ಸಾಮಾನ್ಯವಾಗಿ ಪ್ರತಿಷ್ಠಿತ ಬಡಾವಣೆ ಅಂದ್ರೆ ಹೇಗಿರುತ್ತೆ ರ ಸೈಟ್ ನ ಅಳತೆ, ರಸ್ತೆ ,ಚರಂಡಿ, ಪಾರ್ಕ್ ಸೇರಿದಂತೆ ಹಲವು ಮೂಲಭೂತ ಸೌಕರ್ಯಗಳನ್ನಲ್ಲ ನೀಡಿ ಸೈಟ್ ಮಾರಾಟವನ್ನು ಮಾಡಿರುವುದನ್ನು ನೀವು ನೋಡಿರ್ತೀರ ಕೇಳಿರ್ತೀರ ಆದರೆ ಇಲ್ಲೊಂದು ಕಡೆ ಡಂಪಿಂಗ್ ಯಾಡ್ ಜಾಗವನ್ನು ತೋರಿಸಿ ಅಧಿಕಾರಿಗಳ ಜೊತೆ ಶಾಮೀಲಾಗಿ ಬಡಾವಣೆ ಮಾಡದೇನೇ ಖಾತೆ ಮಾಡಿ ಕೋಟಿ ಕೋಟಿ ಸರ್ಕಾರಕ್ಕೆ ವಂಚನೆ ಮಾಡುತ್ತಿರುವ ಘಟನೆ ಬೆಳಕಿಗೆ ಬಂದಿದೆ..
ಅಷ್ಟಕ್ಕೂ ಬಡಾವಣೆ ಹೆಸರಲ್ಲಿ ಮಾಡುತ್ತಿರುವ ಅನಾಚಾರ ಆದರೇನು? ಅಕ್ರಮ ಆದರೆ ಏನು ಅಂತೀರಾ ಸ್ಟೋರಿ ನೋಡಿ.. ಹೌದು ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಚಂದಾಪುರ ಪುರಸಭೆ ವ್ಯಾಪ್ತಿಗೆ ಬರುವ ಕೀರ್ತಿ ಲೇಔಟ್ ವಾರ್ಡ್ ನಂಬರ್ 19ರಲ್ಲಿ ಬಡಾವಣೆ ಮಾಡುವುದಾಗಿ ನಂಬಿಸಿ ಡಂಪಿಂಗ್ ಯಾರ್ಡ್ ತೋರಿಸಿ ಸೈಟ್ ಮಾರಾಟ ಮಾಡುತ್ತಿರುವುದಾಗಿ ಬೆಳಕಿಗೆ ಬಂದಿದೆ.
ಇನ್ನು ಅಧಿಕಾರಿಗಳು ಸೂಕ್ತ ದಾಖಲೆಗಳನ್ನು ಕೊಟ್ಟರೆ ಖಾತೆಗಳನ್ನು ಮಾಡುವುದಿಲ್ಲ .. ಅದಲ್ಲದೆ ಲೇಔಟ್ ಆಫ್ರುವಲ್ ಸ್ಕೆಚ್ ,ಅದು ಸರಿ ಇಲ್ಲ ಇದು ಸರಿ ಇಲ್ಲ ಅಂತ ಅಧಿಕಾರಿಗಳು ರೈತರಿಗೆ ಆಟ ಆಡಿಸ್ತಾರೆ ಅದೇ ರಿಯಲ್ ಎಸ್ಟೇಟ್ ಮಾಪಿಯಾಗಳಿಗೆ ಶಾಮಿಲ್ ಆಗಿ ಯಾವುದೇ ದಾಖಲೆ ಕೇಳದೆ ಬಡಾವಣೆಗೆ ಅನುಮತಿ ನೀಡಿ ಖಾತೆಗಳನ್ನು ಮಾಡಿಕೊಟ್ಟಿದ್ದಾರೆ ಈ ಬಗ್ಗೆ ಚಂದಾಪುರ ಪುರಸಭೆ ಸಿಇಒ ಶ್ರೀನಿವಾಸ್ ಕೇಳಿದರೆ ಸರ್ ಇದು ನಮ್ಮ ಗಮನಕ್ಕೆ ಬಂದಿಲ್ಲ ನಮ್ಮ ಕೆಳ ಹಂತದ ಅಧಿಕಾರಿಗಳು ಪರಿಶೀಲನೆ ಮಾಡಿದ್ದಾರೆ.
ಈ ಬಗ್ಗೆ ಸ್ಥಳೀಯ ರು ದೂರು ಕೊಟ್ಟಿದ್ದಾರೆ ಪರಿಶೀಲನೆ ಮಾಡಿ ಕಾನೂನು ಕ್ರಮ ಕೈಗೊಳ್ಳುತ್ತೇವೆ ಅಂತ ತಿಳಿಸುತ್ತಿದ್ದಾರೆ ಆದರೆ ಲಕ್ಷಾಂತರ ಹಣ ಪಡೆದ ಅಧಿಕಾರಿಗಳು ಸ್ಪಾಟ್ ಇನ್ಫೆಕ್ಷನ್ ಮಾಡದೆ ಎಸಿ ರೂಮುಗಳಲ್ಲಿ ಕೂತು ದಪ್ಪ ಚರ್ಮದ ಅಧಿಕಾರಿಗಳು ಸಂಬಳ ಎಣಿಸಿ ಮನೆಗೆ ಹೋಗುತ್ತಿದ್ದಾರೆ ಆದರೆ ಸಮಸ್ಯೆ ಮಾತ್ರ ಬಗೆಹರಿಸುತ್ತಿಲ್ಲ ಅಂತ ಸ್ಥಳೀಯರು ಆಕ್ರೋಶ ಅವರ ಹಾಕುತ್ತಿದ್ದಾರೆ.
ಒಟ್ಟಿನಲ್ಲಿ ಮೈಸೂರಿನ ಮುಡಾ ಹಗರಣದ ಮಾದರಿಯಲ್ಲಿ ಆನೇಕಲ್ ತಾಲೂಕಿನ ಚಂದಾಪುರ ಪುರಸಭೆಯ ವ್ಯಾಪ್ತಿಯಲ್ಲಿ ಹಣ ಕೊಟ್ರೆ ಏನ್ ಬೇಕಾದ್ರು ಮಾಡ್ತಾರೆ ಅನ್ನೋದಿಕ್ಕೆ ಇದೊಂದು ನಿದರ್ಶನ ನೂರಾರು ಕನಸು ಕಟ್ಟಿ ಮನೆ ತಗೋಬೇಕು ಮನೆ ಕಟ್ಟಬೇಕು ಎಂದು ಅವರಿಗೆ ಮಕ್ಮಲ್ ಟೋಪಿ ಹಾಕಲು ಚಂದಾಪುರ ಪುರಸಭೆ ಅಧಿಕಾರಿಗಳು ಮುಂದಾಗಿದ್ದಾರೆ, ಇನ್ನಾದ್ರೂ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಜರುಗಿಸಲು ಅನ್ನೋದೇ ನಮ್ಮ ಆಶಯ..