ಟಾಲಿವುಡ್ ಸ್ಟಾರ್ ನಟ, ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಸಖತ್ ಬ್ಯುಸಿಯಾಗಿದ್ದಾರೆ. ಸಿನಿಮಾಗಳ ಜೊತೆ ಜೊತೆಗೆ ರಾಜಕೀಯದಲ್ಲೂ ಪವನ್ ತೊಡಗಿಕೊಂಡಿರೋದ್ರಿಂದ ನಿತ್ಯ ಹತ್ತಾರು ಕಡೆ ಸುತ್ತಾಟ ನಡೆಸುತ್ತಲೆ ಇರುತ್ತದೆ. ಆದರೆ ಪವನ್ ಕಲ್ಯಾಣ್ ಪ್ರಣಕ್ಕೆ ಸಂಚಕಾರವಿದ್ದು ಎಚ್ಚರಿಕೆಯಿಂದ ಇರುವಂತೆ ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.
ಜನಸೇನಾ ಪಕ್ಷದ ಮೂಲಕ ಪವನ್ ಕಲ್ಯಾಣ್ ಅವರಿಗೆ ಈ ವರ್ಷ ದೊಡ್ಡ ಗೆಲುವು ಸಿಕ್ಕಿತು. ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯಲ್ಲಿ ಜನಸೇನಾ ಪಕ್ಷ ಜಯಭೇರಿ ಬಾರಿಸಿತು. ಸಿನಿಮಾರಂಗದಲ್ಲೂ ಪವನ್ ಕಲ್ಯಾಣ್ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಇದೆಲ್ಲದರ ನಡುವೆ ಅವರ ಹತ್ಯೆಗೆ ಕೆಲವರು ಸ್ಕೆಚ್ ಹಾಕುತ್ತಿದ್ದಾರೆ ಎಂಬುದು ಆತಂಕಕಾರಿ ವಿಷಯ ಬೆಳಕಿಗೆ ಬಂದಿದ್ದು ಈ ಸುದ್ದಿ ಕೇಳಿ ಪವನ್ ಕಲ್ಯಾಣ್ ಅಭಿಮಾನಿಗಳು ಕಂಗಲಾಗಿದ್ದಾರೆ.
ಕಿಡಿಗೇಡಿಗಳು ಪವನ್ ಕಲ್ಯಾಣ್ ಅವರ ಹತ್ಯೆಗೆ ಸಂಚು ರೂಪಿಸುತ್ತಿರುವ ಕಾರಣದಿಂದ ಪೊಲೀಸರು ಭದ್ರತೆ ಹೆಚ್ಚಿಸಬೇಕು ಎಂದು ಗುಪ್ತಚರ ಇಲಾಖೆಯ ಅಧಿಕಾರಿಗಳು ಸಂದೇಶ ನೀಡಿದ್ದಾರೆ ಎನ್ನಲಾಗಿದೆ. ಈ ಮಾಹಿತಿಯನ್ನು ಜನಸೇನಾ ಪಕ್ಷದ ಮೂಲಗಳು ಖಚಿತಪಡಿಸಿವೆ ಎಂದು ಮಾಧ್ಯಮಗಳಲ್ಲಿ ವರದಿ ಆಗಿದೆ. ಅಷ್ಟಕ್ಕೂ ಪವನ್ ಕಲ್ಯಾಣ್ ಅವರ ಹತ್ಯೆಗೆ ಸಂಚು ರೂಪಿಸುತ್ತಿರುವವರು ಯಾರು ಎಂಬುದು ಸದ್ಯಕ್ಕೆ ಬಹಿರಂಗವಾಗಿಲ್ಲ.