ಚಿತ್ರರಂಗದಲ್ಲಿ ನಡೆಯುತ್ತಿರುವ ಕಾಸ್ಟಿಂಗ್ ಕೌಚ್ ಬಗ್ಗೆ ಈಗಾಗಲೇ ಹಲವು ನಟಿಯರು ಓಪನ್ ಆಗಿ ಪ್ರತಿಕ್ರಿಯಿಸಿದ್ದಾರೆ. ಎಂದೊ ನಡೆದ ಘಟನೆಯನ್ನು ಹೇಳುವ ಮೂಲಕ ಕಾಸ್ಟಿಂಗ್ ಕೌಚ್ ಬಗ್ಗೆ ತಿರುಗಿ ಬಿದ್ದಿದ್ದಾರೆ. ಈ ಕಾಸ್ಟಿಗ್ ಕೌಚ್ ಅನ್ನೊದು ನಟಿಯರಿಗೆ ಮಾತ್ರವಲ್ಲ ನಟಿರಿಗೂ ಕೆಲವೊಮ್ಮೆ ಆಗುತ್ತಿದೆ. ಇದೀಗ ‘ಅನಿಮಲ್’ ಸಿನಿಮಾದ ನಟ ಸಿದ್ಧಾಂತ್ ಕಾರ್ಣಿಕ್ ತಮಗಾದ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದಾರೆ.
ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಸಿದ್ದಾಂತ್ ಕಾರ್ಣಿಕ್, ಅವಕಾಶ ಕೇಳಲು ಹೋದಾಗ ವ್ಯಕ್ತಿಯೊಬ್ಬನಿಂದ ಕಾಸ್ಟಿಂಗ್ ಕೌಚ್ ಅನುಭವ ಆಗಿತ್ತು ಎಂದು ಶಾಕಿಂಗ್ ಹೇಳಿಕೆ ನೀಡಿದ್ದಾರೆ.
41 ವರ್ಷ ವಯಸ್ಸಿನ ಸಿದ್ಧಾಂತ್ ಕಾರ್ಣಿಕ್ ಕಿರುತೆರೆಯ ಹಲವು ಸೀರಿಯಲ್ಗಳಲ್ಲಿ ನಟಿಸಿ ಖ್ಯಾತಿ ಘಳಿಸಿದ್ದಾರೆ. ಆದರೆ ಚಿತ್ರರಂಗಕ್ಕೆ ಬಂದಾಗ ಅವರಿಗೆ ಯಾವುದೇ ಗಾಡ್ ಫಾದರ್ ಇರಲಿಲ್ಲ. ಆಗ ಅವಕಾಶ ಕೇಳಿಕೊಂಡು ವ್ಯಕ್ತಿಯೊಬ್ಬರ ಬಳಿ ಸಿದ್ಧಾಂತ್ ಹೋಗಿದ್ದರು. ರಾತ್ರಿ ಮನೆಗೆ ಬರಲು ಹೇಳಿದ್ದ ಆತನಿಂದ ಅನುಮಾನದ ವರ್ತನೆ ಎದುರಾಗಿತ್ತು.
‘ಅದು 2005ರ ಸಮಯ. ಆಗ ನನಗೆ 22 ವರ್ಷ ವಯಸ್ಸು. ಆಗಷ್ಟೇ ನಾನು ಚಿತ್ರರಂಗಕ್ಕೆ ಕಾಲಿಟ್ಟಿದ್ದೆ. ಸಂಘಟಕರೊಬ್ಬರನ್ನು ನಾನು ಭೇಟಿಯಾದೆ. ನನ್ನ ಬಗೆಗಿನ ವಿವರಗಳನ್ನು ಹಿಡಿದುಕೊಂಡು ರಾತ್ರಿ 10.30ಕ್ಕೆ ಮನೆಗೆ ಬರುವಂತೆ ಆತ ಹೇಳಿದೆ. ನನಗೆ ಸ್ವಲ್ಪ ವಿಚಿತ್ರ ಎನಿಸಿತು. ಆದರೂ ಅಲ್ಲಿಗೆ ಹೋದೆ. ಮನೆಯಲ್ಲಿ ಆತನ ಫ್ಯಾಮಿಲಿ ಫೋಟೋ ನೋಡಿದ ಬಳಿಕ ಅದು ಸುರಕ್ಷಿತ ಜಾಗ ಎನಿಸಿತು. ಆದರೆ ಮಾತುಕಥೆ ಶುರು ಮಾಡುತ್ತಾ ಆತ ರಾಜಿಯಾಗಬೇಕು ಎಂದು ಹೇಳಿದ’ ಎಂದಿದ್ದಾರೆ ಸಿದ್ಧಾಂತ್ ಕಾರ್ಣಿಕ್.
‘ಚಿತ್ರರಂಗದ ನಿಯಮಗಳ ಬಗ್ಗೆ ಆತ ವಿವರಿಸಿದ. ರಾಜಿಯಾಗಬೇಕು ಎಂಬ ಬಗ್ಗೆ ಸಣ್ಣ ಸುಳಿವು ನೀಡಿದ. ರಾಜಿ ಆಗುವ ತನಕ ಅವಕಾಶ ಸಿಗುವುದಿಲ್ಲ ಅಂತ ಹೇಳಿದ. ನಾನು ಆಗ ಚಿಕ್ಕವನಾಗಿದ್ದೆ. ಆತ ನನ್ನ ಹತ್ತಿರಕ್ಕೆ ಬಂದ. ಆಗ ನಾನು ಇದಕ್ಕೆಲ್ಲ ಸಿದ್ಧನಿಲ್ಲ ಅಂತ ಹೇಳಿದೆ. ನನ್ನ ವೃತ್ತಿಜೀವನವನ್ನು ನಾಶ ಮಾಡುವುದಾಗಿ ಆತ ಬೆದರಿಕೆ ಹಾಕಿದ. ಆದರೆ ನಾನು ಅದಕ್ಕೆಲ್ಲ ಹೆದರದೇ ಹೊರಬಂದೆ’ ಎಂದು ಸಿದ್ಧಾಂತ್ ಕಾರ್ಣಿಕ್ ಹೇಳಿದ್ದಾರೆ.
2023ರಲ್ಲಿ ಸಿದ್ಧಾಂತ್ ಕಾರ್ಣಿಕ್ ಅವರಿಗೆ ದೊಡ್ಡ ಗೆಲುವು ಸಿಕ್ಕಿತು. ‘ಆದಿಪುರುಷ್’ ಸಿನಿಮಾದಲ್ಲಿ ವಿಭೀಷಣನ ಪಾತ್ರ ಮಾಡಿ ಅವರು ಗಮನ ಸೆಳೆದರು. ನಂತರ ಬಿಡುಗಡೆ ಆದ ‘ಅನಿಮಲ್’ ಸಿನಿಮಾದಲ್ಲಿ ನೆಗೆಟಿವ್ ಪಾತ್ರದಲ್ಲಿ ಮಿಂಚಿದ್ದರು. ಅನಿಮಲ್ ಸಿನಿಮಾ ಹಿಟ್ ಆದ ಬಳಿಕ ಸಿದ್ದಾಂತ್ ಗೆ ಸಾಕಷ್ಟು ಸಿನಿಮಗಳ ಆಫರ್ ಗಳು ಬರುತ್ತಿವೆ.