧಮ್ಕಿ ಹಾಕ್ತಾರೆ, ನಿಮ್ಮತರ ಕಲ್ಲು ಬಂಡೆಗಳನ್ನು ಕದ್ದು ವಿದೇಶಕ್ಕೆ ಕಳಿಸ್ತಿಲ್ಲ ಕೊಳ್ಳೆ ಹೊಡೆದಿಲ್ಲ. ಸಾವಿರಾರು ಎಕರೆ ಭೂಮಿ ಕಬಳಿಸಿಲ್ಲ ಯಾರಿಗೂ ಹೆದರಿಸಿ ಬೆದರಿಸಿಲ್ಲ. ನನ್ನ ಎಲ್ಲಾ ಆಸ್ತಿಗೂ ದಾಖಲೆ ಇದೆ ನಮ್ಮ ತೋಟದಲ್ಲಿ ಬಂದು ನೋಡ್ರಿ, ಏನೇನು ಬೆಳೆ ಬೆಳೆದಿದ್ದೀನಿ ಎಷ್ಟು ಲಾಭ ಬಂದಿದೆ ಅಂತ ನಿಮ್ಮತರ ಸುಳ್ಳು ಹೇಳಿ ಸಂಪಾದನೆ ಮಾಡಿಲ್ಲ ಅಂತ ಅಕ್ರಮ ಆಸ್ತಿ ಬಗ್ಗೆ ಆರೋಪ ಮಾಡಿದ್ದಾರೆ.
ಕುಮಾರಸ್ವಾಮಿ ಆರೋಪಗಳಿಗೆ ಡಿಸಿಎಂ ಡಿಕೆ ಶಿವಕುಮಾರ್ ಟಾಂಗ್ ಕೊಟ್ಟಿದ್ದಾರೆ ನಾವು ಯಾರಿಗೂ ರೇಟ್ ಫಿಕ್ಸ್ ಮಾಡಿಲ್ಲ. ನಿನಗೆ ರೇಟ್ ಫಿಕ್ಸ್ ಮಾಡಿ ಅಭ್ಯಾಸ ಅನ್ಸುತ್ತೆ, ನನ್ನ ಆಸ್ತಿಯ ಎಲ್ಲ ದಾಖಲೆ ತೆಗೆದುಕೊಂಡು ಬರ್ತಿನಿ ನಿಂದೆಷ್ಟು, ನಿಮ್ಮಣ್ಣನದೆಷ್ಟು ಚರ್ಚೆ ಮಾಡೋಣ ಬಾ. ವಿಧಾನಸಭೆಯಲ್ಲೇ ಚರ್ಚೆ ಮಾಡೋಣ 48 ಎಕರೆ ಇದೆಯೋ, ಸಾವಿರ ಇದೆಯೋ ಚರ್ಚೆ ಮಾಡೋಣ ಬಾ, ನೀನು ಲೋಕಸಭೆ ಚುನಾವಣೆಯಲ್ಲಂತು ಗೆಲ್ಲಲ್ಲ ರಾಜ್ಯದಲ್ಲೇ ಇರ್ತೀಯ ಚರ್ಚೆಗೆ ಬಾ ಅಂತ ಏಕವಚನದಲ್ಲೇ ಪಂಥಾಹ್ವಾನ ಕೊಟ್ಟಿದ್ದಾರೆ