ಬೈಕ್ ದುರಸ್ತಿ ಸರಿಯಾಗಿ ಮಾಡಿಲ್ಲ ಅಂತ ಶೋರೂಮಿಗೆ ಬೆಂಕಿ ಹಚ್ಚಿದ ಘಟನೆ ಕಲಬುರಗಿಯಲ್ಲಿ ನಡೆದಿದೆ..ನಗರದ ಹುಮ್ನಾಬಾದ್ ಸರ್ಕಲ್ ಬಳಿಯ ಎಲೆಕ್ಟ್ರಿಕ್ ಬೈಕ್ ಶೋರೂಮಲ್ಲಿ ಘಟನೆ ನಡೆದಿದ್ದು ಮಹ್ಮದ್ ನದೀಮ್ ಎಂಬಾತನೇ ಬೆಂಕಿ ಇಟ್ಟಿದ್ದು ಅತ ಗೊತ್ತಾಗಿದೆ.
ಬೈಕ್ ರಿಪೇರಿ ವಿಚಾರವಾಗಿ ಸಿಬ್ಬಂದಿ ಜೊತೆ ವಾಗ್ವಾದ ಮಾಡಿ ನಂತ್ರ ಪೆಟ್ರೋಲ್ ಸುರಿದು ಶೋರೂಮಿಗೆ ಬೆಂಕಿ ಇಟ್ಟಿದ್ದಾನೆ..ಆರೋಪಿಯನ್ನ ಬಂಧಿಸಿದ ಚೌಕ್ ಠಾಣೆ ಪೋಲೀಸರು ತನಿಖೆ ಮುಂದುವರೆಸಿದ್ದಾರೆ..